ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಲೇಖನ; ಕೇಂದ್ರ ಬಜೆಟ್‌, ಕೋಲಾರ ಜಿಲ್ಲೆಯ ನಿರೀಕ್ಷೆಗಳು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜನವರಿ 21: ಕೋಲಾರ ಜಿಲ್ಲೆಗೆ ಕಳೆದ ಬಾರಿಯ ಬಜೆಟ್ ನಲ್ಲಿ ಯಾವುದೇ ಪ್ಯಾಕೇಜ್ ಹಾಗೂ ಹೊಸ ಯೋಜನೆಗಳನ್ನು ಘೋಷಣೆ ಮಾಡಿರಲಿಲ್ಲ. ಜಿಲ್ಲೆಯನ್ನು ಕಡೆಗಣಿಸಿದ್ಧಾರೆ ಎಂದು ರೈತ ಹಾಗೂ ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದರು.

ಈ ಬಾರಿಯ ಬಜೆಟ್‌ ಮೇಲೆ ಜಿಲ್ಲೆಯ ಜನರ ನಿರೀಕ್ಷೆ ಹೆಚ್ಚಿದೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಜಿಲ್ಲೆಯ ರೈತರು, ಉದ್ಯಮಿಗಳು ಹಾಗೂ ರಾಜಕಾರಿಣಿಗಳು ಹಲವು ನಿರೀಕ್ಷೆಗಳೊಂದಿಗೆ ಕಾದಿದ್ದಾರೆ.

ವಿಶೇಷ ವರದಿ; ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಅನುಷ್ಠಾನವಾಗಿದ್ದು? ವಿಶೇಷ ವರದಿ; ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಅನುಷ್ಠಾನವಾಗಿದ್ದು?

ಕೋಲಾರ ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಲಭ್ಯವಿರುವ ಸ್ವಲ್ಪ ಪ್ರಮಾಣದ ನೀರಿನಲ್ಲಿಯೇ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಲಾಭದ ಜೊತೆಗೆ ದೇಶ ವಿದೇಶಗಳಿಗೆ ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ.

ತುಂಡು ಜಮೀನು, ವಿವಿಧ ಬೆಳೆ; ಮಾದರಿಯಾದ ಕೋಲಾರದ ರೈತ ತುಂಡು ಜಮೀನು, ವಿವಿಧ ಬೆಳೆ; ಮಾದರಿಯಾದ ಕೋಲಾರದ ರೈತ

ಈಗಾಗಲೇ ಜಿಲ್ಲೆಯಲ್ಲಿ ಕೆ. ಸಿ. ವ್ಯಾಲಿ ಯೋಜನೆಯ ಮೂಲಕ ಹಲವಾರು ಕೆರೆಗಳಿಗೆ ರಾಜ್ಯ ಸರ್ಕಾರ ನೀರು ತುಂಬಿಸುತ್ತಿದೆ. ಆದರೆ, ಈ ನೀರು ರೈತರು ಬಳಸುವಂತಿಲ್ಲ. ಕೇವಲ ಅಂತರ್ಜಲ ವೃದ್ದಿಗಾಗಿ ಮಾಡಿರುವ ಯೋಜನೆ ಇದಾಗಿದೆ. ಹೆಚ್ಚುವರಿ ನೀರನ್ನು ಇರುವ ಎಲ್ಲಾ ಕೆರೆಗಳಿಗೆ ಹರಿಸಲು ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ತೈವಾನ್ ಚೇಪೆಕಾಯಿ ಬೇಸಾಯ; ಕಡಿಮೆ ಖರ್ಚು, ಹೆಚ್ಚು ಆದಾಯ ತೈವಾನ್ ಚೇಪೆಕಾಯಿ ಬೇಸಾಯ; ಕಡಿಮೆ ಖರ್ಚು, ಹೆಚ್ಚು ಆದಾಯ

ಎತ್ತಿನಹೊಳೆ ಯೋಜನೆ

ಎತ್ತಿನಹೊಳೆ ಯೋಜನೆ

1500 ಕೋಟಿ ಯಷ್ಟು ಹಣವನ್ನು ಮಾತ್ರ ಎತ್ತಿನ ಹೊಳೆ ಯೋಜನೆಗೆ ಮೀಸಲಿಟ್ಟ ಪರಿಣಾಮ ಕಾಮಗಾರಿ ಕುಂಟುತ್ತ ಸಾಗಿದೆ. ಇದು ರೈತರಿಗೆ ತಲುಪುವುದು ಕಷ್ಟಸಾಧ್ಯ ವಾಗುತ್ತಿದೆ. ಹೀಗಾಗಿ ಹೆಚ್ಚಿನ ಹಣ ಬಿಡುಗಡೆ ಮಾಡಿ ಕಾಮಗಾರಿ ಚುರುಕುಗೊಳಿಸಿ ಮತ್ತೆ ಇರುವ ಕೃಷಿ ಹೊಂಡಗಳನ್ನು ಹೆಚ್ಚಿಸಿ ಸುತ್ತಲೂ ತಂತಿಬೇಲಿ ಹಾಕಲು ಹಣ ಬಿಡುಗಡೆ ಮಾಡಬೇಕು. ಮಳೆ ನೀರು ಸಂಗ್ರಹವಾದರೆ ಜಿಲ್ಲೆಯಲ್ಲಿ ರೈತರು ಮತ್ತಷ್ಟು ಆದಾಯಗಳಿಸಲು ಸಾಧ್ಯ ಎಂಬುದು ರೈತರ ಆಗ್ರಹವಾಗಿದೆ.

ವೇಮಗಲ್ ಕೈಗಾರಿಕಾ ಪ್ರದೇಶ

ವೇಮಗಲ್ ಕೈಗಾರಿಕಾ ಪ್ರದೇಶ

ಜಿಲ್ಲೆಯಲ್ಲಿ ಪ್ರಮುಖವಾಗಿ ನರಸಾಪುರ ಹಾಗೂ ವೇಮಗಲ್‌ನಲ್ಲಿ ಕೈಗಾರಿಕಾ ಪ್ರದೇಶಗಳಿವೆ. ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಬಂದು ಹೋಗಲು ಯಾವುದೇ ಸಮಸ್ಯೆ ಇಲ್ಲ, ವಾಹನ ಸವಾರರಿಗೆ, ಕೆಲಸಗಾರರಿಗೆ ಅಥವಾ ಹೊರ ರಾಜ್ಯಗಳ ವಾಹನಗಳಿಗೆ ಸಮಸ್ಯೆ ಇಲ್ಲ. ಆದರೆ, ವೇಮಗಲ್ ಕೈಗಾರಿಕಾ ಪ್ರದೇಶಕ್ಕೆ ಬಂದು ಹೋಗುವುದು ಸುಲಭವಾಗಿಲ್ಲ. ಕೋಲಾರ ತಾಲೂಕು ಪ್ರವೇಶದ ಸಮಯದಲ್ಲಿ ಸಿಗುವ ಕೊಂಡರಾಜಹಳ್ಳಿ ಯಲ್ಲೇ ರಿಂಗ್ ರೋಡ್ ಮಾಡಿ ಅಂತರಗಂಗೆ ಮೂಲಕ ವೇಮಗಲ್ ಕೈಗಾರಿಕಾ ಪ್ರದೇಶ ಹಾಗೂ ಚಿಂತಾಮಣಿ ಹೋಗಲು ಅನುಕೂಲ ಮಾಡಿಕೊಡಬೇಕು ಎಂಬುದು ಉದ್ಯಮಿಗಳ ಒತ್ತಾಯ.

ಮೆಡಿಕಲ್ ಕಾಲೇಜು ಇಲ್ಲ

ಮೆಡಿಕಲ್ ಕಾಲೇಜು ಇಲ್ಲ

ಕೋಲಾರ ಜಿಲ್ಲೆಯಲ್ಲಿ ಇದುವರೆಗೂ ಮೆಡಿಕಲ್ ಕಾಲೇಜು ಘೋಷಣೆ ಕೇವಲ ಕನಸಾಗಿಯೇ ಉಳಿದಿದೆ. ಪ್ರತಿ ಬಾರಿಯೂ ಜಿಲ್ಲೆಗೆ ಮೆಡಿಕಲ್ ಕಾಲೇಜು ಕೊಡಲಾಗುತ್ತದೆ ಎಂದು ಹೇಳುವುದು ಬಿಟ್ಟರೆ ಘೋಷಣೆ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹೆಚ್. ನಾಗೇಶ್, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದಿದ್ದು ಈ ಬಾರಿ ಆದರೂ ಘೋಷಣೆಯಾಗಲಿದೆಯೇ? ಕಾದು ನೋಡಬೇಕು.

ಕಾಡಾನೆಗಳ ಹಾವಳಿ

ಕಾಡಾನೆಗಳ ಹಾವಳಿ

ಕೋಲಾರ ಜಿಲ್ಲೆಯ ದೊಡ್ಡ ಸಮಸ್ಯೆ ಎಂದರೆ ಕಾಡಾನೆಗಳ ಹಾವಳಿ. ವರ್ಷದಲ್ಲಿ ಹತ್ತುಕ್ಕೂ ಹೆಚ್ಚು ಅಮಾಯಕ ರೈತರನ್ನು ಆನೆಗಳು ಬಲಿ ಪಡೆದುಕೊಳ್ಳುತ್ತವೆ. ಕಾಡಾನೆಗಳ ಹಿಂಡು ರೈತರ ಜಮೀನಿಗೆ ನುಗ್ಗಿ ಟೊಮೊಟೋ, ಆಲೂಗಡ್ಡೆ, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ನಾಶ ಪಡಿಸುತ್ತಿವೆ. ಮಾಲೂರು, ಬಂಗಾಟಪೇಟೆ ಹಾಗೂ ಕೆಜಿಎಫ್‌ನ ಗಡಿ ಗ್ರಾಮದ ರೈತರ ಜಮೀನಿನಲ್ಲಿ ಆನೆಗಳು ಕಾಣಿಸಿಕೊಳ್ಳುತ್ತಿವೆ.

ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಂದ ಆನೆಗಳು ಬಂದು ಹೋಗುತ್ತವೆ. ಸ್ವತಃ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ಕೊಟ್ಟು ನಾವು ಆನೆ ಕಾರಿಡಾರ್ ಮಾಡುತ್ತೇವೆ ಎಂದು ಹೇಳಿದ್ದರು. ಇದುವರೆಗೂ ಯಾವುದೇ ಕೆಲಸವೂ ಆಗಿಲ್ಲ. ಬಜೆಟ್‌ನಲ್ಲಿ ಆನೆ ಕಾರಿಡಾರ್ ಘೋಷಣೆ ಮಾಡಲೇಬೇಕು ಹಾಗೂ ಹೆಚ್ಚಿನ ಪರಿಹಾರ ಘೊಷಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ರೈಲು, ದೇವಾಲಯಗಳು

ರೈಲು, ದೇವಾಲಯಗಳು

ಕೋಲಾರ ಜಿಲ್ಲೆ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿ ಆಗಿದೆ. ಆದರೆ, ಇಲ್ಲಿನ ಐತಿಹಾಸಿಕಾ ಹಾಗೂ ಪುರಾಣ ಪ್ರಸಿದ್ಧ ದೇವಾಲಯಗಳಿಂದ ಹೆಚ್ಚಿನ ಆದಾಯ ರಾಜ್ಯ ಸರ್ಕಾರಕ್ಕೆ ಹೋಗುತ್ತಿದೆ. ಅಂತರಗಂಗೆ ,ಕುರುಡುಮಲೇ, ಸೀತಿ ಬೆಟ್ಟ, ಚಿಕ್ಕ ತಿರುಪತಿ, ಬಂಗಾರ ತಿರುಪತಿ, ವಿರೋಪಾಕ್ಷ ದೇವಾಲಯ ಸೇರಿದಂತೆ ಇನ್ನಿತರ ಹಲವಾರು ದೇವಾಲಯಗಳ ಅಭಿವೃದ್ದಿಗೆ ಹಣ ಮೀಸಲಿಡಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ.

ಇನ್ನು ಕಳೆದ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಬಳಿ ರೈಲ್ವೆ ವರ್ಕ್ ಶಾಪ್‌ಗೆ ಅನುಮತಿ ನೀಡಲಾಯಿತು. ಆದರೆ, ಇದುವರೆಗೂ ರಾಜ್ಯ ಸರ್ಕಾರದಿಂದ ಇಲ್ಲಿ ಭೂಮಿ ಕೊಡಿಸೋಕೆ ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಜಾಗ ಕೊಡಿಸಿದ ಬಳಿಕ ಕೇಂದ್ರ ರೈಲ್ವೇ ಇಲಾಖೆಯಿಂದ ಕಾಮಗಾರಿ ಪ್ರಾರಂಭವಾಗಲಿದ್ದು, ಉದ್ಯೋಗ ಅವಕಾಶ ಸಹ ಯುವಕರಿಗೆ ಸಿಗಲಿದೆ.

Recommended Video

ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada
ಟೊಮೆಟೋ ಮಾರುಕಟ್ಟೆ

ಟೊಮೆಟೋ ಮಾರುಕಟ್ಟೆ

ಏಷ್ಯಾದ ಖಂಡದಲ್ಲೇ ಎರಡನೇ ಅತೀ ದೊಡ್ಡ ಟೊಮೆಟೋ ಮಾರುಕಟ್ಟೆ ಕೋಲಾರದಲ್ಲಿದೆ. ಆದರೆ, ಜಾಗವೇ ಇಲ್ಲದಂತಾಗಿದೆ, ಮೂಲಭೂತ ಸೌಕಯ೯ವೂ ಇಲ್ಲದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಬಾರಿ ಎಪಿಎಂಸಿ ಮಾರುಕಟ್ಟೆಗೆ ಕನಿಷ್ಟ 30 ಎಕರೆ ಜಾಗ ಕೊಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ.

"ಕೋಲಾರ ಜಿಲ್ಲೆ ಮಾವುಗಳ ತವರೂರು. ಇಲ್ಲಿಂದ ದೇಶ ವಿದೇಶಗಳಿಗೆ ಮಾವು ರಫ್ತು ಆಗುತ್ತಿದೆ. ಆದರೆ, ಮಾವುಗಳ ಸಂರಕ್ಷಣೆ ಮಾಡುವ ಘಟಕ ಒಂದೂ ಇಲ್ಲ. ಈಗಾಗಿ ಅತೀ ಹೆಚ್ಚು ಮಾವು ಬೆಳೆಯುತ್ತಿರುವ ಶ್ರೀನಿವಾಸಪುರ ತಾಲೂಕಿನಲ್ಲಿ ಮಾವು ಸಂಸ್ಕರಣಾ ಘಟಕ ಮಾಡಬೇಕು" ಎಂದು ರೈತ ರಮೇಶ್ ಒತ್ತಾಯಿಸಿದ್ದಾರೆ.

English summary
Budget 2020 announcement to Kolar district and implemented projects. Special report ahead of budget and expectations in 2021 budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X