ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ ಬುಕ್ ನಲ್ಲಿ ಪರಿಚಯಿಕೊಂಡ ಮಹಿಳೆಯು ವಂಚಿಸಿದ ಮೊತ್ತ ಎರಡು ಕೋಟಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 17: ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡು, ಅನಾಥ ಮಕ್ಕಳಿಗೆ ನೆರವು ನೀಡುವುದಾಗಿ ನಂಬಿಸಿ ಮುಂಡಗೋಡ ಟಿಬೆಟಿಯನ್‌ ಕಾಲೋನಿಯ ಕರ್ಮ ಖೆಡಪ್ ಎನ್ನುವವರಿಗೆ 1,96,84,000 ರುಪಾಯಿ ವಂಚಿಸಲಾಗಿದೆ.

ಎಸ್‌ಜಿಟಿ ರೋಲ್ಯಾಂಡ್ ಮಿಶೆಲ್ ಎನ್ನುವ ಮಹಿಳೆಯು ಫೇಸ್‌ಬುಕ್‌ನಲ್ಲಿ ಕರ್ಮ ಖೆಡಪ್ ಅವರನ್ನು ಪರಿಚಯಿಸಿಕೊಂಡು, ಆ ನಂತರ ವಾಟ್ಸಾಪ್ ನಲ್ಲಿ ಸಂಪರ್ಕಕ್ಕೆ ಬಂದಿದ್ದಳು. "ನಾನು ಅನಾಥೆ. ಅಮೆರಿಕಾದ ಸೇನೆಯಲ್ಲಿ ಉದ್ಯೋಗ ಮಾಡುತ್ತಿದ್ದೇನೆ" ಎಂದು ಆಕೆ ನಂಬಿಸಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಐಎಂಎ ಹಗರಣಕ್ಕೆ ಸ್ಫೋಟಕ ತಿರುವು ನೀಡಿದ ಸಚಿವರ ಹೇಳಿಕೆಐಎಂಎ ಹಗರಣಕ್ಕೆ ಸ್ಫೋಟಕ ತಿರುವು ನೀಡಿದ ಸಚಿವರ ಹೇಳಿಕೆ

ಭಾರತಕ್ಕೆ ಬಂದು ಅನಾಥ ಮಕ್ಕಳ ಸೇವೆ ಮಾಡುವ ಬಯಕೆ ನನಗಿದೆ ಎಂದು ಹೇಳಿಕೊಂಡಿದ್ದ ಆಕೆ, 2.5 ಮಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ನೆರವಾಗಿ ನೀಡುವುದಾಗಿ ನಂಬಿಸಿದ್ದಳು. ಹಣವನ್ನು ವಿಲಿಯಮ್ ಜಾನ್ಸನ್ ಎನ್ನುವವರಿಂದ ತಲುಪಿಸುವುದಾಗಿಯೂ ಹೇಳಿದ್ದಳು ಎಂದು ತಿಳಿಸಿದ್ದಾರೆ.

Woman introduced through face book cheated 2 crore rupees

ಕೆಲವು ದಿನಗಳ ನಂತರ ವಿಲಿಯಮ್ ಜಾನ್ಸನ್ ಎಂಬಾತ ಕರ್ಮ ಖೆಡಪ್ ಅವರಿಗೆ ಕರೆ ಮಾಡಿ, ಹಣ ತಲುಪಿಸಲು ವಿವಿಧ ತೆರಿಗೆಗೆ ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ. ಆ ನಂತರ ಭಾರತದ ವಿವಿಧ ರಾಜ್ಯದ ಬ್ಯಾಂಕ್‌ ಖಾತೆಗಳಿಗೆ ಅವರಿಂದ ಹಣ ಹಾಕಿಸಿಕೊಂಡಿದ್ದಾನೆ.

ವಂಚನೆ ಆಗಿರುವ ಹಣವನ್ನು ವಾಪಸ್ ಕೊಡಿಸುವಂತೆಯೂ ಆರೋಪಿಗಳನ್ನು ಬಂಧಿಸುವಂತೆಯೂ ಕರ್ಮ ಖೆಡಪ್ ಅವರು ಜಿಲ್ಲಾ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.

English summary
Woman introduced through face book cheated 2 crore rupees to Mundagod tietan colony resident Karma Kedap. Here is the story from Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X