ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 17; ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ಮಾಜಿ ಸಂಸದ ಕೆ. ಎಚ್. ಮುನಿಯಪ್ಪ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ಬುಧವಾರ ಬೆಲೆ ಏರಿಕೆ ಖಂಡಿಸಿ ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಗಾಂಧಿವನದಿಂದ ತಾಲೂಕು ಕಚೇರಿ ತನಕ ಪ್ರತಿಭಟನಾ ಜಾಥಾ ನಡೆಸಲಾಯಿತು.

ಸತತ 9ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಸತತ 9ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ಮಾಜಿ ಸಂಸದ ಕೆ. ಎಚ್. ಮುನಿಯಪ್ಪ ನೇತೃತ್ವದಲ್ಲಿ 500ಕ್ಕೂ ಅಧಿಕ ಕಾರ್ಯಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ತಾಲೂಕು ಕಚೇರಿಗೆ ಅಡ್ಡಲಾಗಿ ಕುಳಿತುಕೊಂಡು ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ರಾಮ್‌ದೇವ್ ಬಳಿ ಯೋಗ ಕಲಿಯಿರಿ, ಪೆಟ್ರೋಲ್ ಬೆಲೆ 6 ಆಗುತ್ತದೆ: ತರೂರ್ ವ್ಯಂಗ್ಯ ರಾಮ್‌ದೇವ್ ಬಳಿ ಯೋಗ ಕಲಿಯಿರಿ, ಪೆಟ್ರೋಲ್ ಬೆಲೆ 6 ಆಗುತ್ತದೆ: ತರೂರ್ ವ್ಯಂಗ್ಯ

Kolar Congress Protest Against Union Govt Price Hike

ತಾಲೂಕು ಕಚೇರಿ ಮುಂದೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಕೂಡಲೇ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಅಹಿಂದ ಕಟ್ಟುವ ಅವಶ್ಯಕತೆ ಇಲ್ಲ; ಮಾಧ್ಯಮಗಳ ಜೊತೆ ಮಾತನಾಡಿದ ಕೆ. ಎಚ್. ಮುನಿಯಪ್ಪ, "ಅಹಿಂದ ಕಟ್ಟುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷವೇ ಅಂಹಿದ, ಹೊಸ ಅಹಿಂದ ಬೇಕಾಗಿಲ್ಲ. ಎಲ್ಲಾ ನ್ಯಾಯಗಳು ಕಾಂಗ್ರೆಸ್‌ನಲ್ಲೇ ಸಿಗುತ್ತದೆ. ಯಾರು ಅಹಿಂದ ಅಂತ್ತಿದ್ದರೋ ಅವರೆಲ್ಲಾ ಕಾಂಗ್ರೆಸ್‌ನಲ್ಲಿಯೇ ಇದ್ದಾರೆ" ಎಂದು ಹೇಳಿದರು.

ಅಡುಗೆ ಇಂಧನ ಬೆಲೆ ಏರಿಕೆ: ಕೇಂದ್ರದಿಂದ ಜನ ಸಾಮಾನ್ಯರ ಲೂಟಿ ಎಂದ ರಾಹುಲ್ ಅಡುಗೆ ಇಂಧನ ಬೆಲೆ ಏರಿಕೆ: ಕೇಂದ್ರದಿಂದ ಜನ ಸಾಮಾನ್ಯರ ಲೂಟಿ ಎಂದ ರಾಹುಲ್

ರಾಮ ಮಂದಿರ; ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರವಾಗಿ ಮಾತನಾಡಿದ ಕೆ. ಎಚ್. ಮುನಿಯಪ್ಪ, "ಅಡ್ವಾಣಿ ಇಟ್ಟಿಗೆ ತಗೆದುಕೊಂಡು ಹೋಗುವಾಗ ಕಾಂಗ್ರೆಸ್ ಪಕ್ಷವಿತ್ತು. ಇದು ಹಿಂದುಗಳು ಗೌರವಿಸಿ, ಪೂಜೆ ಮಾಡುವಂತಹ ವಿಚಾರ. ಭರತ ಖಂಡದಲ್ಲಿ ಮಸೀದಿ, ಮಂದಿರ, ಚರ್ಚುಗಳು ಇವೆ" ಎಂದರು.

"ನನಗೆ ನನ್ನ ಹಿಂದೂ ಧರ್ಮದ ಮೇಲೆ ಪ್ರೀತಿ ಇದೆ. ಆದರೆ, ಬಿಜೆಪಿ ಭಾರತವನ್ನು ಛಿದ್ರ ಛಿದ್ರ ಮಾಡುತ್ತಿದೆ. ರಾಮ ಮಂದಿರ ಕಟ್ಟೋದಕ್ಕೆ ಯಾವುದೇ ಅಡಚಣೆ ಇಲ್ಲ. ಬಿಜೆಪಿಯವರು ನಾಲಯಕ್ ಇದ್ದಾರೆ. ಸರ್ಕಾರ ತೆಗೆಯೋದೆ ನಮ್ಮ ಕೆಲಸ. ದೇವಾಲಯದ ಹುಂಡಿಗೆ ಹಣ ಹಾಕ್ತಿವಿ, ರಾಮ ಮಂದಿರಕ್ಕೂ ಹಿಂದುಗಳಾಗಿ ದೇಣಿಗೆ ಕೊಡುತ್ತೇವೆ. ಆದರೆ, ಬಿಜೆಪಿ ಅವರು ಮಾಡೋ ಕೆಲಸಕ್ಕೆ ನಮ್ಮ ಸಹಕಾರ ಇಲ್ಲ" ಎಂದು ಸ್ಪಷ್ಟಪಡಿಸಿದರು.

English summary
Kolar Congress protest against union government on the issue of price hike. Protest lead by former MP K. H. Muniyappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X