ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಿಂದ ಚುನಾವಣೆ ಅಖಾಡಕ್ಕೆ ಡಿಕೆ ರವಿ ತಾಯಿ?

By Mahesh
|
Google Oneindia Kannada News

Recommended Video

ಡಿ ಕೆ ರವಿಯವರ ತಾಯಿ ಗೌರಮ್ಮ ಕೋಲಾರದಿಂದ 2018ರ ಚುನಾವಣೆಗೆ ಸ್ಪರ್ಧೆ | Oneindia Kannada

ಕೋಲಾರ, ನವೆಂಬರ್ 13: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇದಕ್ಕಾಗಿ ಚುನಾವಣಾ ಕಣಕ್ಕಿಳಿದು ಹೋರಾಟ ನಡೆಸಲು ಅಭಿಮಾನಿಗಳು, ಬೆಂಬಲಿಗರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಡಿಕೆ ರವಿ ಅವರ ತಾಯಿ ಗೌರಮ್ಮ ಅವರನ್ನು ಕಣಕ್ಕಿಳಿಸಲು ಒತ್ತಡ ಹೇರಲಾಗುತ್ತಿದೆ.

ಡಿಕೆ ರವಿ ಆತ್ಮಹತ್ಯೆ ಹಿಂದಿರುವ ಕಾರಣವೇನು?ಡಿಕೆ ರವಿ ಆತ್ಮಹತ್ಯೆ ಹಿಂದಿರುವ ಕಾರಣವೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಕೋಲಾರದಿಂದ ಸ್ಪರ್ಧಿಸ ಲು ರವಿ ಅಭಿಮಾನಿಗಳು ಕೇಳಿಕೊಂಡಿರುವುದು ನಿಜ ಎಂದು ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದರು. ಆದರೆ, ಯಾವ ಪಕ್ಷದ ಬೆಂಬಲ ಕೋರುತ್ತಾರೆ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದರ ಸುಳಿವು ಬಿಟ್ಟುಕೊಡಲಿಲ್ಲ.

DK Ravi's mother Gowramma likely to contest Assembly Election

ಡಿ.ಕೆ. ರವಿ ಅವರ ಸಾವಿನ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಹೋರಾಟ ನಡೆಸಬೇಕಿದೆ ಎಂಬುದು ಅವರ ಬೆಂಬಲಿಗರ ಅನಿಸಿಕೆಯಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಡಿಕೆ ರವಿಯದು ಆತ್ಮಹತ್ಯೆ : ಅಂತಿಮ ಷರಾ ಬರೆದ ಸಿಬಿಐಡಿಕೆ ರವಿಯದು ಆತ್ಮಹತ್ಯೆ : ಅಂತಿಮ ಷರಾ ಬರೆದ ಸಿಬಿಐ

ರವಿ ಅವರ ಸಾವಿನ ಕುರಿತಾಗಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಕೋಲಾರದಲ್ಲಿ ಡಿ.ಕೆ. ರವಿ ಕೆಲಸ ಮಾಡಿದ್ದು, ಜನಾನುರಾಗಿಯಾಗಿದ್ದರು.ಕೋಲಾರದಿಂದ ಗೌರಮ್ಮ ಅವರು ಸ್ಪರ್ಧಿಸಿ, ನ್ಯಾಯಕ್ಕಾಗಿ ಹೋರಾಟ ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯ.

ಕೋಲಾರ ಡಿಸಿ ಆಗಿದ್ದೇ ಜೀವಕ್ಕೆ ಮುಳುವಾಯಿತೆ? ಕೋಲಾರ ಡಿಸಿ ಆಗಿದ್ದೇ ಜೀವಕ್ಕೆ ಮುಳುವಾಯಿತೆ?

ಕಮರ್ಷಿಯಲ್ ಟ್ಯಾಕ್ಸ್ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರ ಶವ ಮಾರ್ಚ್ 16, 2015ರಂದು ಬೆಂಗಳೂರಿನ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಸಿಬಿಐ ತನಿಖೆ ಕೈಗೊಂಡರೂ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ.

English summary
Deceased IAS officer DK Ravi's mother Gowramma hints at contesting upcoming assembly election 2018. Gowramma seeking justice for her son likely to contest from Kolar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X