ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಲೆಗೆ ಬಿತ್ತು ಅಪರೂಪದ 'ವ್ಹೇಲ್ ಶಾರ್ಕ್'; ಸಮುದ್ರಕ್ಕೆ ವಾಪಸ್

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜನವರಿ 22; ಕುಮಟಾ ತಾಲೂಕಿನ ಗೋಕರ್ಣದ ತಡದಿ ಬಂದರಿನಲ್ಲಿ ಬೃಹತ್ ತಿಮಿಂಗಿಲ ಸೊರ (ವ್ಹೇಲ್ ಶಾರ್ಕ್) ಮೀನುಗಾರರ ಬಲೆಗೆ ಬಿದ್ದಿದೆ. ಮೀನುಗಾರರು ಅದನ್ನು ಸಮುದ್ರಕ್ಕೆ ವಾಪಸ್ ಬಿಟ್ಟಿದ್ದಾರೆ.

ಈ ವ್ಹೇಲ್ ಶಾರ್ಕ್ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುತ್ತದೆ. ಯಾರೂ ಕೂಡ ಇದನ್ನು ಆಹಾರಕ್ಕಾಗಿ ಬಳಸದ‌‌ ಕಾರಣ ಮೀನುಗಾರರು ಅದರ ಜೊತೆ ಫೋಟೋ ತೆಗೆಸಿಕೊಂಡು ವಾಪಸ್ಸು ಕಡಲಿಗೆ ಬಿಡಲಾಗಿದೆ.

ಭಾರತದ ಕಂಪನಿಯ ಮೀನು ಆಮದು ನಿಲ್ಲಿಸಿದ ಚೀನಾ ಭಾರತದ ಕಂಪನಿಯ ಮೀನು ಆಮದು ನಿಲ್ಲಿಸಿದ ಚೀನಾ

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ತದಡಿ ಭಾಗದ ಮೀನುಗಾರರಿಗೆ ಈ ಮೀನು ದೊರೆತಿದೆ. ಇದು ಬರೋಬ್ಬರಿ 300 ಕೆಜಿಗೂ ಹೆಚ್ಚು ಹಾಗೂ 9 ಅಡಿಗೂ ಹೆಚ್ಚು ಉದ್ದವಿದೆ.

ಆಸ್ಟ್ರೇಲಿಯಾದ ಸಮುದ್ರದಲ್ಲಿ ಸರ್ಫಿಂಗ್‌ಗೆ ಹೋದ ವ್ಯಕ್ತಿಯನ್ನು ತಿಂದ ಶಾರ್ಕ್ ಮೀನು ಆಸ್ಟ್ರೇಲಿಯಾದ ಸಮುದ್ರದಲ್ಲಿ ಸರ್ಫಿಂಗ್‌ಗೆ ಹೋದ ವ್ಯಕ್ತಿಯನ್ನು ತಿಂದ ಶಾರ್ಕ್ ಮೀನು

Whale Shark Found In Tadadi Port Gokarna

ಈ ಮೀನನ್ನು ಬೇಟೆಯಾಡುವುದು ಹಾಗೂ ಆಹಾರಕ್ಕಾಗಿ ಬಳಸುವುದು ಅಪರಾಧವಾಗಿದೆ. ಇದನ್ನು ತಿಳಿದ ಮೀನುಗಾರರು ವ್ಹೇಲ್ ಶಾರ್ಕ್‌ ಅನ್ನು ವಾಪಸ್ಸು ಕಡಲಿಗೆ ಬಿಟ್ಟಿದ್ದಾರೆ. ಈ ಮೀನಿನ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಹಾರಂಗಿಯಲ್ಲಿ ಬಲೆಗೆ ಬಿತ್ತು ಅಪರೂಪದ ಈ ಬೃಹತ್ ಮೀನು ಹಾರಂಗಿಯಲ್ಲಿ ಬಲೆಗೆ ಬಿತ್ತು ಅಪರೂಪದ ಈ ಬೃಹತ್ ಮೀನು

"ಗುಜರಾತ್ ಕಡಲಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಇವು, ಅರಬ್ಬೀ ಸಮುದ್ರದಲ್ಲೂ ಕಾಣಸಿಗುತ್ತವೆ. ಆದರೆ, ಇದು ಇತ್ತೀಚೆಗೆ ಬಹಳ ಅಪರೂಪವಾಗಿವೆ. ಹೀಗಾಗಿ ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದೆ" ಎಂದು ಕಡಲ ಜೀವ ವಿಜ್ಞಾನ ಕೇಂದ್ರದ ಡಾ. ಶಿವಕುಮಾರ್ ಹರಗಿ ಹೇಳಿದ್ದಾರೆ.

Whale Shark Found In Tadadi Port Gokarna

ವಿಶ್ವದ ಅತಿದೊಡ್ಡ ಮೀನುಗಳ ಪೈಕಿ ಇದು ಕೂಡ ಒಂದು ವಿಶ್ಲೇಷಿಸಲಾಗುತ್ತದೆ. ಶಾಲಾ ಬಸ್‌ನ ಗಾತ್ರದವರೆಗೆ ಬೆಳೆಯುತ್ತವೆ ಎಂಬ ಮಾಹಿತಿಯೂ ಇದೆ. ಆದರೆ, ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುವ ಇವು, ನಿಧಾನವಾಗಿ ಈಜುತ್ತವೆ.

Recommended Video

ಬಿಜೆಪಿಯಲ್ಲಿ ಬಿರುಕು !! | Oneindia Kannada

English summary
Whale shark found in Tadadi port near Gokarna during the time of fishing. Fishermen returned the Whale shark to sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X