ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು

By Manjunatha
|
Google Oneindia Kannada News

Recommended Video

ಸಿದ್ದರಾಮಯ್ಯ ಸರ್ಕಾರದಿಂದ ಕೋಲಾರ ಜಿಲ್ಲೆಗೆ ಕೊಡುಗೆಗಳು | Oneindia Kannada

ಕೋಲಾರ, ಡಿಸೆಂಬರ್ 30: ಸಿದ್ದರಾಮಯ್ಯ ಅವರು ಇಂದು ಕೋಲಾರ ಜಿಲ್ಲೆಗೆ ಆಗಮಿಸಲಿದ್ದು, ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನಿಡಲಿದ್ದಾರೆ.

ಶಿಲಾನ್ಯಾಸ, ಫಲಾನುಭವಿಗಳಿಗೆ ಚೆಕ್ ವಿತರಣೆ, ಮಾಡಿದ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮುಖ್ಯಮಂತ್ರಿಗಳು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರ ಜೊತೆಗಿರಲಿದ್ದಾರೆ.

ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಸರ್ಕಾರದ ಕೊಡುಗೆಗಳುದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಸರ್ಕಾರದ ಕೊಡುಗೆಗಳು

ಮುಖ್ಯವಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ಜಿಲ್ಲೆಯ ಪ್ರಭಾವಿ ಮುಖಂಡರಾದ ಕೆ.ಎಚ್.ಮುನಿಯಪ್ಪ ಅವರುಗಳು ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ವಿಜಯಪುರ ಜಿಲ್ಲೆ ಅಭಿವೃದ್ಧಿಗೆ ಸರ್ಕಾರದ ಕೊಡುಗೆಗಳುವಿಜಯಪುರ ಜಿಲ್ಲೆ ಅಭಿವೃದ್ಧಿಗೆ ಸರ್ಕಾರದ ಕೊಡುಗೆಗಳು

ಇತ್ತೀಚೆಗೆ ತಾನೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಇಂದನ ಸಚಿವ ಡಿ.ಕೆ.ಶಿವಕುಮಾರ್ ಮುಂತಾದ ಪ್ರಮುಖ ನಾಯಕರು ಕೊಲಾರದಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿದ್ದರು, ಈಗ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವುದು ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಲ ಹೆಚ್ಚಿಸಲಿದೆ ಎನ್ನಲಾಗಿದೆ.

ಬೆಳಗಾವಿ ಜಿಲ್ಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ನೀಡಿದ ಕೊಡುಗೆಗಳುಬೆಳಗಾವಿ ಜಿಲ್ಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ನೀಡಿದ ಕೊಡುಗೆಗಳು

ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಕೋಲಾರ ಜಿಲ್ಲೆಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗಮನ ಸೆಳೆಯಲಿದ್ದಾರೆ. ಕೋಲಾರ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರ ಸರ್ಕಾರ ನೀಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ...

10,954 ಕೃಷಿ ಹೊಂಡ ನಿರ್ಮಾಣ

10,954 ಕೃಷಿ ಹೊಂಡ ನಿರ್ಮಾಣ

ಕರ್ನಾಟಕದಲ್ಲೇ ಅತ್ಯುತ್ತಮ ಬ್ಯಾಂಕ್ ಆಗಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಂದ ಒಟ್ಟು 9,062 ಸ್ವ ಸಹಾಯಕ ಸಂಘಗಳ 1,08,744 ಸದಸ್ಯರು 634.28 ಕೋಟಿ ಸಾಲ ಪಡೆದಿದ್ದಾರೆ. ಅದರೊಂದಿಗೆ ಸರ್ಕಾರದಿಂದ 7,908 ಫಲಾನುಭವಿಗಳ ಒಟ್ಟು 37.76 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಸರ್ಕಾರದ ಕೃಷಿ ಹೊಂಡ ಯೋಜನೆಯಡಿಯಲ್ಲಿ 81.32ಕೋಟಿ ರೂಗಳ ವೆಚ್ಚದಲ್ಲಿ 10,954 ಕೃಷಿಹೊಂಡಗಳನ್ನು ನಿರ್ಮಿಸಲಾಗಿದ್ದು 151 ಪಾಲಿಹೌಸ್/ನೆರಳುಪರದೆ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿದ್ದರಾಮಯ್ಯನವರ ಕೊಡುಗೆಗಳುಚಿಕ್ಕಬಳ್ಳಾಪುರ ಜಿಲ್ಲೆಗೆ ಸಿದ್ದರಾಮಯ್ಯನವರ ಕೊಡುಗೆಗಳು

10,34,752 ಪಡಿತರ ಫಲಾನುಭವಿಗಳು

10,34,752 ಪಡಿತರ ಫಲಾನುಭವಿಗಳು

ಹಾಲು ಉತ್ಪಾದಕರಿಗೆ ಪ್ರತಿ ಲೀಗೆ ರೂ.4 ರ ಪ್ರೋತ್ಸಾಹದನ ರೂ.5ಗೆ ಹೆಚ್ಚಿಸಲಾಗಿದ್ದು, ಪ್ರತಿನಿತ್ಯ 10 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಕೋಲಾರ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 2,99,358 ಪಡಿತರ ಚೀಟಿದಾರರು ಇದ್ದು, ಒಟ್ಟು 10,34,752 ಫಲಾನುಭವಿಗಳು ಇರುತ್ತಾರೆ. ಪ್ರತಿ ಮಾಹೆಗೆ 7 ಕೆ.ಜಿ ಅಕ್ಕಿ ಹಾಗೂ 1 ಕೆ.ಜಿ ತೊಗರಿಬೇಳೆಯಂತೆ ಪ್ರತಿ ತಿಂಗಳು 74,000 ಕ್ವಿಂಟಾಲ್ ಅಕ್ಕಿ ಹಾಗೂ 3,000 ಕ್ವಿಂಟಾಲ್ ಬೇಳೆ ವಿತರಣೆಯಾಗುತ್ತಿದ್ದು ತಿಂಗಳಿಗೆ ಸರಾಸರಿ 27 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದ್ದು 332 ನ್ಯಾಯಬೆಲೆ ಅಂಗಡಿಗಳಲ್ಲಿ ಪಿ.ಓ.ಎಸ್ ಯಂತ್ರಗಳ ಅಳವಡಿಕೆಯಾಗಿದೆ.

765 ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ

765 ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಂದಾಜು 3750 ಶಾಲೆಗಳ 124965 ಮಕ್ಕಳು ಮತ್ತು 4000 ಅಂಗನವಾಡಿಗಳ 1.95 ಲಕ್ಷ ಮಕ್ಕಳು ಕ್ಷೀರಭಾಗ್ಯ ಯೋಜನೆಯ ಉಪಯೋಗ ಪಡೆದುಕೊಳ್ಳುತ್ತಿದಾರೆ. ಇಲ್ಲಿಯವರೆಗೆ 765 ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಪೂರ್ಣಗೊಳಿಸಲಾಗಿದ್ದು ಸುಮಾರು 7.00 ಲಕ್ಷಕ್ಕೂ ಅಧಿಕ ಜನರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಮೊಹಲ್ಲಾ ಕ್ಲೀನಿಕ್ ಗಳ ನಿರ್ಮಾಣ

ಮೊಹಲ್ಲಾ ಕ್ಲೀನಿಕ್ ಗಳ ನಿರ್ಮಾಣ

ಜಿಲ್ಲಾ ಆಸ್ಪತ್ರೆ ಯಲ್ಲಿ ಜನ ಔಷಧಿ ಕೇಂದ್ರವನ್ನು ನಿರ್ಮಿಸಿದ್ದು ಇದರ ಮುಖಾಂತರ ಬಡರೋಗಿಗಳಿಗೆ ಶೇ. 60% ರಿಂದ 65% ರಿಯಾಯಿತಿ ಧರದಲ್ಲಿ ಔಷಧಿಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಗರದಲ್ಲಿ ನಗರ ಪ್ರದೇಶದ ಬಡಜನರಿಗೆ ಅನುಕೂಲವಾಗುವಂತೆ "ಮೊಹಲ್ಲ ಕ್ಲಿನಿಕ್" ನ್ನು ಸ್ಥಾಪಿಸಲಾಗಿದೆ. ಬೆಳಿಗ್ಗೆ 8-00 ರಿಂದ 1-00 ಗಂಟೆವರೆಗೆ ಮತ್ತು ಸಂಜೆ 4-00 ರಿಂದ 7-00 ಗಂಟೆವರೆಗೆ ಈ ಮೊಹಲ್ಲ ಕ್ಲಿನಿಕ್‍ಗಳು ಕಾರ್ಯನಿರ್ವಹಿಸಲಿವೆ.

ವಿವಿಧ ವೇತನಗಳ ವಿತರಣೆ

ವಿವಿಧ ವೇತನಗಳ ವಿತರಣೆ

2017-18ನೇ ಸಾಲಿನ ದಿನಾಂಕ 14.09.2017 ರವರಿಗೆ 5596 ಮನೆಗಳು ನಿರ್ಮಿಸಿದ್ದು ಕೋಲಾರ ಜಿಲ್ಲೆಯು ಮೊದಲನೇ ಸ್ಥಾನದಲ್ಲಿರುತ್ತದೆ. ವೃದ್ಯಾಪ ವೇತನ-37584 ವಿಧವಾ ವೇತನ - 98204, ಅಂಗವಿಕಲರ ವೇತನ - 23473, ಸಂಧ್ಯಾ ಸುರಕ್ಷಾ ವೇತನ -83072 ಮನಸ್ವಿನಿ-1077, ಮೈತ್ರಿ-19, ರಾಷ್ಟ್ರೀಯ ಕುಟುಂಬ ನೆರವು ಯೋಜನೆ-6178, ಅಂತ್ಯ ಸಂಸ್ಕಾರ-4844 ರೈತರ ವಿಧವಾ ವೇತನ-20, ಆಸಿಡ್‍ದಾಳಿ ಯೋಜನೆ-1 ಮಂಜೂರು ಮಾಡಲಾಗಿದೆ.

122 ಕಿ.ಮೀ ಉದ್ದದ ರಸ್ತೆ ನಿರ್ಮಾಣ

122 ಕಿ.ಮೀ ಉದ್ದದ ರಸ್ತೆ ನಿರ್ಮಾಣ

"ನಮ್ಮ ಗ್ರಾಮ-ನಮ್ಮ ರಸ್ತೆ" ಹಂತ-3ರ 2015-16ನೇ ಸಾಲಿನಲ್ಲಿ ಮಂಜೂರಾಗಿರುವಂತೆ ಅಂದಾಜು ಮೊತ್ತ ರೂ. 7204.64 ಲಕ್ಷಗಳಲ್ಲಿ 124.48 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಪಡಿಸುವ 65 ಕಾಮಗಾರಿಗಳು ಅನುಮೋದನೆಯಾಗಿದ್ದು, 2017-18 ಸಾಲಿನವರೆಗೂ ಒಟ್ಟಾರೆ ರೂ. 5586.29 ಲಕ್ಷಗಳನ್ನು ವೆಚ್ಚ ಮಾಡಿ 121.81 ಕಿ.ಮೀ. ಉದ್ದದ 62 ರಸ್ತೆ ಕಾಮಗಾರಿಗಳಿಗೆ ಡಾಂಬರೀಕರಣ ಮಾಡಲಾಗಿದೆ.

ಶ್ರೀನಿವಾಸಪುರ ಬಸ್ ನಿಲ್ದಾಣ ನಿರ್ಮಾಣ

ಶ್ರೀನಿವಾಸಪುರ ಬಸ್ ನಿಲ್ದಾಣ ನಿರ್ಮಾಣ

ಸುಮಾರು 10 ಎಕರೆ ಪ್ರದೇಶದಲ್ಲಿ ರೂ 30.00 ಕೋಟಿ ವೆಚ್ಚದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲಾಗಿದ್ದು ಕಟ್ಟಡದ ಒಟ್ಟು ವಿಸ್ತೀರ್ಣ ಸುಮಾರು 12,069 ಚದರ ಮೀಟರ್ ಆಗಿದೆ. ನೆಲ ಮಹಡಿಯು 3,874 ಚದರ ಮೀ, ಮೊದಲನೇ ಮಹಡಿ 3,426 ಚ.ಮೀ, ಎರಡನೇ ಮಹಡಿ 3,619 ಚ.ಮೀ, ಶೋತೃಭವನ 1,150 ಚ.ಮೀ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ರೂ. 7 ಕೋಟಿಗಳ ವೆಚ್ಚದಲ್ಲಿ ಶ್ರೀನಿವಾಸಪುರ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು ರೂ. 2.70 ಕೋಟಿ ವೆಚ್ಚದಲ್ಲಿ ಮುಳಬಾಗಿಲು ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ.

English summary
CM Siddaramaiah is inaugurating various development projects in Kolar today. He also addressing the congress party workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X