ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ದಾಖಲೆ ಇಲ್ಲದ 2 ಕೋಟಿ ಹಣ ಪೊಲೀಸರ ವಶಕ್ಕೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಸೆಪ್ಟೆಂಬರ್ 01: ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ದಾಖಲೆ ಇಲ್ಲದ ಹಣವನ್ನು ಕೋಲಾರದ ಶ್ರೀನಿವಾಸಪುರ ತಾಲೂಕಿನಲ್ಲಿ ಜಪ್ತಿ ಮಾಡಲಾಗಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Recommended Video

China ಗಡಿಗೆ ಎಂಟ್ರಿ ಕೊಟ್ಟ ಭಾರತೀಯ ಸೇನೆ | Oneindia Kannada

ಮಂಗಳವಾರ ರಾತ್ರಿ ಶ್ರೀನಿವಾಸಪುರ ತಾಲೂಕಿನ ರೋಜರನಹಳ್ಳಿ ಬಳಿ ಕಾರನ್ನು ಪರಿಶೀಲಿಸಿದ ಪೊಲೀಸರಿಗೆ ದಾಖಲೆ ಇಲ್ಲದ 2 ಕೋಟಿ 94 ಲಕ್ಷದ 50 ಸಾವಿರ ರೂ. ಹಣ ಸಿಕ್ಕಿದೆ. ಕಾರಿನಲ್ಲಿದ್ದ ಕೋಲಾರ ಮೂಲದ ಚಂದ್ರಶೇಖರ್ ಹಾಗೂ ಅಮರನಾಥ್‌ರನ್ನು ವಶಕ್ಕೆ ಪಡೆಯಲಾಗಿದೆ.

 ಹಣ ದುರ್ಬಳಕೆ; ಬೆಳಗಾವಿಯ ಲೋಕಮಾನ್ಯ ಸೊಸೈಟಿ ಆಸ್ತಿ ಜಪ್ತಿಗೆ ಸರ್ಕಾರ ಆದೇಶ ಹಣ ದುರ್ಬಳಕೆ; ಬೆಳಗಾವಿಯ ಲೋಕಮಾನ್ಯ ಸೊಸೈಟಿ ಆಸ್ತಿ ಜಪ್ತಿಗೆ ಸರ್ಕಾರ ಆದೇಶ

ಆಂಧ್ರಪ್ರದೇಶ ಕಡೆಯಿಂದ ಬರುತ್ತಿದ್ದ ಕೆಎ 07, ಎಂ7123 ನೋಂದಣಿ ಸಂಖ್ಯೆಯ ಶಿಫ್ಟ್‌ ಕಾರಿನಲ್ಲಿ ಹಣ ಪತ್ತೆಯಾಗಿದೆ. ಖಚಿತ ಮಾಹಿತಿ ಪಡೆದಿದ್ದ ಶ್ರೀನಿವಾಸಪುರ ಠಾಣೆ ಸಬ್ ಇನ್ಸ್‌ಪೆಕ್ಟರ್ ನಾರಾಯಣಪ್ಪ ನೇತೃತ್ವದ ತಂಡ ಕಾರನ್ನು ಹಿಂಬಾಲಿಸಿ ಹಣ ಜಪ್ತಿ ಮಾಡಿದೆ.

ಎಸಿಬಿ ದಾಳಿ; ಮಹಿಳಾ ಅಧಿಕಾರಿಗಳ ಬಳಿ 4.47 ಕೋಟಿ ಪತ್ತೆ ಎಸಿಬಿ ದಾಳಿ; ಮಹಿಳಾ ಅಧಿಕಾರಿಗಳ ಬಳಿ 4.47 ಕೋಟಿ ಪತ್ತೆ

2 Crore Unaccounted Money Seized In Kolar

ಶ್ರೀನಿವಾಸಪುರ ಡಿವೈಎಸ್ಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಹಣ ಸಿಕ್ಕ ಬಗ್ಗೆ ತನಿಖೆ ಆರಂಭಿಸಲಾಗಿದೆ. ಬಂಧಿತರಾಗಿರುವ ಇಬ್ಬರ ವಿರೋಧಿಗಳು ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಿರುವ ಸಾಧ್ಯತೆ ಇದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 1,000 ಕೋಟಿ ಅಕ್ರಮ ಹಣ ವರ್ಗಾವಣೆ ಕಿಂಗ್‌ಪಿನ್: ಯಾರು ಈ ಚೀನಾದ ಪ್ರಜೆ? 1,000 ಕೋಟಿ ಅಕ್ರಮ ಹಣ ವರ್ಗಾವಣೆ ಕಿಂಗ್‌ಪಿನ್: ಯಾರು ಈ ಚೀನಾದ ಪ್ರಜೆ?

ಕಾರಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಶ್ರೀನಿವಾಸಪುರ ಠಾಣೆಗೆ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಕೊಟ್ಟಿದ್ದಾರೆ. ಎಸ್ಪಿ ನೇತೃತ್ವದಲ್ಲಿ ಹಣ ಎಣಿಕೆ ಕಾರ್ಯ ನಡೆಯುತ್ತಿದೆ.

English summary
More than 2 crore unaccounted money seized in Srinivaspur police station limits of Kolar. Two persons detained and police probing the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X