ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀನಿವಾಸಪುರ ಕಾಂಗ್ರೆಸ್ ನಾಯಕನ ಕೊಲೆ, 19 ಮಂದಿಗೆ ಜೀವಾವಧಿ ಶಿಕ್ಷೆ

2008ರಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಮುಖಂಡ ಪೆರುಮಾಳ್ ಕೊಲೆ ಪ್ರಕರಣದಲ್ಲಿ ಹತ್ತೊಂಬತ್ತು ಮಂದಿಗೆ ಜಿವವಧಿ ಶಿಕ್ಷೆ ವಿಧಿಸಿ ಕೊಲರ ಜಿಲ್ಲಾ ಕೋರ್ಟ್ ಶುಕ್ರವಾರ ಆದೇಶ ನೀಡಿದೆ

|
Google Oneindia Kannada News

ಕೋಲಾರ, ಜನವರಿ 14: ಕಾಂಗ್ರೆಸ್ ಮುಖಂಡ ಪೆರುಮಾಳ್ ಕೊಲೆ ಪ್ರಕರಣದಲ್ಲಿ 19 ಆರೋಪಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ, ಶುಕ್ರವಾರ ಕೋಲಾರ ಜಿಲ್ಲಾ ಕೋರ್ಟ್ ಆದೇಶ ನೀಡಿದೆ. ಮೇ 25, 2008ರಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಿಂದ ಜಯ ಗಳಿಸಿದ್ದರು.

ಆಗ ಕಾಂಗ್ರೆಸ್ ನಿಂದ ಪೆರುಮಾಳ್ ಸ್ಪರ್ಧಿಸಿದ್ದರು. ಜೆಡಿಎಸ್ ಕಾರ್ಯಕರ್ತರು ಪೆರುಮಾಳ್ ಮನೆ ಮುಂದೆ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಲು ನಿರ್ಧರಿಸಿದರು. ಆ ಶಬ್ದ ಕೇಳಿ ಮನೆಯಿಂದ ಆಚೆ ಬಂದ ಪೆರುಮಾಳ್ ಅವರ ತಾಯಿ, ಇದೇಕೆ ಹೀಗೆ ಮಾಡುತ್ತೀರಿ ಎಂದು ಕೇಳಿದರು. ಅಲ್ಲಿದ್ದ ಒಬ್ಬ ವ್ಯಕ್ತಿ ಆಕೆಯನ್ನು ತಳ್ಳಿದಾಗ, ಕೋಪಗೊಂಡು ಮನೆಯಿಂದ ಆಚೆ ಬಂದ ಪೆರುಮಾಳ್ ಮಾತಿನ ಚಕಮಕಿ ನಡೆಸಿದಾಗ, ಜೆಡಿಎಸ್ ಕಾರ್ಯಕರ್ತರು ಪೆರುಮಾಳ್ ರನ್ನು ಕೊಲೆ ಮಾಡಿದ್ದರು.[ಕೋಲಾರ: ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ]

ಮೊದಲಿಗೆ ಈ ಪ್ರಕರಣದಲ್ಲಿ ಇಪ್ಪತ್ನಾಲ್ಕು ಮಂದಿಯನ್ನು ಹೆಸರಿಸಲಾಗಿತ್ತು. ಇಬ್ಬರು ವಿಚಾರಣೆ ನಡೆಯುವಾಗಲೇ ತೀರಿಕೊಂಡಿದ್ದರು. ಶುಕ್ರವಾರ ಮೂವರನ್ನು ಖುಲಾಸೆ ಮಾಡಲಾಗಿದೆ. ಡಿಸೆಂಬರ್ 2010ರಲ್ಲಿ ಕೋಲಾರ ಗ್ರಾಮಾಂತರ ಪೊಲೀಸರಿಗೆ ವಿಜಯ್ ಕುಮಾರ್ ಎಂಬ ಜೆಡಿಎಸ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು.

Court

ಶ್ರೀನಿವಾಸಪುರದ ವಿಜಯ್ ಕುಮಾರ್ ಕೊಲೆಗೆ ರಾಜಕೀಯ ವೈಷಮ್ಯ ಕಾರಣ ಎಂದು ತಿಳಿದುಬಂದಿತ್ತು. ಆ ನಂತರ ತಿಳಿದುಬಂದ ಮಾಹಿತಿ ಪ್ರಕಾರ ಕಾಂಗ್ರೆಸ್ ನಾಯಕ ಪೆರುಮಾಳ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಕುಮಾರ್ ಎಂಬ ಸಂಗತಿ. ವಿಚಾರಣೆ ಎದುರಿಸುತ್ತಿದ್ದ ವಿಜಯ್ ಕುಮಾರ್ ಅಕ್ಟೋಬರ್ 2010ರವರೆಗೆ ಜೈಲಿನಲ್ಲಿದ್ದ. ಆ ನಂತರ ಜಾಮೀನು ಪಡೆದು ಹೊರಬಂದಿದ್ದ ಆತನನ್ನು ಡಿಸೆಂಬರ್ 2010ರಲ್ಲಿ ಕೊಲೆ ಮಾಡಲಾಗಿತ್ತು.

English summary
The Kolar District Court, on Friday, convicted 19 persons in connection with the murder of Congress Leader Perumal. All 19 men have been sentenced to life imprisonment and a fine of Rs 5,000 was imposed on each of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X