ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ-ಕುಮಟಾ ರಸ್ತೆ ಅಗಲೀಕರಣ; ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ

|
Google Oneindia Kannada News

ಕಾರವಾರ, ಡಿಸೆಂಬರ್ 24: ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಸ್ತೆ ಅಗಲೀಕರಣವನ್ನು ವಿರೋಧಿಸಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ಯೋಜನೆಗಾಗಿ ಸುಮಾರು 2 ಲಕ್ಷ ಮರಳನ್ನು ಕಡಿಯಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ) 5.5 ಮೀಟರ್ ಇರುವ ಶಿರಸಿ-ಕುಮಟಾ ರಸ್ತೆಯನ್ನು 18 ಮೀಟರ್ ಅಗಲ ಮಾಡುವ ಕಾಮಗಾರಿ ಕೈಗೊಳ್ಳಲಿದೆ. ಈ ಯೋಜನೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಅತಿ ಕಡಿಮೆ ಸಂಚಾರ ದಟ್ಟಣೆ ಇರುವ ಈ ರಸ್ತೆ ನಿತ್ಯ ಹರಿದ್ವರ್ಣದ ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವೆ ಹಾದು ಹೋಗುತ್ತದೆ. ಅವೈಜ್ಞಾನಿಕವಾಗಿ ಈ ರಸ್ತೆ ಅಗಲೀಕರಣ ಕಾಮಗಾರಿ ಯೋಜನೆ ರೂಪಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

 ಶಿರಸಿ- ಕುಮಟಾ ಮಾರ್ಗದ ಗೊಂದಲ: ರಸ್ತೆ‌ ಬಂದ್ ಮಾಡದೇ ನಡೆಯಲಿದೆ ಕಾಮಗಾರಿ ಶಿರಸಿ- ಕುಮಟಾ ಮಾರ್ಗದ ಗೊಂದಲ: ರಸ್ತೆ‌ ಬಂದ್ ಮಾಡದೇ ನಡೆಯಲಿದೆ ಕಾಮಗಾರಿ

Writ Petition Karnataka High Court Against Sirsi Kumta Road Widening

ಶಿರಸಿ-ಕುಮಟಾ ರಸ್ತೆ ಅಗಲೀಕರಣ ಯೋಜನೆಗೆ ಸುಮಾರು 2 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ. ಆದ್ದರಿಂದ, ಇಂತಹ ಯೋಜನೆಗೆ ಅನುಮತಿ ನೀಡಬಾರದು ಎಂದು ರಿಟ್ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

 ಬಂದ್ ಮಾಡಿದರೂ ನಿಂತಿಲ್ಲ ಓಡಾಟ; ಶಿರಸಿ- ಕುಮಟಾ ಮಾರ್ಗದ ಗೊಂದಲ ಬಂದ್ ಮಾಡಿದರೂ ನಿಂತಿಲ್ಲ ಓಡಾಟ; ಶಿರಸಿ- ಕುಮಟಾ ಮಾರ್ಗದ ಗೊಂದಲ

ಶಿರಸಿ-ಕುಮಟಾ ರಸ್ತೆ ಅಗಲೀಕರಣ ಹಿನ್ನಲೆಯಲ್ಲಿ ಅಕ್ಟೋಬರ್ 12ರಿಂದಲೇ ರಸ್ತೆಯಲ್ಲಿ ವಾಹನ ಸಂಚಾರವನ್ನು ಒಂದೂವರೆ ವರ್ಷದ ಅವಧಿಗೆ ನಿಷೇಧಿಸಲಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿರುವ ಗ್ರಾಮಗಳ ಜನರ ಸಂಚಾರಕ್ಕೆ ಪರ್ಯಾಯ ರಸ್ತೆಗಳ ಹುಡುಕಾಟ ಮುಂದುವರೆದಿದೆ.

Recommended Video

Australiaದಲ್ಲಿ ಹೆಚ್ಚಾದ ಕೊರೊನ ಹಿನ್ನೆಲೆಯಲ್ಲಿ ಟೆಸ್ಟ್ ಪಂದ್ಯಕ್ಕೆ ಅಡ್ಡಿ | Oneindia Kannada

ಈ ರಸ್ತೆಯನ್ನು ಅಗಲೀಕರಣ ಮಾಡವುದಕ್ಕೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ವಾಹನ ದಟ್ಟಣೆಯೇ ಇಲ್ಲದ ರಸ್ತೆಯ ಅಗಲೀಕರಣ ಏಕೆ? ಎಂಬುದು ಜನರ ಪ್ರಶ್ನೆಯಾಗಿದೆ.

English summary
United Conservation Movement moved Karnataka high court against widening of Sirsi Kumta road by NHAI. This project would axe over 2 lakh trees in evergreen forest of western ghat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X