ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಲೇಖನ: ಕಾಶ್ಮೀರಿ ಕುಶಲಕರ್ಮಿಗಳ ಹೋರಾಟ

|
Google Oneindia Kannada News

ಪ್ರಾಚೀನ ಕಾಲದ ಗುಡಿ ಕೈಗಾರಿಕೆಗೆ ಹೆಸರಾದ ಕುಂಬಾರಿಕೆ ಇದೀಗ ಅಳಿವಿನ ಅಂಚಿನಲ್ಲಿದೆ. ಆದರೆ ಇಂದಿಗೂ ಕೆಲ ಕುಟುಂಬಗಳು ಅದೇ ವೃತ್ತಿಯನ್ನು ಮುಂದುವರಿಸಿ ಬದುಕು ಸಾಗಿಸುತ್ತಿವೆ. ಹೀಗೆಯೇ ಕಾಶ್ಮೀರದಲ್ಲಿರುವ ದಿಲ್ಶಾದಾ ಬಿಲಾಲ್ (35 ವರ್ಷ) ಎಂಬುವರ ಕುಟುಂಬ ಇಂದಿಗೂ ಕುಂಬಾರಿಕೆ ಕಲೆಯನ್ನೇ ನಂಬಿ ಬದುಕುತ್ತಿದೆ.

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಲಾರ್ಮ್- ಗಂಜೀಪೋರಾ ಗ್ರಾಮದಲ್ಲಿರುವ ಬಿಲಾಲ್, ಇಂದಿಗೂ ಇಟ್ಟಿಗೆ ಮನೆಯಲ್ಲೇ ವಾಸಿಸುತ್ತಿದ್ದು, ಅಲ್ಲಿನ ಕಾರ್ಯಾಗಾರದಲ್ಲಿಯೇ ಈಕೆ ಕುಂಬಾರರ ಚಕ್ರ, ಓಲೆ ಉತ್ಪನ್ನಗಳ ಶೇಖರಣೆಗೂ ಸ್ಥಳವಿದೆ. ಇಲ್ಲಿನ 27 ಕುಟುಂಬಗಳ ಸಾಲಿಗೆ ಬಿಲಾಲ್ ಅವರ ಕುಟುಂಬವೂ ಸೇರಿದೆ. ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಒಳಗೊಂಡಿರುವ ಈ ಗ್ರಾಮಕ್ಕೆ ಮಣ್ಣಿನ ರಸ್ತೆ ಮಾರ್ಗವಾಗಿಯೇ ಹೋಗಬೇಕಿದೆ. ಏಕೆಂದರೆ ಇಲ್ಲಿನ ನಿವಾಸಿಗಳಿಗೆ ನೀರು ಸಂಗ್ರಹಕ್ಕೆ ಏಕೈಕ ಮೂಲವೂ ಇದೇ ಆಗಿದೆ.

ಚಳಿಗಾಲ ಆರಂಭದ ವೇಳೆಗೆ ಕೃಷಿ ಪ್ರಮುಖ ಬೆಳೆಯಾದ ಭತ್ತದ ಕೊಯ್ಲು ಅಂತ್ಯಗೊಳ್ಳುತ್ತಿದ್ದಂತೆಯೇ ಬಿಲಾಲ್ ಮಣ್ಣಿನ ಪಾತ್ರೆಗಳು, ವಿದ್ಯುತ್ ಕುಕ್ಕರ್‌ಗಳಂತಹ ಉತ್ಪನ್ನಗಳನ್ನು ಉತ್ಪಾದಿಸಲು ಮುಂದಾಗುತ್ತಾರೆ. ಮೂರು ಮಕ್ಕಳ ತಾಯಿಯಾಗಿರುವ ಬಿಲಾಲ್ ಅವರು ಕಳೆದ ಎರಡು ದಶಕಗಳಿಂದ ವಿವಿಧ ಮಣ್ಣಿನ ಆಕೃತಿಗಳನ್ನು ಉತ್ಪಾದಿಸುತ್ತಿದ್ದಾರೆ. ಚಿಕ್ಕ ಹುಡುಗಿಯಾಗಿದ್ದಾಗಲೇ ತನ್ನ ತಂದೆಯಿಂದ ಕುಂಬಾರಿಕೆ ಕಲಿತ ಈಕೆ, ಇಂದಿಗೂ ಕುಂಬಾರಿಕೆ ಕಲೆಯನ್ನೇ ನಂಬಿ ಬದುಕುತ್ತಿದ್ದಾರೆ.

The barter trade is the only way to sell our products to create some income, otherwise we will starve to death, says 70-year-old Muhammad Jamal Kumhar

ಆದರೀಗ ಬಹುತೇಕ ಹೊಸ ತಲೆಮಾರಿನವರು ಕುಂಬಾರಿಕೆಯ ಕಲೆಯನ್ನೇ ತೊರೆಯುತ್ತಿದ್ದಾರೆ. ಆದರೂ ಬಿಲಾಲ್ ಕುಟುಂಬ ಇಂದಿಗೂ ಕರಕುಶಲ ಕಲೆಯನ್ನೇ ಜೀವನಾಧಾರವಾಗಿ ಮಾಡಿಕೊಂಡಿದೆ.

"ಸದ್ಯ ಬೇಡಿಕೆಯ ಕೊರತೆಯಿಂದಾಗಿ, ಕರಕುಶಲತೆಯು ಅಳಿವಿನ ಅಂಚಿನಲ್ಲಿದೆ. ನಮ್ಮ ಉತ್ಪನ್ನಗಳನ್ನು ಖರೀದಿಸುವವರೂ ಇಲ್ಲದಂತಾಗುತ್ತಿದೆ,''ಎನ್ನುತ್ತಾರೆ ಬಿಲಾಲ್ ಅವರ ಸಂಬಂಧಿ ಮುಹಮ್ಮದ್ ಜಮಾಲ್ ಕುಮ್ಹಾರ್.

ಈ ಕುರಿತಂತೆ ಡಿಡಬ್ಲ್ಯೂನೊಂದಿಗೆ ಮಾತನಾಡಿರುವ ಬಿಲಾಲ್, "ನಮ್ಮಲ್ಲಿ ಹೆಚ್ಚಿನವರು ಜೀವನಕ್ಕೆ ಸಾಕಷ್ಟು ಆದಾಯ ನೀಡುವುದಿಲ್ಲ ಎಂಬ ಕಾರಣಕ್ಕೆ ಈ ಕರಕುಶಲತೆಯನ್ನು ತ್ಯಜಿಸಿದ್ದಾರೆ. ಆದರೆ, ನನ್ನ ಕುಟುಂಬಕ್ಕೆ ಬೇರೆ ಆದಾಯ ಮೂಲವಿಲ್ಲದ ಕಾರಣ, ಅಲ್ಪವಾದರೂ ಇದೇ ಕಸುಬನ್ನು ಮುಂದುವರಿಸಿದ್ದೇವೆ," ಎಂದು ತಿಳಿಸಿದ್ದಾರೆ.

ಅಳಿವಿನಂಚಿನಲ್ಲಿ ಕುಂಬಾರಿಕೆ ಪ್ರಾಚೀನ ಕಲೆ:

ನವದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಆದಿಲ್ ಜುಬೈರ್ ಅವರ ಪ್ರಕಾರ, ಕಾಶ್ಮೀರದಲ್ಲಿ ಕುಂಬಾರಿಕೆಯು ಪ್ರಾಚೀನ ಕಲೆ ಎಂಬುದಕ್ಕೆ ಹಲವು ಕುರುಹುಗಳು ಸಾಕ್ಷಿಯಾಗಿವೆ. ಇಲ್ಲಿನ ಶ್ರೀನಗರದ ಹೊರವಲಯದಲ್ಲಿರುವ ಬರ್ಜೋಮ್‌ನಲ್ಲಿ 3000 ರಿಂದ 1200 ಬಿ.ಸಿ.ಯ ಅವಧಿಯಲ್ಲಿ ಪತ್ತೆಯಾದ ಕುಂಬಾರಿಕೆಯ ಮೊದಲ ಚಿಹ್ನೆಗಳನ್ನು ನವಶಿಲಾಯುಗದ ವಸಾಹತು ಎಂದು ಗುರುತಿಸಬಹುದಾಗಿದೆ. ಅಲ್ಲದೆ, ಅಂದು ಕಾಶ್ಮೀರದ ಗ್ರಾಮೀಣ ಪ್ರದೇಶಗಳಲ್ಲಿ ನೀರು ಹಾಗೂ ಧಾನ್ಯಗಳ ಸಂಗ್ರಹಕ್ಕಾಗಿ ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ಈಗಲೂ ಬಳಸಲಾಗುತ್ತದೆ. ತುಂಬಕನೀರ್ (ಗೋಬ್ಲೆಟ್ ಡ್ರಮ್) ನಂತಹ ಜೇಡಿಮಣ್ಣಿನಿಂದ ಮಾಡಿದ ಸಾಂಪ್ರದಾಯಿಕ ಸಂಗೀತ ವಾದ್ಯಗಳು ಇನ್ನೂ ವ್ಯಾಪಕವಾಗಿ ಹರಡಿವೆ ಎಂದಿದ್ದಾರೆ.

'ಇಲ್ಲಿನ 70ರ ವಯೋಮಾನದ ಕುಮ್ಹರ್ ಅವರ ಕುಟುಂಬ ಅನೇಕ ಶತಮಾನಗಳಿಂದಲೂ ಕರಕುಶಲತೆಯೊಂದಿಗೆ ಸಂಬಂಧ ಹೊಂದಿದೆ. ಏಕೆಂದರೆ ಅವರ ಬಾಲ್ಯದಲ್ಲಿ ಕುಂಬಾರಿಕೆ ಕೌಶಲ್ಯಗಳನ್ನು ಕಲಿಸಿದ್ದರು. ಆದರೆ, ಲೋಹ ಮತ್ತು ಪ್ಲಾಸ್ಟಿಕ್ ಪಾತ್ರೆಗಳ ಪರಿಚಯದಿಂದಾಗಿ ಕಾಶ್ಮೀರದ ಕುಂಬಾರಿಕೆ ಅವನತಿಯತ್ತ ಸಾಗುತ್ತಿದೆ. ಅಲ್ಲದೆ, ಸರ್ಕಾರವು ಹೊಸ ಸ್ಟುಡಿಯೋ ಮಡಿಕೆಗಳನ್ನು ಪರಿಚಯಿಸಿದೆ. ಅಲ್ಲಿ ಅಲಂಕಾರಿಕ ಕಪ್‌ಗಳು ಮತ್ತು ಮಗ್‌ಗಳನ್ನು ತಯಾರಿಸಲಾದರೂ ಅದು ಸಾಂಪ್ರದಾಯಿಕ ಕರಕುಶಲವಲ್ಲ,' ಎಂದು ಹೇಳಿದ್ದಾರೆ.

Dilshada Bilals best-selling pottery works include electric cooking heaters and fire pots

'ಕರಕುಶಲವನ್ನೇ ನಂಬಿ ಬದುಕುತ್ತಿರುವ ಬಿಲಾಲ್ ಕುಟುಂಬದಲ್ಲಿ, ಬಿಲಾಲ್ ತನ್ನ ಹೆಚ್ಚಿನ ಸಮಯವನ್ನು ಮಣ್ಣಿನ ಉತ್ಪನ್ನಗಳನ್ನು ತಯಾರಿಸಲು ತನ್ನ ಮಾವನಿಗೆ ಸಹಾಯ ಮಾಡುತ್ತಿದ್ದಾಳೆ. ತನ್ನ ಮಾವನಾದ ಕುಮ್ಹರ್ ಹಳ್ಳಿಗಳನ್ನು ಸುತ್ತುತ್ತಾ ಅಕ್ಕಿ ಧಾನ್ಯಕ್ಕೆ ಬದಲಾಗಿ ಮಣ್ಣಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಾನೆ. ಒಂದು ಹೀಟರ್‌ಗೆ ಗ್ರಾಮಸ್ಥರು ಅವನಿಗೆ 20 ಕಿ.ಗ್ರಾಂ, ಬೆಂಕಿಯ ಮಡಿಕೆಗೆ 10 ಕಿ.ಗ್ರಾಂ ಅಕ್ಕಿಯನ್ನು ನೀಡುತ್ತಾರೆ,' ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಲಾಲ್, 'ನನ್ನ ಮಕ್ಕಳು ಬೆಳೆದು ವಯಸ್ಸಿಗೆ ಬರುತ್ತಿದ್ದಾರೆ. ಹಾಗಾಗಿ ನಾನು ಜೀವನ ನಡೆಸಬೇಕಾಗಿದೆ. ಆದರೆ, ನಮಗೆ ಸ್ವಂತ ಭೂಮಿ ಇಲ್ಲ,' ಎಂದು ಅಳಲು ತೋಡಿಕೊಂಡಿದ್ದಾಳೆ.

ಇದಕ್ಕೆ ಪ್ರತಿಯಾಗಿ ಮಾತನಾಡುವ ಕುಮ್ಹರ್, 'ಈಗ ನಮ್ಮ ಮಕ್ಕಳು ತಮ್ಮ ಕುಟುಂಬವನ್ನು ಉಳಿಸಿಕೊಳ್ಳಲು ಬೇರೆ-ಬೇರೆ ಉದ್ಯೋಗಗಳನ್ನು ಹಿಡಿಯುತ್ತಿದ್ದು ವಾಹನ ಚಾಲಕರು, ಕಾರ್ಪೆಂಟರ್‌ಗಳಾಗುತ್ತಿದ್ದಾರೆ. ಕರಕುಶಲತೆಯ ಅವನತಿಯಿಂದ ಅನೇಕರು ವಿನಿಮಯ ವ್ಯಾಪಾರದಲ್ಲಿ ಜೀವನ ನಡೆಸುತ್ತಿದ್ದಾರೆ. ಆಧುನಿಕ ಅಡುಗೆ ಸಾಮಾನುಗಳು ಮಣ್ಣಿನ ಪಾತ್ರೆಗಳನ್ನು ಬದಲಿಸಿದಂತೆ, ತಮ್ಮ ಕರಕುಶಲತೆಯಲ್ಲಿ ನಾವೀನ್ಯತೆಗಳನ್ನು ಸುಲಭಗೊಳಿಸಲು ಇಚ್ಚಿಸುತ್ತಿದ್ದಾರೆ. ಆದರೆ, ಇದಕ್ಕೆ ಸರ್ಕಾರದ ಬೆಂಬಲದ ಕೊರತೆಯಿರುವುದರಿಂದ ಕರಕುಶಲ ಕಲೆಯು ಅಳಿವಿನಂಚಿನತ್ತ ಸಾಗಿದೆ,' ಎನ್ನುತ್ತಾರೆ.

'ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸ್ವಲ್ಪ ಆದಾಯವನ್ನು ಸೃಷ್ಟಿಸಲು ವಿನಿಮಯ ವ್ಯಾಪಾರವು ಏಕೈಕ ಮಾರ್ಗವಾಗಿದೆ. ಇಲ್ಲದಿದ್ದರೆ ನಾವು ಹಸಿವಿನಿಂದ ಸಾಯಬೇಕಾಗುತ್ತದೆ. ಕೋವಿಡ್-19 ಸಾಂಕ್ರಾಮಿಕವು ಕುಂಬಾರ ಸಮುದಾಯಕ್ಕೆ ದೊಡ್ಡ ಹೊಡೆತ ನೀಡಿದೆ. ಇದರಿಂದಾಗಿ ಕುಂಬಾರ ಕುಟುಂಬಗಳನ್ನು ಮತ್ತಷ್ಟೂ ಬಡತನಕ್ಕೆ ನೂಕಿದೆ. ಅಲ್ಲದೆ, ಸಾರ್ವಜನಿಕ ಸಂಚಾರದ ಮೇಲಿನ ನಿರ್ಬಂಧಗಳು ಹಾಗೂ ಉತ್ಪನ್ನಗಳ ಮಾರಾಟಕ್ಕೆ ಕೆಲವು ಪ್ರದೇಶಗಳಿಗೆ ಪ್ರವೇಶಿಸಲೂ ಅಡ್ಡಿಯಾಗಿರುವುದರಿಂದ ವ್ಯಾಪಾರ ಕುಂಠಿತವಾಗಿದೆ,' ಎನ್ನುವುದು ಕುಮ್ಹರ್ ಅವರ ಅಳಲು.

Muhammad Jamal Kumhar, 70, molds the clay before putting it inside potters wheel

ತಂದೂರ್ ಭರವಸೆಯ ಬೆಳಕು:
ಏತನ್ಮಧ್ಯೆ ಉತ್ತರ ಕಾಶ್ಮೀರದ ಪಲ್ಹಲಾನ್ ಗ್ರಾಮದಲ್ಲಿ ಕುಂಬಾರರು ತಮ್ಮ ಸಂಪ್ರದಾಯ ಸಂಸ್ಕೃತಿಯನ್ನು ಜೀವಂತವಾಗಿಡಲು ಹಾಗೂ ಮುಂದಿನ ಪೀಳಿಗೆಗೆ ಸಂರಕ್ಷಿಸಲು ಇಲ್ಲಿನ ಆಡ್ಸ್ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ. ಏಕೆಂದರೆ, ಇಲ್ಲಿನ 35-40 ಕುಟುಂಬಗಳು ಕಾಶ್ಮೀರದಾದ್ಯಂತ ಹಾಗೂ ಭಾರತದ ಕೆಲ ಭಾಗಗಳಲ್ಲಿ ಬೇಕರಿ, ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳಲ್ಲಿ ಬಳಸುವ ತಂದೂರ್ (ಸಿಲಿಂಡರಾಕಾರದ ಮಣ್ಣಿನ ಓವನ್‌ಗಳು)ಗಳನ್ನು ಸಿದ್ಧಪಡಿಸುವಲ್ಲಿ ನಿರತವಾಗಿವೆ. ಇವುಗಳ ಬಳಕೆಯಿಂದ ಕುಂಬಾರಿಕೆ ಕಲೆ ಉಳಿಯುತ್ತವೆ ಎನ್ನುವ ಭರವಸೆ ಮೂಡಿದೆ ಎನ್ನುತ್ತಾರೆ 47 ವರ್ಷದ ಕುಂಬಾರ ಕಲಾವಿದ ಅಬ್ದುಲ್‌ರಶೀದ್.

ಮುಂದುವರಿದು ಮಾತನಾಡಿರುವ ಅವರು, '2005ರಲ್ಲಿ ನಮ್ಮ ಕುಟುಂಬವು ತಂದೂರ್ ತಯಾರಿಕೆಗೆ ಬದಲಾಯಿತು. ಇದರಿಂದಾಗಿ ಕುಟುಂಬದ ಆರ್ಥಿಕ ನಿರ್ವಹಣೆಗೆ ಸಾಕಷ್ಟು ಆದಾಯ ಬರುತ್ತಿದೆ,' ಎಂದಿದ್ದಾರೆ.

ತಂದೂರ್ ಅನ್ನು ಮಣ್ಣಿನ ಅಚ್ಚು ಮತ್ತು ಆಕಾರದಲ್ಲಿ ಸಿದ್ಧಪಡಿಸಿ ಬಿಸಿಲಿನಲ್ಲಿ ಒಣಗಿಸಬೇಕಿರುತ್ತದೆ. ಹಾಗಾಗಿ, ಒಂದು ತಂದೂರ್ ತಯಾರಿಸಲು 2 ವಾರಗಳ ಕಾಲಾವಕಾಶ ಬೇಕಾಗುತ್ತದೆ. ನಾವು ವರ್ಷದಲ್ಲಿ ಸುಮಾರು 150 ತಂದೂರ್‌ಗಳನ್ನು ಉತ್ಪಾದಿಸಿ ಕಾಶ್ಮೀರ ಮಾತ್ರವಲ್ಲದೇ ಭಾರತದಾದ್ಯಂತ ಗ್ರಾಹಕರಿಗೆ ತಲಾ 5 ಸಾವಿರ ರೂ. ($67- 57) ನಂತೆ ಮಾರಾಟ ಮಾಡಲಾಗುತ್ತದೆ,' ಎನ್ನುತ್ತಾರೆ ಅಬ್ದುಲ್ ರಶೀದ್.

ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಕಾಶ್ಮೀರ ಮಣಿಗಂ ಗ್ರಾಮದ 38 ವರ್ಷದ ಅಫ್ರೋಜಾ ಬೇಗಂ, "ನಮ್ಮ ಪೂರ್ವಜರಿಂದ ಬಂದ ಕುಂಬಾರಿಕೆ ಕಲೆಯು ಇಂದಿಗೂ ಇಲ್ಲಿ ಉಳಿದುಕೊಂಡಿದೆ. ಕಲೆ ಎಂದಿಗೂ ಸಾಯುವುದಿಲ್ಲ. ಆದರೆ, ಕಾಲಕ್ಕೆ ತಕ್ಕಂತೆ ತನ್ನ ರೂಪಗಳನ್ನು ಬದಲಾಯಿಸುತ್ತಾ ವಿವಿಧ ಸ್ತರಗಳಲ್ಲಿ ಜೀವಂತಿಕೆಯನ್ನು ಪಡೆದುಕೊಳುತ್ತದೆ" ಎಂದು ಶ್ಲಾಘಿಸಿದ್ದಾರೆ.

English summary
Waning demand and the impacts of the COVID pandemic have pushed Kashmir pottery to the brink of extinction. But some artisan families are continuing the craft in exchange for rice just to survive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X