ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 16 ಲಕ್ಷ ಮತದಾರರು

|
Google Oneindia Kannada News

ಕೋಲಾರ, ಏಪ್ರಿಲ್ 14 : ಕೋಲಾರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 16,28,744 ಅರ್ಹ ಮತದಾರರಿದ್ದಾರೆ. ಏಪ್ರಿಲ್ 18 ರಂದು ಕೋಲಾರ ಲೋಕಸಭಾ ಕ್ಷೇತ್ರ ಚುನಾವಣೆ ನಡೆಯಲಿದೆ.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಜೆ.ಮಂಜುನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 8,16,459 ಪುರುಷ, 8,12,126 ಮಹಿಳಾ ಹಾಗೂ 159 ಇತರೆ ಮತದಾರರು ಲೋಕಸಭಾ ಕ್ಷೇತ್ರದಲ್ಲಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?

 16 lakhs voters in Kolar lok sabha seat poll on April 18

ಏಪ್ರಿಲ್ 18ರಂದು ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಎಸ್.ಮುನಿಸ್ವಾಮಿ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಚ್.ಮುನಿಯಪ್ಪ ಅವರು ಕಣದಲ್ಲಿದ್ದಾರೆ.

ಕೋಲಾರ ಕ್ಷೇತ್ರದ ಚುನಾವಣಾ ಪುಟ

ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದಲ್ಲಿ 1,00,160 ಪುರುಷ, 98,975 ಮಹಿಳಾ, 9 ಇತರೆ ಮತದಾರರು. ಚಿಂತಾಮಣಿ ವಿಧಾನ ಸಭಾ ಕ್ಷೇತ್ರದಲ್ಲಿ 1,08,060 ಪುರುಷ, 1,08,790 ಮಹಿಳಾ, 44 ಇತರೆ ಮತದಾರರು.

ಶ್ರೀನಿವಾಪುರ ವಿಧಾನ ಸಭಾ ಕ್ಷೇತ್ರದಲ್ಲಿ 1,03,764 ಪುರುಷ, 1,02,837 ಮಹಿಳಾ, 6 ಇತರೆ ಮತದಾರರು. ಮುಳಬಾಗಿಲು ವಿಧಾನ ಸಭಾ ಕ್ಷೇತ್ರದಲ್ಲಿ 1,03,979 ಪುರುಷ, 1,03,373 ಮಹಿಳಾ, 3 ಇತರೆ ಮತದಾರರು ಇದ್ದಾರೆ.

ಕೆ.ಜಿ.ಎಫ್ ವಿಧಾನ ಸಭಾ ಕ್ಷೇತ್ರದಲ್ಲಿ 96,829 ಪುರುಷ, 96,728 ಮಹಿಳಾ ಮತದಾರರು 31 ಇತರೆ ಮತದಾರರು. ಬಂಗಾರಪೇಟೆ ಕ್ಷೇತ್ರದಲ್ಲಿ 98,551 ಪುರುಷ, 97,292 ಮಹಿಳಾ ಮತದಾರರು ಹಾಗೂ 33 ಇತರೆ ಮತದಾರರಿದ್ದಾರೆ.

ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ 1,13,108 ಪುರುಷ, 1,13,266 ಮಹಿಳಾ ಹಾಗೂ 28 ಮತದಾರರು. ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿ 92,008 ಪುರುಷ, 90,865 ಮಹಿಳಾ ಮತದಾರರು ಹಾಗೂ 5 ಇತರೆ ಮತದಾರರು ಇದ್ದಾರೆ.

English summary
16,28,744 voters in Kolar lok sabha constituency, Karnataka. Polling will be held for 2019 lok sabha elections on April 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X