ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ: ಅನಾಥಾಶ್ರಮದ 27 ಮಕ್ಕಳು ಹಾಗೂ 33 ಗಾರ್ಮೆಂಟ್ಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 5: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಅತ್ತಿಗಿರಿಕುಪ್ಪ ಬಳಿಯಿರುವ ಅನಾಥಾಶ್ರಮದ 27 ಜನ‌ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.

ಬಂಗಾರಪೇಟೆ ತಾಲ್ಲೂಕು ಅತ್ತಿಗಿರಿಕುಪ್ಪ ಬಳಿ ಬಜೇರಿಯಾ ಟ್ರಸ್ಟ್ ನಿಂದ ನಡೆಸುತ್ತಿರುವ ಆಶ್ರಮದಲ್ಲಿ 60ಕ್ಕೂ ಹೆಚ್ಚು ಜನ ಮಕ್ಕಳಿದ್ದಾರೆ. ಮೊದಲು ಒಂದು ವಿದ್ಯಾರ್ಥಿನಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿದ ಹಿನ್ನೆಲೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ.

ಲಸಿಕೆ ಪಡೆದಿದ್ದ ಚಾಮರಾಜನಗರ ಡಿಸಿಗೆ ಕೋವಿಡ್ಲಸಿಕೆ ಪಡೆದಿದ್ದ ಚಾಮರಾಜನಗರ ಡಿಸಿಗೆ ಕೋವಿಡ್

ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ದೃಢವಾದ ಹಿನ್ನೆಲೆ ಎಲ್ಲಾ ಮಕ್ಕಳಿಗೆ ಪರೀಕ್ಷೆ ಮಾಡಲಾಗಿತ್ತು. ಸೋಮವಾರ 26 ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

Kolar: 27 Children From Orphanage And 33 Garment Employees Tests Positive For Covid-19

ಎಲ್ಲ ಮಕ್ಕಳನ್ನು ಕೋಲಾರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಅನಾಥ ಆಶ್ರಮವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಮಾಡಿದ್ದಾರೆ.

33 ಗಾರ್ಮೆಂಟ್ಸ್ ಸಿಬ್ಬಂದಿಗೂ ಕೊರೊನಾ

ಇನ್ನು, ಕೋಲಾರದ ಗಾರ್ಮೆಂಟ್ಸ್ ಸಿಬ್ಬಂದಿಗಳಿಗೂ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಬೆತ್ತನಿ ಗ್ರಾಮದಲ್ಲಿರುವ ಗಾರ್ಮೆಂಟ್ಸ್ನ 33 ಸಿಬ್ಬಂದಿಗಳಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.

ಒಟ್ಟು ಸಾವಿರ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, 33 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಪ್ರಾಥಮಿಕ ಸಂಪರ್ಕ ಇರುವವರು ಹೋಂ ಕ್ವಾರಂಟೈನ್ ಆಗಿದ್ದು, ಉಳಿದವರು ಕೋಲಾರ ಜಿಲ್ಲಾಸ್ಪತ್ರೆಯ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಎರಡು ದಿನಗಳ ಕಾಲ ಗಾರ್ಮೆಂಟ್ಸ್ ಅನ್ನು ಕಂಟೈನ್ಮೆಂಟ್ ವಲಯದಲ್ಲಿರಿಸಲು ನಿರ್ಧಾರಿಸಲಾಗಿದೆ.

Recommended Video

#Covid19Update: ಇಂದು ರಾಜ್ಯದಲ್ಲಿ 4553 ಕೊರೊನಾ ಕೇಸ್‌ ದಾಖಲು! | Oneindia Kannada

ಕೋಲಾರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ ಹೆಚ್ಚಾಗುತ್ತಿದೆ. ಜನರಲ್ಲಿ ಕೊರೊನಾ ಭಯ ಅನ್ನೋದು ಇಲ್ಲದಂತಾಗಿದೆ ಎಂದು ಡಿಎಚ್ಒ ಡಾ.ವಿಜಯ್ ಕುಮಾರ್ ಹೇಳಿದರು. ಸೋಮವಾರ ಜಿಲ್ಲೆಯಲ್ಲಿ ಒಟ್ಟು 112 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

English summary
Covid-19 Positive found in 27 children in an orphanage near Attigirikuppa, Bangarpet Taluk in Kolar District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X