• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಮೇಶ್ ಕುಮಾರ್‌ಗೆ ನಾಚಿಕೆ ಇಲ್ಲ: ಮಾಜಿ ಸಂಸದ ಮುನಿಯಪ್ಪ

|

ಕೋಲಾರ, ಆಗಸ್ಟ್ 28: ಕೋಲಾರ ಕಾಂಗ್ರೆಸ್‌ನಲ್ಲಿ ಭಾರಿ ಬಿರುಕು ಮೂಡಿದ್ದು ದೊಡ್ಡ ಮಟ್ಟದ ನಾಯಕರ ಒಳಜಗಳಗಳು ಬೀದಿಗೆ ಬಂದಿವೆ. ಲೋಕಸಭೆ ಚುನಾವಣೆ ನಂತರ ಈ ದೊಡ್ಡ ಬಿರುಕು ಕೋಲಾರ ಕಾಂಗ್ರೆಸ್‌ನಲ್ಲಿ ಮೂಡಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರು ಸೋತಿರುವ ಕೆ.ಎಚ್.ಮುನಿಯಪ್ಪ, ಕೋಲಾರದ ಕಾಂಗ್ರೆಸ್ ಮುಖಂಡರು, ಶಾಸಕರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ನಜೀರ್ ಅಹ್ಮದ್, ಎಸ್‌.ಎನ್.ನಾರಾಯಣಸ್ವಾಮಿಗೆ ನಾಚಿಕೆ ಇಲ್ಲ ಎಂದು ಮೂದಲಿಸಿದ್ದಾರೆ.

ಶ್ರೀನಿವಾಸಪುರ ಜನರ ಪಾಲಿನ 70 ಎಂ.ಎಂ. ಸಿನೆಮಾ ಹೀರೋ ರಮೇಶ್ ಕುಮಾರ್ಶ್ರೀನಿವಾಸಪುರ ಜನರ ಪಾಲಿನ 70 ಎಂ.ಎಂ. ಸಿನೆಮಾ ಹೀರೋ ರಮೇಶ್ ಕುಮಾರ್

ರಮೇಶ್ ಕುಮಾರ್, ಎಸ್.ಎನ್.ನಾರಾಯಣಸ್ವಾಮಿ, ನಜೀರ್ ಅಹಮದ್, ವಿ ಮುನಿಯಪ್ಪ ಅವರುಗಳನ್ನು ಪಕ್ಷದಿಂದ ಉಚ್ಚಾಟಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ಶಾಸಕರೇ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ರಮೇಶ್ ಕುಮಾರ್‌ಗೆ ನಾಚಿಕೆ ಇಲ್ಲ: ಕೆ.ಎಚ್.ಮುನಿಯಪ್ಪ

ರಮೇಶ್ ಕುಮಾರ್‌ಗೆ ನಾಚಿಕೆ ಇಲ್ಲ: ಕೆ.ಎಚ್.ಮುನಿಯಪ್ಪ

ಮಾಲೂರಿನಲ್ಲಿ ನಡೆದ ಲೋಕಸಭೆ ಚುನಾವಣೆ ಸತ್ಯ ಶೋದನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 'ರಮೇಶ್ ಕುಮಾರ್, ನಜೀರ್ ಅಹಮದ್, ಎಸ್ ಎನ್ ನಾರಾಯಣಸ್ವಾಮಿ ಇವರ್ಯಾರಿಗೂ ಮಾನ ಮರ್ಯಾದೆ ಇಲ್ಲ, ಮಾನ ಮರ್ಯಾದೆ ಇದ್ದಲ್ಲಿ ಇವರ್ಯಾರು ಕಾಂಗ್ರೆಸ್ ಕಚೇರಿ ಒಳಗೆ ಬರಬಾರದು' ಎಂದು ಆಕ್ರೋಶ ಹೊರಹಾಕಿದರು.

ಐಎಂಎ ಹಗರಣ; ಕೋಲಾರದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಹಣ ಪತ್ತೆ!ಐಎಂಎ ಹಗರಣ; ಕೋಲಾರದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಹಣ ಪತ್ತೆ!

ಕಾಂಗ್ರೆಸ್ ಶಾಸಕರ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ

ಕಾಂಗ್ರೆಸ್ ಶಾಸಕರ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ

'ರಮೇಶ್ ಕುಮಾರ್, ನಜೀರ್ ಅಹಮದ್, ವಿ.ಮುನಿಯಪ್ಪ, ಎಸ್.ಎನ್.ನಾರಾಯಣಸ್ವಾಮಿ ವಿರುದ್ದ ಕ್ರಮಕ್ಕೆ ಈಗಾಗಲೇ ಶಿಪಾರಸು ಮಾಡಲಾಗಿದೆ, ಲೋಕಸಭೆ ಚುನಾವಣೆಯಲ್ಲಿ ಇವರ್ಯಾರು ಕಾಂಗ್ರೆಸ್ ಪರ ಕೆಲಸ ಮಾಡಲಿಲ್ಲ ಇದರಿಂದಾಗಿಯೇ ನಾನು ಚುನಾವಣೆಯಲ್ಲಿ ಸೋತೆ' ಎಂದು ಅವರು ಹೇಳಿದರು.

ಸೋಲಿಲ್ಲದ ಸರದಾರಿಗೆ ಸೋಲುಣಿಸಿದ ಮುನಿಸ್ವಾಮಿ

ಸೋಲಿಲ್ಲದ ಸರದಾರಿಗೆ ಸೋಲುಣಿಸಿದ ಮುನಿಸ್ವಾಮಿ

ಕೋಲಾರ ಲೋಕಸಭಾ ಕ್ಷೇತ್ರದಿಂದ ಎಂಟು ಬಾರಿ ಸತತವಾಗಿ ಗೆದ್ದಿದ್ದ ಕೆ.ಎಚ್.ಮುನಿಯಪ್ಪ ಅವರು ಈ ಬಾರಿ ಬಿಜೆಪಿಯ ಮುನಿಸ್ವಾಮಿ ಎದುರು ಹೀನಾಯ ಸೋಲು ಕಂಡರು. ಸ್ವಪಕ್ಷದವರೇ ಅವರ ವಿರುದ್ಧ ತಿರುಗಿ ಬಿದ್ದಿದ್ದೇ ಈ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

ಕೆ.ಎಚ್.ಮುನಿಯಪ್ಪ ವಿರುದ್ಧ ಕೆಲಸ ಮಾಡಿದ ಶಾಸಕರು

ಕೆ.ಎಚ್.ಮುನಿಯಪ್ಪ ವಿರುದ್ಧ ಕೆಲಸ ಮಾಡಿದ ಶಾಸಕರು

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್ ಶಾಸಕರಾದ ರಮೇಶ್ ಕುಮಾರ್, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮುಳಬಾಗಿಲು ಕ್ಷೇತ್ರದ ಕೊತ್ತನೂರು ಮಂಜು, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ ನಜೀರ್ ಅಹ್ಮದ್ ಸೇರಿ ಇನ್ನೂ ಕೆಲವರು ಕೆ.ಎಚ್.ಮುನಿಯಪ್ಪ ವಿರುದ್ಧವಾಗಿ ಕೆಲಸ ಮಾಡಿದ ಪರಿಣಾಮ ಚುನಾವಣೆಯಲ್ಲಿ ಸೋಲಾಯಿತು.

ಜೆಡಿಎಸ್ ವರಿಷ್ಠ ದೇವೇಗೌಡರ ಕೃಪೆ ನನ್ನ ಮೇಲಿದ್ದರೆ ಅಷ್ಟೇ ಸಾಕುಜೆಡಿಎಸ್ ವರಿಷ್ಠ ದೇವೇಗೌಡರ ಕೃಪೆ ನನ್ನ ಮೇಲಿದ್ದರೆ ಅಷ್ಟೇ ಸಾಕು

English summary
Congress leader former Kolar MP KH Muniyappa lambasted on Kolar lok sabha constituency Congress MLAs, specially against former speaker Ramesh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X