ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತಕುಮಾರ್ ಹೆಗಡೆ ಬಳಿ ಬೂಟಿನೇಟು ತಿಂದಿದ್ದ ಬಿಜೆಪಿ ಅಭ್ಯರ್ಥಿ ಯಾರು?

|
Google Oneindia Kannada News

Recommended Video

ಅನಂತ್ ಕುಮಾರ್ ಹೆಗ್ಡೆ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಕಾಂಗ್ರೆಸ್ | Oneindia Kannada

ಕಾರವಾರ, ನವೆಂಬರ್ 26: ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಈ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಬಳಿ ಬೂಟಿನ ಏಟು ತಿಂದಿದ್ದರು, ನಂತರ ಅವರನ್ನು ಬಿಜೆಪಿಯಿಂದ ಹೊರದಬ್ಬಲಾಗಿತ್ತು ಎಂದು ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ್ ಆರೋಪಿಸಿದ್ದಾರೆ.

ಯಲ್ಲಾಪುರದಲ್ಲಿ ನಡೆದ ಕಾಂಗ್ರೆಸ್ ಪರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ರವೀಂದ್ರ ನಾಯ್ಕ್, ಹೆಬ್ಬಾರ್ ಈ ಹಿಂದೆ ಬಿಜೆಪಿ ಜಿಲ್ಲಾ

'ಶಿವರಾಮ’, 'ರಘುನಾಥ’ರ ನಡುವೆ ನೆಪ ಮಾತ್ರಕೆ 'ಭೀಮ’!'ಶಿವರಾಮ’, 'ರಘುನಾಥ’ರ ನಡುವೆ ನೆಪ ಮಾತ್ರಕೆ 'ಭೀಮ’!

ಅಧ್ಯಕ್ಷನಾಗಿದ್ದಾಗ, ಅನಂತಕುಮಾರ್ ಬಳಿ ಬೂಟಿನಿಂದ ಹೊಡೆತ ತಿಂದಿದ್ದರು. ಆಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಈಗ ಮತ್ತೆ ಬಿಜೆಪಿ ಸೇರಿದ್ದಾರೆ. ಅವರಿಗೆ ನಾಚಿಕೆಯಾಗಬೇಕು, ಅನಂತಕುಮಾರ್ ಹೆಗಡೆ ಒಬ್ಬ ಅರೆಹುಚ್ಚ, ಎಂದು ವಾಗ್ದಾಳಿ ನಡೆಸಿದ್ದಾರೆ.

Who Is The BJP Candidate Who Shoes Slaps By Ananthakumar Hegde?

ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, "ಶಿವರಾಮ್ ಹೆಬ್ಬಾರನ್ನು ಕಾಂಗ್ರೆಸ್ ಗೆ ಕರೆತಂದದ್ದು ಆರ್.ವಿ.ದೇಶಪಾಂಡೆ, ಅವರಿಗೆ ಚೂರಿ ಹಾಕಿ ಹೋಗಿದ್ದಾರೆ, ಹಾಗೆಯೇ ಮತ ನೀಡಿದ ಜನರಿಗೂ ಚೂರಿ ಹಾಕಿದ್ದಾರೆ, ಇವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ" ಎಂದರು. ಹೆಬ್ಬಾರ್ ಮತ್ತು ಬಿಜೆಪಿಯವರು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿದ್ದಾರೆ. ಎಂದು ಹೇಳಿದರು.

ಉಪಚುನಾವಣೆಗಾಗಿ ಯಲ್ಲಾಪುರದಲ್ಲಿ 'ಶತ್ರು’ಗಳಾದ ಅಪ್ಪ- ಮಗಉಪಚುನಾವಣೆಗಾಗಿ ಯಲ್ಲಾಪುರದಲ್ಲಿ 'ಶತ್ರು’ಗಳಾದ ಅಪ್ಪ- ಮಗ

ಆಪರೇಷನ್ ಕಮಲದ ಪಿತಾಮಹ ಯಡಿಯೂರಪ್ಪ, ಅನರ್ಹ ಶಾಸಕರಿಗೆ 20 ಕೋಟಿ ನೀಡಿ ಕರೆದುಕೊಂಡುಹೋಗಿದ್ದಾರೆ. ಲಂಚದ ಹಣದ ಮೂಲಕ ಅನರ್ಹ ಶಾಸಕರನ್ನು ಖರೀದಿಸಲಾಗಿದೆ, ಈ ಮೂಲಕ ಸಮ್ಮಿಶ್ರ ಸರ್ಕಾರವನ್ನು ಕೆಡವಿದರು. ಅಲ್ಲದೇ ಮಹಾರಾಷ್ಟ್ರದಲ್ಲಿಯೂ ಕಳ್ಳರ ರೀತಿ ರಾತ್ರೋರಾತ್ರಿ ಸರ್ಕಾರ ರಚನೆ ಮಾಡಿದರು. ಇವರಿಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.

Who Is The BJP Candidate Who Shoes Slaps By Ananthakumar Hegde?

"ಅನಂತಕುಮಾರ್ ಹೆಗಡೆ ಗ್ರಾಮ ಪಂಚಾಯತ್ ಸದಸ್ಯನಾಗಲೂ ನಾಲಾಯಕ್, ಅವನಿಗೆ ಸಂವಿಧಾನವೇ ಗೊತ್ತಿಲ್ಲ, ತಾನು ಏನು ಮಾತನಾಡುತ್ತಿದ್ದೇನೆ ಎಂಬ ಅರಿವಿರುವುದಿಲ್ಲ. ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಎನ್ನುತ್ತಾರೆ. ನಾನು ಪ್ರಧಾನಿಯಾಗಿದ್ದರೆ ಅವನನ್ನು ಸಚಿವ ಸ್ಥಾನದಿಂದ ಕಿತ್ತು ಹಾಕುತ್ತಿದ್ದೆ ಎಂದರು.

ಕೆಲವರು ನಾನು ಬಿಜೆಪಿ ಸೇರುತ್ತೇನೆ ಎನ್ನುತ್ತಾರೆ, ಆದರೆ ನನ್ನ ಹೋರಾಟವೇ ಕೋಮುವಾದಿ, ಜಾದಿವಾದಿಗಳ ವಿರುದ್ದ, ನಾನೇಗೆ ಬಿಜೆಪಿ ಸೇರಲು ಸಾಧ್ಯ ಎಂದು ಸಮಜಾಯಿಷಿ ನೀಡಿದರು. ಉಪ ಚುನಾವಣೆ ನಂತರ ಯಡಿಯೂರಪ್ಪ ಮನೆಗೆ ಹೊಗುತ್ತಾರೆ. ಮತ್ತೆ ಮಧ್ಯಂತರ ಚುನಾವಣೆ ಬರಲಿದೆ, ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

English summary
Yellapur BJP Candidate Shivaram Hebbar Had Earlier Eaten Shoes Slaps Near By MP Ananthakumar Hegde, Congress Leader Ravindra Naik Alleged During A Congress Election Rally In Yellapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X