• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರ; ತಾಲೂಕಿಗೆ 2 ಕೋವಿಡ್ ಕೇರ್ ಸೆಂಟರ್ ಆರಂಭ

By ಕೋಲಾರ ಪ್ರತಿನಿಧಿ
|

ಕೋಲಾರ, ಏಪ್ರಿಲ್ 21; ಕೋಲಾರ ಜಿಲ್ಲೆಯಲ್ಲಿಯೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತಿ ತಾಲೂಕಿನಲ್ಲಿ 2 ಕೋವಿಡ್ ಕೇರ್ ಸೆಂಟರ್ ಆರಂಭಿಸಲು ತೀರ್ಮಾನಿಸಲಾಗಿದೆ.

ಬುಧವಾರ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಕೋವಿಡ್ ವಿಚಾರದ ಕುರಿತು ತುರ್ತು ಸಭೆಯನ್ನು ನಡೆಸಿದರು. ಜಿಲ್ಲೆಯ ಎಲ್ಲಾ ಶಾಸಕರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೋಲಾರ; ಕಾಡಾನೆ ದಾಳಿಗಿಲ್ಲ ಪರಿಹಾರ, ರೈತರು ಹೈರಾಣಕೋಲಾರ; ಕಾಡಾನೆ ದಾಳಿಗಿಲ್ಲ ಪರಿಹಾರ, ರೈತರು ಹೈರಾಣ

ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಅಂತರರಾಜ್ಯ ಗಡಿಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಿದ್ದೇವೆ ಎಂದರು.

ಹೊಸಪೇಟೆ; ಒಂದೇ ಗ್ರಾಮದ 57 ಜನರಿಗೆ ಕೋವಿಡ್ ಸೋಂಕು ಹೊಸಪೇಟೆ; ಒಂದೇ ಗ್ರಾಮದ 57 ಜನರಿಗೆ ಕೋವಿಡ್ ಸೋಂಕು

ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತಿ ತಾಲೂಕಿಗೆ ಕನಿಷ್ಠ ಎರಡು ಕೋವಿಡ್ ಕೇರ್ ಸೆಂಟರ್ ತೆರಯಲಾಗುವುದು ಎಂದು ಹೇಳಿದರು.

 ಕೋವಿಡ್ ಬಾಧಿತ ರಾಜ್ಯಗಳಿಗೆ ರಿಲಯನ್ಸ್‌ನಿಂದ ಆಮ್ಲಜನಕ ಪೂರೈಕೆ ಕೋವಿಡ್ ಬಾಧಿತ ರಾಜ್ಯಗಳಿಗೆ ರಿಲಯನ್ಸ್‌ನಿಂದ ಆಮ್ಲಜನಕ ಪೂರೈಕೆ

ಜಿಲ್ಲೆಯಲ್ಲಿ ಈಗಾಗಲೇ 1.70 ಲಕ್ಷ ಜನರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಬಿಇಎಂಎಲ್ ಕಂಪನಿಯಿಂದ ಕೆಜಿಎಫ್ ನಲ್ಲಿ ಆಕ್ಸಿಜನ್ ತಯಾರಿಕಾ ಘಟನೆ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಸಿಎಸ್‌ಆರ್ ಅನುದಾನದಿಂದ ಆಕ್ಸಿಜನ್ ತಯಾರಿಕಾ ಘಟಕ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ. ರೆಮ್ಡಿಸಿವರ್ ಇಂಜೆಕ್ಷನ್ ಇನ್ನು 450 ಇದೆ, ಯಾವುದೇ ಆತಂಕವಿಲ್ಲ. ಸೋಂಕಿತರಿತರಿಗೆ ಚಿಕಿತ್ಸೆ ನೀಡಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ.

ಸರ್ಕಾರ ಮಾರ್ಗಸೂಚಿಯಲ್ಲಿ ಮದುವೆಯಲ್ಲಿ 50 ಜನರಿಗೆ ಮಾತ್ರ ಅವಕಾಶ ಎಂದು ಹೇಳಿದೆ. ಮದುವೆ ಸಮಾರಂಭಗಳನ್ನು ನಿಷೇಧಿಸಬೇಕು ಎಂದು ಶಾಸಕರು ಸಭೆಯಲ್ಲಿ ಒತ್ತಾಯಿಸಿದರು.

ಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಿಜೆಪಿ ಸಂಸದ ಮುನಿಸ್ವಾಮಿ ಸೇರಿದಂತೆ ಎಲ್ಲಾ ಶಾಸಕರು ಭಾಗಿಯಾಗಿದ್ದರು.

English summary
Kolar deputy commissioner Dr. Selvamani said that district administration plan to set up 2 COVID care center in every taluk to treat COVID patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X