• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರ ಜಿಲ್ಲೆಯಲ್ಲಿ ಜ.8ರಿಂದ ಕೊರೊನಾ ಲಸಿಕೆ ಡ್ರೈ ರನ್; ಎಲ್ಲೆಲ್ಲಿ ನಡೆಯಲಿದೆ?

By ಕೋಲಾರ ಪ್ರತಿನಿಧಿ
|

ಕೋಲಾರ, ಜನವರಿ 8: ದೇಶದಾದ್ಯಂತ ಇಂದಿನಿಂದ (ಜ.8) ಎರಡನೆ ಹಂತದ ಕೊರೊನಾ ಲಸಿಕೆ ಡ್ರೈ ರನ್ ಪ್ರಾರಂಭವಾಗಿದ್ದು, ಕರ್ನಾಟಕದ 24 ಜಿಲ್ಲೆಗಳಲ್ಲಿಯೂ ಕೊರೊನಾ ಲಸಿಕಾ ತಾಲೀಮು ಆರಂಭವಾಗಲಿದೆ.

ಗಡಿ ಜಿಲ್ಲೆ ಕೋಲಾರ ಜಿಲ್ಲೆಯಲ್ಲೂ 8 ಕಡೆ ಕೊರೊನಾ ಲಸಿಕೆ ಡ್ರೈ ರನ್ ನಡೆಯಲಿದ್ದು, ಕೋಲಾರ ಜಿಲ್ಲಾ ಕೇಂದ್ರದಲ್ಲಿಯೇ 4 ಕಡೆ ಲಸಿಕೆ ನೀಡಲಾಗುತ್ತಿದೆ.

ಕೋಲಾರ; ಕೋವಿಡ್ ಲಸಿಕೆ ಹಂಚಿಕೆಗೆ ಹೇಗಿದೆ ಸಿದ್ಧತೆ?

ಕೋಲಾರ ಜಿಲ್ಲಾ ಕೇಂದ್ರದ ದರ್ಗಾ ಮೊಹಲ್ಲಾ, ಎಸ್.ಎನ್.ಆರ್, ಜಾಲಪ್ಪ ಮೆಡಿಕಲ್ ಕಾಲೇಜು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಸಲಾಗುತ್ತಿದೆ. ಇದಕ್ಕಾಗಿ ಕೋಲಾರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.

ಇನ್ನು ಮುಳಬಾಗಿಲು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಶ್ರೀನಿವಾಸಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಮಾಲೂರು ತಾಲ್ಲೂಕಿನ ದೊಡ್ಡ ಶಿವಾರದ ಪ್ರಾಥಮಿಕ ಅರೋಗ್ಯ ಕೇಂದ್ರ, ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕಾ ತಾಲೀಮು ಆರಂಭವಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 200 ಜನ ಆರೋಗ್ಯ ಸಿಬ್ಬಂದಿ ಡ್ರೈ ರನ್ ನಲ್ಲಿ ಭಾಗವಹಿಸಲಿದ್ದಾರೆ. 1 ಸೆಷನ್ ನಲ್ಲಿ 5 ಸ್ಟಾಫ್ ನಂತೆ 25 ಜನ ಎಂದು ಪರಿಗಣಿಸಲಾಗಿದೆ.

English summary
The second phase of Coronavirus Dry Run will commence from today (Jan. 8) across the country, and will commence in 24 districts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X