ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೌಚಕ್ಕೆ ಹೋದಾಗ ಕುಸಿದ ಕಟ್ಟಡ, ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

|
Google Oneindia Kannada News

ಕೋಲಾರ್, ಡಿಸೆಂಬರ್ 20: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶೌಚಾಲಯದ ಕಟ್ಟಡ ಕುಸಿದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಬುಧವಾರ ನಡೆದಿದೆ.

ಬಿಸ್ನಹಳ್ಳಿ ಮೂಲದ ವಿದ್ಯಾರ್ಥಿನಿ ಜೋಸ್ನಾ ಮೃತಪಟ್ಟ ದುರ್ದೈವಿ. ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಜೋಸ್ನಾ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದೇವರಾಯ ಸಮುದ್ರದ ಕೀಳುಹೊಳಲಿಯ 12 ಎಕರೆ ಜಮೀನಿನಲ್ಲಿ 21 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.

ಒಳಚರಂಡಿ ಮಣ್ಣು ಕುಸಿತ: ಓರ್ವ ಕಾರ್ಮಿಕ ಸಾವು ಒಳಚರಂಡಿ ಮಣ್ಣು ಕುಸಿತ: ಓರ್ವ ಕಾರ್ಮಿಕ ಸಾವು

ಆದರಿಂದ ವಸತಿ ಶಾಲೆಯನ್ನು ಇರ್ಷಾದ್ ಎಂಬುವವರಿಗೆ ಸೇರಿದ ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದ ವೇಳೆ ಏಕಾಏಕಿ ಕಟ್ಟಡ ಕುಸಿದ ಪರಿಣಾಮ ಆಕೆ ಅವಶೇಷಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

13-year-old girl dies as school toilet roof collapses in Kolar

ನಿದ್ದೆಗೆ ಜಾರಿದ ಚಾಲಕ: ಮುಧೋಳದಲ್ಲಿ ಮೂವರು ಸ್ಥಳದಲ್ಲೇ ಸಾವು ನಿದ್ದೆಗೆ ಜಾರಿದ ಚಾಲಕ: ಮುಧೋಳದಲ್ಲಿ ಮೂವರು ಸ್ಥಳದಲ್ಲೇ ಸಾವು

ಮೊರಾರ್ಜಿ ದೇಸಾಯಿ ಶಾಲೆಯು ಹಳೆಯ ಕಟ್ಟಡದಲ್ಲಿ ನಡೆಸುತ್ತಿದ್ದರಿಂದ ಹೇಳುವಷ್ಟು ಗಟ್ಟಿಯಾಗಿರಲಿಲ್ಲ. ಈ ವಿಷಯ ತಿಳಿದಿದ್ದರೂ ವಸತಿ ಶಾಲೆಯನ್ನು ಖಾಸಗಿ ಕಟ್ಟಡದಲ್ಲಿ ಮಾಡಿದ್ದೇ ವಿದ್ಯಾರ್ಥಿನಿ ಸಾವಿಗೆ ಕಾರಣವೆಂದು ಪೋಷಕರು ದೂರಿದ್ದಾರೆ. ಸದ್ಯ ಸ್ಥಳಕ್ಕೆ ಜಿಲ್ಲಾಧಿಕಾರಿ ಜೆ. ಮಂಜುನಾಥ್, ತಹಶೀಲ್ದಾರ್ ಪ್ರವೀಣ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

English summary
A class 7 student died after roof and portion of the wall of her school toilet collapsed in Mulabagilu , kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X