ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ಬಂದ್: ಮಾಲೂರಿನ ಗಣೇಶ್ ಹೋಟೆಲ್ ಮಾಲೀಕನ ಮೇಲೆ ಹಲ್ಲೆ

By Nayana
|
Google Oneindia Kannada News

ಕೋಲಾರ, ಸೆಪ್ಟೆಂಬರ್ 10: ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

LIVE: ಭಾರತ್ ಬಂದ್: ಪ್ರತಿಭಟನೆಗೆ ಹಾಜರಾದ ರಾಹುಲ್ ಗಾಂಧಿ LIVE: ಭಾರತ್ ಬಂದ್: ಪ್ರತಿಭಟನೆಗೆ ಹಾಜರಾದ ರಾಹುಲ್ ಗಾಂಧಿ

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಬಲವಂತವಾಗಿ ಹೋಟೆಲ್, ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಮಾಲೂರಿನಲ್ಲಿರುವ ಗಣೇಶ ಭವನದ ಮಾಲೀಕ ಬಂದ್ ಗೆ ಬೆಂಬಲ ನೀಡಿಲ್ಲ ಎನ್ನುವ ಕಾರಣಕ್ಕಾಗಿ ಅವರಿಗೆ ಥಳಿಸಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

Bharath bandh:Congress wokers attack hotel in Kolar

ಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿಭಾರತ್ ಬಂದ್: ಕರಾವಳಿಯಲ್ಲಿ ತಟ್ಟಿದ ಪ್ರತಿಭಟನೆಯ ಬಿಸಿ

ಮಧು ಹಲ್ಲೆಗೊಳಗಾದವರು, ಮಾಲೂರಿನ ಗಣೇಶ್ ಹೋಟೆಲ್ ಎಂದಿನಂತೆ ಬಾಗಿಲು ತೆರದಿತ್ತು, ಹಲವು ಕಾರ್ಯಕರ್ತರು ಬಂದು ಬಾಗಿಲು ಮುಚ್ಚಲು ತಿಳಿಸಿದ್ದಾರೆ, ನಿರಾಕರಿಸಿದ ಮಧು ಮೇಲೆ ಹಲ್ಲೆ ನಡೆಸಿದ್ದಾರೆ, ಸಂದರ್ಭದಲ್ಲಿ ಮಧು ಬಿಜೆಪಿ ಸರ್ಕಾರದ ಪರವಾಗಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೋಪಗೊಂಡ ಕಾರ್ಯಕರ್ತರು ಆತನ ಮೇಲೆ ಹಲ್ಲೆ ನಡೆಸುವುದರ ಜತೆಗೆ ಹೋಟೆಲ್‌ನಲ್ಲಿರುವ ತಿಂಡಿಯನ್ನೇಲ್ಲಾ ಚೆಲ್ಲಿ ತಮ್ಮ ದರ್ಪ ಮೆರೆದಿದ್ದಾರೆ.

Bharath bandh:Congress wokers attack hotel in Kolar

ಭಾರತ ಬಂದ್ ಇಲ್ವಾ ಸಾರ್? ನನ್ನದು ಒಂದೇ ಉತ್ತರ ಗೊತ್ತಿಲ್ಲ! ಭಾರತ ಬಂದ್ ಇಲ್ವಾ ಸಾರ್? ನನ್ನದು ಒಂದೇ ಉತ್ತರ ಗೊತ್ತಿಲ್ಲ!

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಪೆಟ್ರೋಲ್ ಮೇಲಿನ ವ್ಯಾಟ್ ಕಡಿಮೆ ಮಾಡುವ ಕುರಿತು ಕರ್ನಾಟಕ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ, ಇನ್ನು ಕೇಂದ್ರ ಸರ್ಕಾರ ದರ ಕಡಿಮೆ ಮಾಡುವ ಬಗ್ಗೆ ಆಲೋಚಿಸಿಲ್ಲ, ಹೀಗಾಗಿ ಸಾಮಾನ್ಯ ಜನರಿಗೆ ಬರೆ ಎಳೆದಂತಾಗಿದೆ.

English summary
Workers Forcefully closing hotels and shops across the state during Bharath bandh. A hoteler have been attacked by congress workers in kolar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X