ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ: ಒಂದೇ ಗ್ರಾಮದ 12 ಮಕ್ಕಳು ಸೇರಿ 36 ಮಂದಿಗೆ ಕೊರೊನಾ ಸೋಂಕು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 31: ಮಹಾಮಾರಿ ಕೊರೊನಾ ಸೋಂಕು ಇದೀಗ ಹಳ್ಳಿಗಳಲ್ಲಿ ಹೆಚ್ಚು ವರದಿಯಾಗುತ್ತಿದ್ದು, ಅದರಲ್ಲಿಯೂ ಮಕ್ಕಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ. ಇದರಿಂದ ಜನರಲ್ಲಿ ಆತಂಕ ಮೂಡಿರುವುದರಲ್ಲದೆ, ಕೊರೊನಾ 3ನೇ ಅಲೆ ಈಗಲೇ ಆರಂಭವಾಗಿದೆಯಾ ಎಂಬ ಭೀತಿ ಎದುರಾಗಿದೆ.

ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಘಟ್ಟರಾಗಡಹಳ್ಳಿ ಗ್ರಾಮದ 12 ಮಕ್ಕಳು ಸೇರಿ ಒಟ್ಟು 36 ಮಂದಿಗೆ ಕೋವಿಡ್ ಸೋಂಕು ಪತ್ತೆಯಾಗಿರುವುದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಳೆದ 4 ದಿನಗಳ ಹಿಂದೆ ಘಟ್ಟರಾಗಡಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಆರ್‌ಟಿ-ಪಿಸಿಆರ್ ಟೆಸ್ಟ್‌ ನಡೆಸಿತ್ತು. ಪೋಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಕ್ಕಳಿಗೂ Rapid ಟೆಸ್ಟ್ ಮಾಡಲಾಗಿತ್ತು.

Kolar: Covid-19 Tests Positive For 36 People Including 12 Children In Ghattaragadahalli Village

ಘಟ್ಟರಾಗಡಹಳ್ಳಿ ಗ್ರಾಮದ 50 ಮನೆಗಳಲ್ಲಿ 150ಕ್ಕೂ ಹೆಚ್ಚು ಜನ ವಾಸವಿದ್ದಾರೆ. ಇದೀಗ 12 ಮಕ್ಕಳು ಸೇರಿ 36 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಕ್ವಾರಂಟೈನ್ ಆಗಿದ್ದಾರೆ. ಸದ್ಯ ಘಟ್ಟರಾಗಡಹಳ್ಳಿ ಗ್ರಾಮವನ್ನು ಸೀಲ್‌ಡೌನ್ ಮಾಡಿ, ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.

Kolar: Covid-19 Tests Positive For 36 People Including 12 Children In Ghattaragadahalli Village

Recommended Video

BS Yediyurappa ಕುರ್ಚಿಯಿಂದ ಕೆಳೆಗಿಳಿಯುವ ಬಗ್ಗೆ ಸ್ಪಷ್ಟನೆ | Oneindia Kannada

ಮಕ್ಕಳ ಅರೋಗ್ಯದಲ್ಲಿ ಸ್ಥಿರವಾಗಿದ್ದು, ರೋಗ ಲಕ್ಷಣ ಇಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲು ಮಾಡಲಾಗಿದೆ.

English summary
A total of 36 children, including 12 children from Ghataragadahalli village of KGF taluk in Kolar district, have been diagnosed with Covid-19 infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X