ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಕೋಲಾ ಬಳಿ ಹಳಿ ಮೇಲೆ ಬಿದ್ದ ಗುಡ್ಡದ ಮಣ್ಣು: ರೈಲು ಸಂಚಾರದಲ್ಲಿ ವ್ಯತ್ಯಯ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 23: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಹುಲಿದೇವರವಾಡದ ಹತ್ತಿರ ಇರುವ ರೈಲ್ವೆ ಸುರಂಗ ಮಾರ್ಗದ ಮುಂಭಾಗದಲ್ಲಿ ಇಂದು ಮಧ್ಯಾಹ್ನ ಗುಡ್ಡ ಕುಸಿತ ಉಂಟಾಗಿದೆ.

 ಬಂಡೆ ತೆರವು ಕಾರ್ಯಾಚರಣೆ; ಇಂದು ಕೂಡ ಮಂಗಳೂರು -ಬೆಂಗಳೂರು ರೈಲು ಸಂಚಾರ ಸ್ಥಗಿತ ಬಂಡೆ ತೆರವು ಕಾರ್ಯಾಚರಣೆ; ಇಂದು ಕೂಡ ಮಂಗಳೂರು -ಬೆಂಗಳೂರು ರೈಲು ಸಂಚಾರ ಸ್ಥಗಿತ

ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಒಂದು ಗಂಟೆ ತಡವಾಗಿ ಚಲಿಸಿವೆ.

variation in rail traffic due to mud falls on the railway track in Ankola

ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಹಳಿಯ ಪಕ್ಕದ ಗುಡ್ಡ ಕುಸಿದು, ಹಳಿ ಮೇಲೆ ಮಣ್ಣು ಬಿದ್ದಿದೆ. ಇದನ್ನು ಟ್ರ್ಯಾಕ್ ಮನ್ ಗಣಪತಿ ನಾಯಕ್ ಅವರು ಕಂಡು ರೈಲ್ವೆ ನಿಲ್ದಾಣಕ್ಕೆ ಮಾಹಿತಿ ನೀಡಿದ್ದಾರೆ. ತದನಂತರ ಜೆಸಿಬಿಯನ್ನು ಸ್ಥಳಕ್ಕೆ ತಂದು ಮಣ್ಣನ್ನು ತೆರವು ಮಾಡುವ ಕಾರ್ಯ ಮಾಡಲಾಗುತ್ತಿದೆ. ಇದರಿಂದಾಗಿ ಮಧ್ಯಾಹ್ನ ಚಲಿಸುವ ರೈಲುಗಳು ಒಂದು ಗಂಟೆ ತಡವಾಗಿ ಚಲಿಸುತ್ತಿವೆ. ಕಾರವಾರ, ಕುಮಟಾ ನಿಲ್ದಾಣಗಳಲ್ಲಿ ಹಲವು ರೈಲುಗಳನ್ನು ನಿಲ್ಲಿಸಲಾಗಿದೆ ಎಂಬ ಮಾಹಿತಿ ಇದೆ.

English summary
Due to heavy rain in uttara kannada, landslide happened in hulidevarawada railway tunnel near ankola. This caused variation in rail traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X