ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೀಡಾಪಟುಗಳಿಗೆ ಕೊಹ್ಲಿ-ಸಾನಿಯಾ ಸಲಹೆ ಏನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 20 : 'ಕ್ರೀಡಾಪಟುಗಳೇ ಯಾವ ಕಾರಣಕ್ಕೂ ಜಂಕ್ ಫುಡ್ ತಿನ್ನಬೇಡಿ, ಇದು ನಿಮ್ಮ ವೃತ್ತಿ ಬದುಕಿಗೆ ಮಾರಕವಾಗಬಹುದು' ಹೀಗೆಂದು ಸಲಹೆ ನೀಡಿದ್ದು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ.

ಕ್ರೀಡಾಪಟು ಸೇವಿಸುವ ಆಹಾರದ ಮೇಲೆ ಸದಾ ನಿಗಾ ಇರಿಸಿಕೊಂಡಿರುಬೇಕು. ಜಂಕ್ ಫುಡ್ ಹತ್ತಿರವೂ ಸುಳಿಯಬಾರದು, ಕೆಎಫ್ ಸಿ ಅಂತೂ ಬೇಡವೇ ಬೇಡ ಎಂದು ಕೊಹ್ಲಿ ಹೇಳಿದರು.[ಟಿ20 ದಾಖಲೆ ರೇಸಿನಲ್ಲಿ ವಿರಾಟ್ ಕೊಹ್ಲಿ, ರೈನಾ]

ಕಳೆದ ಅನೇಕ ವರ್ಷಗಳಿಂದ ಆಹಾರದಲ್ಲಿ ಕಟ್ಟು ನಿಟ್ಟು ಅಭ್ಯಾಸ ಮಾಡಿಕೊಂಡು ಬಂದಿರುವುದರಿಂದಲೇ ಫಿಟ್ ನೆಸ್ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಕ್ರೀಡಾಪಟುಗಳು ಜಂಕ್ ಫುಡ್ ನಿಂದ ದೂರ ಉಳಿದಷ್ಟು ಒಳ್ಳೆಯದು ಎಂದು ಹೇಳಿದರು.[ಮಿರ್ಜಾ-ಹಿಂಗಿಸ್ ಜೋಡಿ, ಯುಎಸ್ ಓಪನ್‌ನಲ್ಲೂ ಮೋಡಿ]

ಬೆಂಗಳೂರಿನಲ್ಲಿ ಅಡಿದಾಸ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರು ಕ್ರೀಡಾ ತಾರೆಗಳು ಭಾಗವಹಿಸಿದ್ದರು. ಒಂದೇ ವರ್ಷದಲ್ಲಿ 2 ಗ್ರ್ಯಾಂಡ್ ಸ್ಲಾಂ ಗೆದ್ದಿರುವುದು ವಿಶ್ವಾಸವನ್ನು ಹೆಚ್ಚಿಸಿದೆ. ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಕನಸು ಹೊಂದಿದ್ದು ಅಭ್ಯಾಸ ಮಾಡುತ್ತಿದ್ದೇನೆ ಎಂದು ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದರು.

ಮಕ್ಕಳೊಂದಿಗೆ ಆಟ

ಮಕ್ಕಳೊಂದಿಗೆ ಆಟ

ಕ್ರೀಡಾ ಶೋ ರೂಂ ಉದ್ಘಾಟಿಸಿದ ತಾರೆಗಳು ಮಕ್ಕಳೊಂದಿಗೆ ಕ್ರಿಕೆಟ್ ಮತ್ತು ಟೆನಿಸ್ ಆಡಿ ಸಂಭ್ರಮಿಸಿದರು. ದಕ್ಷಿಣಾ ಆಫ್ರಿಕಾ ವಿರುದ್ಧದ ಸರಣಿಗೆ ಕೊಹ್ಲಿ ಸಿದ್ಧರಾಗುತ್ತಿದ್ದರೆ, ಮಾರ್ಟಿನಾ ಹಿಂಗೀಸ್ ಜತೆಗೂಡಿ ಗ್ರಾಂಡ್ ಸ್ಲಾಂ ಬಾಚಿಕೊಂಡ ಖುಷಿಯಲ್ಲಿ ಸಾನಿಯಾ ಮಿರ್ಜಾ ಇದ್ದಾರೆ.

ಪೋಸ್ ನೀಡಿದ್ದು ಹೀಗೆ

ಪೋಸ್ ನೀಡಿದ್ದು ಹೀಗೆ

ವಿರಾಟ್ ಕೊಹ್ಲಿ, ಸಾನಿಯಾ ಮಿರ್ಜಾ ಜತೆ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್ ಮತ್ತು ಕರ್ನಾಟಕದ ಕ್ರಿಕೆಟಿಗ ಕೆ ಎಲ್ ರಾಹುಲ್.

ಸಾನಿಯಾ ಆಟೊಗ್ರಾಫ್

ಸಾನಿಯಾ ಆಟೊಗ್ರಾಫ್

ಬೆಂಗಳೂರಿಗೆ ಆಗಮಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಂದ ಆಟೊಗ್ರಾಫ್ ಪಡೆದು ಪುಳಕಿತರಾದ ಅಭಿಮಾನಿಗಳು.

ನಾವೇನು ಕಮ್ಮಿ?

ನಾವೇನು ಕಮ್ಮಿ?

ವಿರಾಟ್ ಕೊಹ್ಲಿ ಅವರೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ ಅಂಧ ವಿದ್ಯಾರ್ಥಿ ನಾವೇನು ಕಮ್ಮಿ ಎಂಬಂತೆ ಬೌಲಿಂಗ್ ಮಾಡಿದರು.

English summary
Indian cricket Test captain Virat Kohli and ace women's tennis star Sania Mirza today advised sportspersons not to eat junk food to stay fit. "As a sportsperson, I am very cautious of what I eat. I advise sports enthusiasts don't eat KFC, drink unhealthy liquids and eat chocolates, basically everything which tastes well. Say no to junk food, stay away from KFC," Kohli said during the launch of the biggest brand centre of Adidas in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X