ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಜಿಎಫ್: ಗಣೇಶ ವಿಸರ್ಜನೆ ವೇಳೆ 6 ಮಕ್ಕಳು ನೀರುಪಾಲು

|
Google Oneindia Kannada News

ಕೋಲಾರ, ಸೆಪ್ಟೆಂಬರ್ 10: ಕೋಲಾರದ ಕೆಜಿಎಫ್‌ ಬಳಿ ಗಣೇಶ ವಿಸರ್ಜನೆ ಮಾಡುತ್ತಿದ್ದ ವೇಳೆ ಆರು ಮಕ್ಕಳು ನೀರುಪಾಲಾಗಿದ್ದಾರೆ.

ಕೆಜಿಎಫ್ ತಾಲ್ಲೂಕಿನ ಮರಿಕುಂಟೆಯಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಂಟೆಯೊಂದರಲ್ಲಿ ಗಣೇಶ ಬಿಡಲು ತೆರಳಿದ್ದ ಆರು ಮಕ್ಕಳು ಅಸುನೀಗಿದ್ದಾರೆ. ಇದರಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಎಲ್ಲರೂ 14 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು.

ಕೆಎಂಎಫ್: ಆರಂಭದಲ್ಲೇ ರೇವಣ್ಣಗೆ ಮುಖಭಂಗ ಮಾಡಿದ ಜಾರಕಿಹೊಳಿಕೆಎಂಎಫ್: ಆರಂಭದಲ್ಲೇ ರೇವಣ್ಣಗೆ ಮುಖಭಂಗ ಮಾಡಿದ ಜಾರಕಿಹೊಳಿ

ಮೃತ ಮಕ್ಕಳನ್ನು ರಕ್ಷಿತಾ, ತೇಜಸ್ವಿ, ವೀಣಾ, ವೈಷ್ಣವಿ, ರೋಹಿತ್, ಧನುಷ್ ಎಂದು ಗುರುತಿಸಲಾಗಿದೆ. ಮಕ್ಕಳು ಜೇಡಿ ಮಣ್ಣಿನ ಗಣೇಶ ಮೂರ್ತಿ ಮಾಡಿ ಅದನ್ನು ಕುಂಟೆಯೊಂದರಲ್ಲಿ ಬಿಡಲು ಊರ ಹೊರಕ್ಕೆ ತೆರಳಿದ್ದರು. ಕುಂಟೆಯ ಒಳಗೆ ಜೆಸಿಬಿ ಬಳಸಿ ಮಣ್ಣು ಹೊರತೆಗೆದು ಆಳ ಮಾಡಲಾಗಿತ್ತು, ಇದು ಗೊತ್ತಿರದ ಮಕ್ಕಳು ಕುಂಟೆಗೆ ಇಳಿದು ಮುಳುಗಿ ಹೋಗಿದ್ದಾರೆ.

6 Children Drown In Water Near KGF

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಮೃತಹೊಂದಿರುವ ಮಕ್ಕಳ ಕುಟುಂಬಕ್ಕೆ ತಲಾ 50,000 ದಂತೆ ಒಟ್ಟು 2 ಲಕ್ಷ ಪರಿಹಾರವನ್ನು ಸಿಎಂ ಯಡಿಯೂರಪ್ಪ ಅವರು ಇಂದು ಸಂಜೆ ಘೋಷಣೆ ಮಾಡಿದ್ದಾರೆ.

English summary
Six children drown in water near KGF. children went to leave ganesha in water but the pond was too depth so they drown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X