ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ.16ರಿಂದ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌: ಕರಾವಳಿ ಸೌಂದರ್ಯ ಸವಿಯಲು ವಿಸ್ಟಾಡೋಮ್ ಕೋಚ್

|
Google Oneindia Kannada News

ಕಾರವಾರ, ಆಗಸ್ಟ್ 15: ಮೇ ತಿಂಗಳಲ್ಲಿ ಮಂಗಳೂರು ಜಂಕ್ಷನ್ ಮತ್ತು ಕಾರವಾರ ನಡುವೆ ಓಡಾಟ ನಿಲ್ಲಿಸಿ, ಕೇವಲ ಯಶವಂತಪುರದಿಂದ ಮಂಗಳೂರಿನವರೆಗೆ ಓಡಿಸಲಾಗುತ್ತಿದ್ದ ಯಶವಂತಪುರ- ಕಾರವಾರ- ಯಶವಂತಪುರ ಟ್ರೈನ್- ವೀಕ್ಲಿ (ಹಗಲು ರೈಲು) ಎಕ್ಸ್‌ಪ್ರೆಸ್‌ನ ಸೇವೆಗಳನ್ನು ಪುನರಾರಂಭಿಸಲಾಗಿದೆ.

ಕೊಂಕಣ ರೈಲ್ವೆಯು ಸಾರ್ವಜನಿಕರ ಬೇಡಿಕೆಗೆ ಮಣಿದು, ಮೂರು ತಿಂಗಳ ಅವಧಿಗೆ ರೈಲ್ವೇ ಸಚಿವಾಲಯದ ಹಿಂದಿನ ನಿರ್ದೇಶನದಂತೆ ಮುಂದಿನ ಸೂಚನೆಯವರೆಗೂ ಈ ರೈಲನ್ನು ಯಶವಂತಪುರದಿಂದ ಕಾರವಾರದವರೆಗೆ ವಾರದಲ್ಲಿ ಮೂರು ದಿನ ಓಡಿಸಲು ಮುಂದಾಗಿದೆ. ಆಗಸ್ಟ್ 12ರಂದು ಕೊಂಕಣ ರೈಲ್ವೆಯು ಮಂಗಳೂರು ಜಂಕ್ಷನ್ ಮತ್ತು ಕಾರವಾರ ನಡುವಿನ ಸೇವೆಯನ್ನು ಮರು ಪರಿಚಯಿಸಲು ಅಧಿಸೂಚನೆ ಹೊರಡಿಸಲು ನೈರುತ್ಯ ರೈಲ್ವೆಯನ್ನು (ಎಸ್‌ಡಬ್ಲ್ಯುಆರ್) ಕೇಳಿತ್ತು. ಅದರಂತೆ ಆ.13ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಆಹಾ!: ವಿಸ್ಟಾಡೋಮ್ ಕೋಚ್‌ನಲ್ಲಿ ಕುಳಿತು ನೋಡಿ ಪಶ್ಚಿಮ ಘಟ್ಟದ ಸೌಂದರ್ಯಆಹಾ!: ವಿಸ್ಟಾಡೋಮ್ ಕೋಚ್‌ನಲ್ಲಿ ಕುಳಿತು ನೋಡಿ ಪಶ್ಚಿಮ ಘಟ್ಟದ ಸೌಂದರ್ಯ

ರೈಲು ಸಂಖ್ಯೆ 06211 ಆಗಸ್ಟ್ 16ರಿಂದ ನವೆಂಬರ್ 26ರವರೆಗೆ ಮಂಗಳೂರು ಜಂಕ್ಷನ್ ಮತ್ತು ಕಾರವಾರದ ನಡುವೆ ಸೇವೆಯನ್ನು ಪುನರಾರಂಭಿಸಲಿದ್ದು, ಇದರ ಇನ್ನೊಂದು ಜೋಡಿ (ರೈಲು ಸಂಖ್ಯೆ: 06212) ಆಗಸ್ಟ್ 17ರಿಂದ ನವೆಂಬರ್ 27ರವರೆಗೆ ಕಾರವಾರ ಮತ್ತು ಮಂಗಳೂರು ಜಂಕ್ಷನ್ ನಡುವೆ ಕಾಯ್ದಿರಿಸಿದ ಆಸನಗಳೊಂದಿಗೆ ವಿಶೇಷವಾಗಿ ಓಡಾಟ ನಡೆಸಲಿದೆ.

Yeshwanthpur-Karwar-Yeshwanthpur Train-Weekly Express Have Been Resumed With VistaDom Coach From Aug 16

ರಾಜ್ಯ ಸರ್ಕಾರವು ಜೂನ್‌ನಿಂದ ವಿವಿಧ ಹಂತಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದುದರಿಂದ, ಕರಾವಳಿಯ ಜನರು ಭಾಗಶಃ ರದ್ದುಗೊಳಿಸಿದ ಸೇವೆಯನ್ನು ಪುನಃ ಪರಿಚಯಿಸಲು ಒತ್ತಾಯಿಸಿದ್ದರು. ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಉಡುಪಿ-ಚಿಕ್ಕಮಗಳೂರು ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕುಮಟಾ ಶಾಸಕ ದಿನಕರ ಶೆಟ್ಟಿ ಮತ್ತು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಅನೇಕ ಚುನಾಯಿತ ಪ್ರತಿನಿಧಿಗಳು ಈ ಬೇಡಿಕೆಯನ್ನು ಬೆಂಬಲಿಸಿದ್ದರು.

ಕಾರವಾರದವರೆಗೆ ವಿಸ್ಟಾಡೋಮ್ ಬೋಗಿಗಳು

ಯಶವಂತಪುರ- ಕಾರವಾರ- ಯಶವಂತಪುರ ಟ್ರೈ- ವೀಕ್ಲಿ ವಿಶೇಷ (ಹಗಲಿನ) ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಕರಾವಳಿ ಕರ್ನಾಟಕದ ಸೌಂದರ್ಯ ಅನುಭವಿಸಲು ಸಹಕಾರಿಯಾಗಿದೆ. ಪ್ರಸ್ತುತ ಯಶವಂತಪುರ ಮತ್ತು ಮಂಗಳೂರು ನಡುವೆ ಚಲಿಸುತ್ತಿರುವ ಈ ರೈಲಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಎರಡು ವಿಸ್ಟಾಡೋಮ್ ಬೋಗಿಗಳನ್ನು ಜುಲೈ ಮಧ್ಯದಲ್ಲಿ ಪರಿಚಯಿಸಲಾಗಿತ್ತು. ಇದು ಭಾರೀ ಯಶಸ್ಸು ಕೂಡ ಕಂಡಿತ್ತು.

Yeshwanthpur-Karwar-Yeshwanthpur Train-Weekly Express Have Been Resumed With VistaDom Coach From Aug 16

ಪ್ರತಿ ಕೋಚ್‌ನಲ್ಲಿ 44 ಒರಗಿರುವ ಮತ್ತು ತಿರುಗುವ ಆಸನಗಳು, ಅಗಲವಾದ ಕಿಟಕಿಗಳು ಮತ್ತು ಅಗಲವಾದ ಹಿಂಭಾಗದ ಕಿಟಕಿಗಳು ಇರುವುದರಿಂದ ವಿಸ್ಟಾಡೋಮ್ ಬೋಗಿಗಳು ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಪ್ರಯಾಣಿಕರಿಗೆ ಉಣಬಡಿಸುತ್ತಿತ್ತು. ಹೀಗಾಗಿ ಈವರೆಗೆ ಬೆಂಗಳೂರಿನಿಂದ (ಯಶವಂತಪುರ) ಮಂಗಳೂರಿಗೆ ಪ್ರಯಾಣವು ಆಕರ್ಷಕವಾಗಿತ್ತು. ಮುಂದಿನ ವಾರದಿಂದ ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿಯ ಸೌಂದರ್ಯವನ್ನು ಕೂಡ ಪ್ರಯಾಣಿಕರು ಮತ್ತು ಪ್ರವಾಸಿಗರು ಸವಿಯಬಹುದಾಗಿದೆ.

Yeshwanthpur-Karwar-Yeshwanthpur Train-Weekly Express Have Been Resumed With VistaDom Coach From Aug 16

Recommended Video

ಅಮೆರಿಕಾ ಯಾಮಾರಿದ್ದು ಎಲ್ಲಿ? ದೊಡ್ಡಣ್ಣ ಮಾಡಿದ ಎಡವಟ್ಟಿನ ನಿರ್ಧಾರ ಯಾವ್ದು? | Oneindia Kannada

ಒಟ್ಟು 14 'ಲಿಂಕೆ ಹಾಫ್‌ಮನ್ ಬುಷ್' (ಎಲ್‌ಎಚ್‌ಬಿ) ಕೋಚ್‌ಗಳನ್ನು ಹೊಂದಿರುವ ಈ ರೈಲಿನಲ್ಲಿ ಎಸಿ ಚೇರ್‌ಕಾರ್ 1, ಸೆಕೆಂಡ್ ಸೀಟಿಂಗ್ 9, ವಿಸ್ಟಾ ಡೋಮ್ 2, ಜನರೇಟರ್ ಕಾರ್ 2 ಇರಲಿದೆ. ಸಾಮಾಜಿಕ ಅಂತರ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಮಾನದಂಡಗಳ ಪಾಲನೆಯೊಂದಿಗೆ ರೈಲು ಸಂಚಾರ ಪ್ರಾರಂಭಿಸಲಾಗುತ್ತಿದೆ. ಪ್ರಯಾಣಿಕರು ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ಮುಂಜಾಗೃತಾ ಕ್ರಮ ಅನುಸರಿಸುವಂತೆ ಕೊಂಕಣ ರೈಲ್ವೆ ಕೋರಿದೆ.

English summary
The services of Yeshwanthpur-Karwar-Yeshwanthpur Train-Weekly Express have been resumed with VistaDom Coach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X