ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ: ಮತ್ತೆ ಎಸ್‌ಪಿ ವರ್ಗಾವಣೆ ಸುದ್ದಿ ಸದ್ದು!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂಬರ್ 28: ಕಳೆದ ಎರಡು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ವರ್ಗಾವಣೆ ವಿಚಾರ ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡಿತ್ತು. ವರ್ಗಾವಣೆ ಆದೇಶರದ್ದಿನ ಬಳಿಕ ಮತ್ತೆ ಇದೀಗ ಇದೇ ವಿಚಾರ ಸಾರ್ವಜನಿಕರಲ್ಲಿ ಚರ್ಚೆಗೆ ಬಂದಿದೆ.

ಕಳೆದ ಎರಡು ವರ್ಷದಿಂದ ಶಿವಪ್ರಕಾಶ್ ದೇವರಾಜು ಎಸ್‌ಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿನಾಯಕ ಪಾಟೀಲ್ 2019ರ ಆಗಸ್ಟ್‌ನಲ್ಲಿ ವರ್ಗಾವಣೆಯಾದ ಬಳಿಕ ಶಿವಪ್ರಕಾಶ್ ದೇವರಾಜು ಜಿಲ್ಲೆಗೆ ನಿಯೋಜನೆಗೊಂಡಿದ್ದರು.

ಉತ್ತರ ಕನ್ನಡದ ಮೊದಲ ಮಹಿಳಾ ಎಸ್ಪಿಯಾಗಿ ವರ್ತಿಕಾ ಕಟಿಯಾರ್ ನೇಮಕ ಉತ್ತರ ಕನ್ನಡದ ಮೊದಲ ಮಹಿಳಾ ಎಸ್ಪಿಯಾಗಿ ವರ್ತಿಕಾ ಕಟಿಯಾರ್ ನೇಮಕ

ಎರಡು ವರ್ಷಗಳ ಕಾಲ ಅವರನ್ನು ವರ್ಗಾವಣೆ ಮಾಡಲಾಗುವುದಿಲ್ಲ ಎನ್ನಲಾಗಿತ್ತಾದರೂ ಎರಡು ವರ್ಷ ಪೂರ್ಣಗೊಳ್ಳುವುದಕ್ಕೂ ಪೂರ್ವವೇ ಎಸ್‌ಪಿ ವರ್ಗಾವಣೆಗಾಗಿ ಪ್ರಕ್ರಿಯೆಗಳು ಜೋರಾಗಿಯೇ ನಡೆದಿತ್ತು.

ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದು ಯಾಕೆ? ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದು ಯಾಕೆ?

 Uttara Kannada SP Transfer Discussion Again

ಹಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಶಿವಪ್ರಕಾಶ್ ದೇವರಾಜು ವರ್ಗಾವಣೆ ಪ್ರಯತ್ನ ನಡೆದು, ವರ್ಗಾಯಿಸಿ ಎರಡು ತಿಂಗಳ ಹಿಂದೆ ಅವರ ಜಾಗಕ್ಕೆ ವರ್ತಿಕಾ ಕಟಿಯಾರ್ ನಿಯೋಜಿಸಿ ಆದೇಶಿಸಲಾಗಿತ್ತು. ಆದರೆ ವರ್ತಿಕಾ ಕಟಿಯಾರ್ ಜಿಲ್ಲೆಗೆ ಆಗಮಿಸದ ಹಿನ್ನಲೆಯಲ್ಲಿ ಎಸ್‌ಪಿಯಾಗಿ ಶಿವಪ್ರಕಾಶ್ ದೇವರಾಜು ಮುಂದುವರೆಸಲಾಗಿತ್ತು.

ಆದಿತ್ಯಾನಾಥ್ ವಿರುದ್ಧ ಕಣಕ್ಕಿಳಿಯಲು ಮಾಜಿ ಐಪಿಎಸ್ ಅಧಿಕಾರಿ ಸಜ್ಜುಆದಿತ್ಯಾನಾಥ್ ವಿರುದ್ಧ ಕಣಕ್ಕಿಳಿಯಲು ಮಾಜಿ ಐಪಿಎಸ್ ಅಧಿಕಾರಿ ಸಜ್ಜು

ಸದ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತೆ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇನ್ನು ಕೆಲ ದಿನಗಳಲ್ಲಿಯೇ ವರ್ಗಾವಣೆ ಆಗುವ ಸಾಧ್ಯತೆ ಇದೆ ಎನ್ನುವುದು ಸದ್ಯದ ಸುದ್ದಿ. ಈ ಹಿಂದೆ ಜಿಲ್ಲೆಗೆ ಎಸ್‌ಪಿಯಾಗಿ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿದ್ದ ಕೆ. ಜಿ. ದೇವರಾಜ್ ಜಿಲ್ಲೆಗೆ ಎಸ್‌ಪಿಯಾಗಿ ಆಗಮಿಸಲಿದ್ದಾರೆ ಎಂಬ ಸುದ್ದಿಯೂ ಇತ್ತು.

ಆದರೆ ಕೆ. ಜಿ. ದೇವರಾಜ್ ಅನಾರೋಗ್ಯದ ಹಿನ್ನಲೆಯಲ್ಲಿ ಜೊತೆಗೆ ನೌಕಾದಳ ಹಾಗೂ ಕೈಗಾದವರು ಜಿಲ್ಲೆಗೆ ನೇರ ಐಪಿಎಸ್ ಅವರನ್ನೇ ಎಸ್‌ಪಿಯನ್ನಾಗಿ ನೇಮಕ ಮಾಡುವಂತೆ ಒತ್ತಡ ಹಾಕಿರುವ ಕಾರಣ ಕೆ. ಜಿ. ದೇವರಾಜ್ ಬದಲು ಬೇರೆ ಐಪಿಎಸ್ ಅಧಿಕಾರಿಗೆ ಅವಕಾಶ ಸಿಗಲಿದೆ ಎಂಬುದು ಈಗಿನ ಸುದ್ದಿ.

ಮೂಲಗಳ ಪ್ರಕಾರ ಬೀದರ್‌ನಲ್ಲಿ ಹಾಲಿ ಎಸ್‌ಪಿಯಾಗಿರುವ, ಈ ಹಿಂದೆ ಶಿರಸಿಯಲ್ಲಿ ಎಎಸ್‌ಪಿಯಾಗಿ ಕೆಲಸ ಮಾಡಿದ್ದ ಕೋಲಾರ ಮೂಲದ ಐಪಿಎಸ್ ಅಧಿಕಾರಿ ಡಿ. ಎಲ್. ನಾಗೇಶ್ ಆಗಮಿಸುವ ಸಾಧ್ಯತೆ ಇದೆ ಎಂಬುದು ತಾಜಾ ಸಮಾಚಾರ.

Recommended Video

IPLನಲ್ಲಿ ಉತ್ತಮ ಆಟವಾಡಿ T20 ವಲ್ಡ್ ಕಪ್ ಗೆ ಸ್ಥಾನ ಗಿಟ್ಟಿಸಿಕೊಂಡ ಮೂರು ಆಟಗಾರರು | Oneindia Kannada

ಇನ್ನೊಂದೆಡೆ ಮಂಗಳೂರಿನಲ್ಲಿ ಡಿಸಿಪಿಯಾಗಿರುವ ಹರಿರಾಮ್ ಶಂಕರ್ ಎನ್ನುವ ಐಪಿಎಸ್ ಅಧಿಕಾರಿಯೂ ಸಹ ಜಿಲ್ಲೆಗೆ ವರ್ಗಾವಣೆ ಆಗಿ ಬರುವ ಸಾಧ್ಯತೆ ಇದೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಇನ್ನು ಕೆಲ ದಿನದಲ್ಲಿಯೇ ಈ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

English summary
Again discussion began on Uttara Kannada superintendent of police Shivprakash Devaraju transfer. Few days back Vartika Katiyar has been appointed as SP later order cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X