ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಮಹಿಳೆ ಸಾವು, ವೈದ್ಯರ ವಿರುದ್ಧ ಕುಟುಂಬಸ್ಥರ ಪ್ರತಿಭಟನೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 21; ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮಹಿಳೆ ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಶಾಸಕ ರಾಜೇಂದ್ರನ್ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ವೈದ್ಯರಿಂದ ಮಾಹಿತಿ ಪಡೆದರು.

ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಓರಿಯಂಟ್ ಲೈನ್ ಕೊರಮಂಡಲ್ ಬಡಾವಣೆ ನಿವಾಸಿ ದೀಪಾ ಎಂಬುವರು ಮೃತಪಟ್ಟ ಮಹಿಳೆ. ಶನಿವಾರ ಬೆಳಗ್ಗೆ 6 ಗಂಟೆಗೆ ತೀವ್ರ ನಿಶ್ಯಕ್ತಿಯಿಂದ ಕುಸಿದ ಬಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು.

ಚಿಕ್ಕಬಳ್ಳಾಪುರ; ಕೆಲಸ ಖಾಲಿ ಇದೆ, ಫೆ. 28ರೊಳಗೆ ಅರ್ಜಿ ಹಾಕಿ ಚಿಕ್ಕಬಳ್ಳಾಪುರ; ಕೆಲಸ ಖಾಲಿ ಇದೆ, ಫೆ. 28ರೊಳಗೆ ಅರ್ಜಿ ಹಾಕಿ

ಈ ವೇಳೆ ಪರೀಕ್ಷೆ ನಡೆಸಿದ ಅಮರನಾಥ್ ಎಂಬ ವೈದ್ಯರು ಮಹಿಳೆ ಈಗಾಗಲೇ ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ‌. ಕುಟುಂಬದವರು ಮೃತ ದೇಹವನ್ನು ಮನೆಗೆ ತಂದು ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಮೃತ ಮಹಿಳೆ ದೇಹ ಅಲುಗಾಡಿದ್ದಕ್ಕೆ ಅನುಮಾನಗೊಂಡು ಮತ್ತೆ ಆಸ್ಪತ್ರೆಗೆ ಕರೆತಂದಿದ್ದಾರೆ.

ಕೋಲಾರ; ಶಿಕ್ಷಕಿ, ಆಶಾ ಕಾರ್ಯಕರ್ತೆ ಬೆದರಿಸಿ ದರೋಡೆ ಕೋಲಾರ; ಶಿಕ್ಷಕಿ, ಆಶಾ ಕಾರ್ಯಕರ್ತೆ ಬೆದರಿಸಿ ದರೋಡೆ

Family Members Protest In KGF

ಆಗ ಆಸ್ಪತ್ರೆಯ ಮುಖ್ಯ ವೈದ್ಯ ಶಿವಕುಮಾರ್ ತಪಾಸಣೆ ನಡೆಸಿ 30 ನಿಮಿಷ ಹಿಂದೆ ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ ಮೃತ ಮಹಿಳೆ ಸಂಬಂಧಿಕರು, ಮೊದಲು ತಪಾಸಣೆ ನಡೆಸಿದ ವೈದ್ಯ ಅಮರನಾಥ್ ನಿರ್ಲಕ್ಷ್ಯದಿಂದ ಮಹಿಳೆ ಸಾವುನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಎಸಿಬಿ ದಾಳಿ; ಕೋಲಾರ ಡಿಹೆಚ್‌ಓ ಮನೆಯಲ್ಲಿ ಸಿಕ್ಕಿದ್ದೇನು? ಎಸಿಬಿ ದಾಳಿ; ಕೋಲಾರ ಡಿಹೆಚ್‌ಓ ಮನೆಯಲ್ಲಿ ಸಿಕ್ಕಿದ್ದೇನು?

ಮೃತ ದೀಪಾಳ ಮಗುವನ್ನು ಎತ್ತಿಕೊಂಡು ಆಸ್ಪತ್ರೆ ಎದುರು ಕುಟುಂಬದವರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮಾಜಿ ಶಾಸಕ ರಾಜೇಂದ್ರನ್ ಭೇಟಿ ನೀಡಿ ಘಟನೆ ಕುರಿತು ವೈದ್ಯರಿಂದ ಮಾಹಿತಿ ಪಡೆದರು.

ಲೋ ಬಿಪಿ, ಉಸಿರಾಟದ ಸಮಸ್ಯೆಯಿಂದಲೇ ಮಹಿಳೆ ಸಾವುನ್ನಪ್ಪಿದ್ದಾರೆ ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದು ಮುಖ್ಯ ವೈದ್ಯ ಶಿವಕುಮಾರ್ ಸ್ಪಷ್ಟನೆ ನೀಡಿದರು. ಸ್ಥಳಕ್ಕೆ ಕೆಜಿಎಫ್‌ನ ರಾಬರ್ಟ್ ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

English summary
Family members of women protest in KGF govt hospital, Kolar and alleged that doctor negligence. Doctors said that it is the cases brought dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X