ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಬಾಲ ಮಂದಿರದ 13 ಮಕ್ಕಳಿಗೆ ಕೋವಿಡ್ ಸೋಂಕು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜೂನ್ 04; ಕೋಲಾರ ಜಿಲ್ಲೆಯಲ್ಲಿ ಕೊರೊನಾ ಮಕ್ಕಳ ಮೇಲೆ ಸವಾರಿ ಮಾಡುವ ಮೂಲಕ ಬಿಟ್ಟು ಬಿಡದೇ ಕಾಡಲಾರಂಭಿಸಿದೆ. ಒಂದೇ ಗ್ರಾಮದಲ್ಲಿ 11 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡ ಪ್ರಕರಣ ಎರಡು ದಿನಗಳ ಹಿಂದೆ ವರದಿಯಾಗಿತ್ತು.

ಶುಕ್ರವಾರ ಬಾಲ ಮಂದಿರದ 13 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಆತಂಕ ಉಂಟಾಗಿದೆ. ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 3ನೇ ಅಲೆ ಆರಂಭವಾಗಿರುವ ಸೂಚನೆ ನೀಡಿದೆ.

ಕೋಲಾರ; 80 ಆಕ್ಸಿಜನ್ ಬೆಡ್ ಕೋವಿಡ್ ಆಸ್ಪತ್ರೆ ಉದ್ಘಾಟನೆ ಕೋಲಾರ; 80 ಆಕ್ಸಿಜನ್ ಬೆಡ್ ಕೋವಿಡ್ ಆಸ್ಪತ್ರೆ ಉದ್ಘಾಟನೆ

ಕೋಲಾರ ಜಿಲ್ಲೆಯ ಕೆಜಿಎಫ್ ಬಳಿ ಇರುವ ಬಾಲಮಂದಿರ 13 ಹೆಣ್ಣು ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದ್ದು ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. 17 ಹೆಣ್ಣು ಮಕ್ಕಳಿರುವ ಬಾಲಮಂದಿರದಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.

ಕೋಲಾರ: ಒಂದೇ ಗ್ರಾಮದ 12 ಮಕ್ಕಳು ಸೇರಿ 36 ಮಂದಿಗೆ ಕೊರೊನಾ ಸೋಂಕುಕೋಲಾರ: ಒಂದೇ ಗ್ರಾಮದ 12 ಮಕ್ಕಳು ಸೇರಿ 36 ಮಂದಿಗೆ ಕೊರೊನಾ ಸೋಂಕು

13 Child Tested Positive For Covid In Kolar Balamandira

ಪರೀಕ್ಷೆ ವೇಳೆ 13 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಎಲ್ಲಾ ಮಕ್ಕಳನ್ನು ಬಿಜಿಎಂಎಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆರೋಗ್ಯವಾಗಿರುವ ಮಕ್ಕಳಿಗೆ ಮುನ್ನಚ್ಚರಿಕಾ ಕ್ರಮವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಲಾಕ್‌ಡೌನ್ ಎಫೆಕ್ಟ್: ಸಂಕಷ್ಟದಲ್ಲಿ ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರುಲಾಕ್‌ಡೌನ್ ಎಫೆಕ್ಟ್: ಸಂಕಷ್ಟದಲ್ಲಿ ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರು

ಇನ್ನೂ ಮಸ್ಕಾಂ ಬಾಲಮಂದಿರದಲ್ಲಿ ಒಟ್ಟು 35 ಮಕ್ಕಳಿದ್ದು, ಅದರಲ್ಲಿ 18 ಜನ ಗಂಡು ಮಕ್ಕಳಿಗೆ ಇನ್ನೂ ಪರೀಕ್ಷೆ ಮಾಡಿಲ್ಲ ಎನ್ನುವ ಮಾಹಿತಿಯನ್ನು ಮಕ್ಕಳ ರಕ್ಷಣಾಧಿಕಾರಿ ರಮೇಶ್ ನೀಡಿದ್ದಾರೆ.

ಜೂನ್ 3ರ ವರದಿ ಪ್ರಕಾರ ಕೋಲಾರ ಜಿಲ್ಲೆಯಲ್ಲಿ 317 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6062. ಇದುವರೆಗೂ ಜಿಲ್ಲೆಯಲ್ಲಿ 354 ಜನರು ಮೃತಪಟ್ಟಿದ್ದಾರೆ.

Recommended Video

ಲೆಕ್ಕ ಕೊಟ್ಟು DC Rohini Sindhuri ತಿರುಗೇಟು ಕೊಟ್ಟ Shilpa Nag | Oneindia Kannada

English summary
Out of 17 child in Kolar balamandira 13 tested positive for Covid 19. Health department officials visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X