ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇರಾನ್‌ನಲ್ಲಿ 19 ತಿಂಗಳಿನಿಂದ ಸಿಲುಕಿಕೊಂಡಿರುವ ಭಟ್ಕಳಿಗ!

|
Google Oneindia Kannada News

ಕಾರವಾರ, ಜುಲೈ 18: ಕೈಯಲ್ಲಿ ವೀಸಾ, ಹಣ ಇಲ್ಲದೇ ಭಟ್ಕಳ ಮೂಲದ ಯಾಸೀನ್ ಷಾ (31) ಎನ್ನುವಾತ 19 ತಿಂಗಳಿಗೂ ಹೆಚ್ಚು ಕಾಲ ಇರಾನ್‌ನ ಬಂದರಿನಲ್ಲಿ ಸಿಲುಕಿಕೊಂಡಿದ್ದಾನೆ. ಮರಳಿ ಭಾರತಕ್ಕೆ ಬರಲು ಹಲವು ಸಂಘ- ಸಂಸ್ಥೆಗಳು, ಸರ್ಕಾರಿ ಇಲಾಖೆಗಳ ನೆರವಿಗಾಗಿ ಈತ ಕಾಯುತ್ತಿದ್ದಾನೆ.

ಸರಕು ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸ ಮಾಡುತ್ತಿದ್ದ ಯಾಸೀನ್, 2020ರ ಜನವರಿಯಲ್ಲಿ ಇರಾನ್ ಬಂದರಿನಲ್ಲಿ ಇಳಿದಿದ್ದ. ಕೋವಿಡ್ ಕಾರಣದಿಂದ ಹಡಗನ್ನು ಬಂದರಿನಲ್ಲೇ ಲಂಗರು ಹಾಕಲಾಗಿತ್ತು. ಈ ಹಡಗು ಮೂವರ ಪಾಲುದಾರಿಕೆ ಹೊಂದಿದ್ದು, ಈ ಮಾಲೀಕರುಗಳ ನಡುವಿನ ವಿವಾದದ ಕಾರಣದಿಂದ ಒಂದೂವರೆ ವರ್ಷಗಳ ಕಾಲ ಯಾರೂ ಈತನನ್ನು ಸಂಪರ್ಕಿಸಿಲ್ಲ. ಜೊತೆಗೆ ಒಂದು ವರ್ಷಗಳ ವೇತನವನ್ನೇ ನೀಡಿಲ್ಲ ಎನ್ನಲಾಗಿದೆ. ಇದರೊಂದಿಗೆ, ಇರಾನ್‌ಗೆ ಕರೆದೊಯ್ದಿದ್ದ ಏಜೆನ್ಸಿ ಈತನನ್ನು ಸಂಪರ್ಕಿಸಿಲ್ಲ ಎನ್ನಲಾಗಿದೆ. ಇದೀಗ ಸರಕು ಹಡಗುಗಳ ಚಲನೆ ಪುನರಾರಂಭಗೊಂಡಿದ್ದರೂ ಯಾಸೀನ್ ಇರುವ ಹಡಗು ಅಲ್ಲಿಂದ ತೆರಳಿಲ್ಲ ಎನ್ನಲಾಗಿದೆ.

ಯಾಸೀನ್ ಇರಾನ್‌ಗೆ ತೆರಳಲು ಏಜೆನ್ಸಿಯೊಂದರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಇರಾನ್‌ನಲ್ಲಿ ಬದಲಿಸಲಾಗಿತ್ತು. ಬಹುತೇಕ ಇರಾನ್ ಏಜೆನ್ಸಿಗಳು ಪರ್ಸಿಯನ್ ಭಾಷೆಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು, ವೇತನ ಪಾವತಿಸದೆ ಕೆಲಸಗಾರರಿಗೆ ವಂಚಿಸುತ್ತದೆ. ಆದರೆ, ಪರ್ಸಿಯನ್ ಭಾಷೆ ಅಲ್ಪಸ್ವಲ್ಪ ತಿಳಿದಿದ್ದ ಯಾಸೀನ್, ಏಜೆನ್ಸಿಯ ಒಪ್ಪಂದ ಪತ್ರಕ್ಕೆ ಸಹಿ ಹಾಕದೆ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ.

Yaseen shah from Bhatkal Stranded in Iran from past 19 months seeks help

ಕಳೆದ ಆರು ತಿಂಗಳಿನಿಂದ ಯಾಸೀನ್‌ಗೆ ಆಹಾರ ಸಾಮಗ್ರಿಗಳನ್ನೂ ನೀಡುತ್ತಿಲ್ಲ. ಬಂದರಿನಲ್ಲಿ ಲಂಗರು ಹಾಕಿರುವ ಇತರ ಹಡಗುಗಳಿಂದ ಆಹಾರಗಳನ್ನು ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆನ್ನಲಾಗಿದೆ. ತಾನು ಇರಾನ್‌ನಲ್ಲಿ ಅನುಭವಿಸುತ್ತಿರುವ ಸಂಕಷ್ಟದ ಕುರಿತು ಯಾಸೀನ್ ಭಾರತೀಯ ದೂತಾವಾಸ ಮತ್ತು ಇತರ ಸಂಸ್ಥೆಗಳಿಗೆ ಸಂಪರ್ಕಿಸಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

Recommended Video

ದ್ರಾವಿಡ್ ಅವರು ವೆಲ್ಕಮ್ ಎಂದು ಬರಮಾಡಿಕೊಂಡ ಆಟಗಾರರು | Sri Lanka vs India 1st ODI | Oneindia Kannada

ಭಾರತ ಮತ್ತು ವಿದೇಶದ ಹಲವಾರು ಸಂಸ್ಥೆಗಳು ಯಾಸೀನ್‌ಗೆ ಸಹಾಯ ಮಾಡಲು ಪ್ರಯತ್ನಿಸುತ್ತಿವೆ. ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಈಗಾಗಲೇ ಸಂಪರ್ಕ ಸಾಧಿಸಲಾಗಿದೆ. ಇರಾನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯನಿಗೆ ವೇತನ ಪಾವತಿಸಿ, ಮರಳಿ ಮನೆಗೆ ಕರೆತರಲು ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದು ಏಮ್ ಇಂಡಿಯಾ ಫೋರಂ ಸ್ಥಾಪಕ ಅಧ್ಯಕ್ಷ ಶೇಖ್ ಮುಜಾಫರ್ ಶಿರಾಲಿ ಒತ್ತಾಯಿಸಿದ್ದಾರೆ.

English summary
Yaseen shah from Bhatkal, indian Stranded in Iran port chabahar, Yaseen shah stranded Iran
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X