• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರ; ವ್ಯಾಕ್ಸಿನ್ ಡ್ರೈ ರನ್ ಕಾರ್ಯಕ್ರಮ 2 ಬಾರಿ ಉದ್ಘಾಟನೆ!

By ಕೋಲಾರ ಪ್ರತಿನಿಧಿ
|

ಕೋಲಾರ, ಜನವರಿ 08: ಕೋವಿಡ್ ವ್ಯಾಕ್ಸಿನ್ ಡ್ರೈ ರನ್‌ ಕಾರ್ಯಕ್ರಮವನ್ನು ಎರಡು ಸಲ‌ ಉದ್ಘಾಟನೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ. ಜನಪ್ರತಿನಿಧಿಗಳನ್ನು ಓಲೈಸಲು ಮುಂದಾದ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದಾಗಿ ಇಂತಹ ಘಟನೆ ನಡೆದಿದ್ದು, ಕೋಲಾರ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ.

ಕೋವಿಡ್ ಲಸಿಕೆ ಡ್ರೈರನ್ ಕಾರ್ಯಕ್ರಮವನ್ನು ಮೊದಲು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ನಾಗೇಶ್ ಉದ್ಘಾಟನೆ ಮಾಡಿದರು. 10 ನಿಮಿಷದ ಬಳಿಕ 2ನೇ ಬಾರಿಗೆ ಇದೇ ಕಾರ್ಯಕ್ರಮವನ್ನು ಬಿಜೆಪಿ ಸಂಸದ ಮುನಿಸ್ವಾಮಿ ಉದ್ಘಾಟನೆ ಮಾಡಿದರು.

ಕೋವಿಡ್ ವ್ಯಾಕ್ಸಿನ್ ಬಂದ್ರೂ ಮಾಸ್ಕ್ ಕಡ್ಡಾಯ ಹಾಕಬೇಕಾ ? !

ಒಂದೇ ಸ್ಥಳದಲ್ಲಿ ಎರಡು ಬಾರಿ ಟೇಪ್ ಕತ್ತರಿಸುವ ಮೂಲಕ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಇಂತಹ ಘಟನೆಯನ್ನು ನೋಡಿ ಸುಮ್ಮನಿದ್ದರು.

ಶ್..! ವ್ಯಾಕ್ಸಿನ್ ಸಿಕ್ಕಿದೆ ಆದರೆ ಸೇಫ್ಟಿ ಗ್ಯಾರಂಟಿ ಇಲ್ಲ..!

ಕೋಲಾರ ಜಿಲ್ಲೆಯ 8 ಕಡೆಗಳಲ್ಲಿ ಕೋವಿಡ್ ಲಸಿಕೆ ಡ್ರೈ ರನ್ ನಡೆಯುತ್ತಿದೆ. 200 ಸಿಬ್ಬಂದಿ ಡ್ರೈ ರನ್ ನಲ್ಲಿ ಭಾಗವಹಿಸಿದ್ದಾರೆ. ಒಮ್ಮೆ 5 ಜನ ವೈದ್ಯರನ್ನು 25 ಮಂದಿಗೆ ಲಸಿಕೆ ನೀಡಲು ನಿಯೋಜನೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಲಸಿಕೆ ಬರಲಿದ್ದು, ಅದನ್ನು ನೀಡಲು ತಾಲೀಮು ನಡೆಸಲಾಗುತ್ತಿದೆ.

ಕೋಲಾರದಲ್ಲಿ ಬಿಜೆಪಿ ಸಂಸದ ಮುನಿಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಸಮನ್ವಯತೆ ಇಲ್ಲ. ಕೆಲವು ದಿನಗಳ ಹಿಂದೆ ಒಬ್ಬರಿಗೊಬ್ಬರು ಟಾಂಗ್ ಕೊಟ್ಟಿದ್ದರು.

English summary
COVID-19 vaccine dry run in Kolar inaugurated two time. District in charge minister H Nagesh inaugurated first. Later BJP MP Muniswamy inaugurated the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X