ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕದಲ್ಲಿ ಉದ್ಯೋಗದ ಆಮಿಷ; ಯುವತಿಗೆ 57.14 ಲಕ್ಷ ರೂ. ವಂಚನೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಫೆಬ್ರವರಿ 12: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ 57.14 ಲಕ್ಷ ರೂ. ವಂಚನೆ ಮಾಡಲಾಗಿದೆ. ಹಣ ಕಳೆದುಕೊಂಡ ಹೊನ್ನಾವರ ತಾಲೂಕಿನ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಹೊನ್ನಾವರ ತಾಲೂಕಿನ ಗುಣವಂತೆಯ ನೇತ್ರಾವತಿ ಗೌಡ ಎಂಬ ಯುವತಿ ಹಣ ಕಳೆದುಕೊಂಡವರು. ಈ ಬಗ್ಗೆ ಕಾರವಾರ ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿಯ‌ ಮಾರಿಕಾಂಬಾ ದೇವಸ್ಥಾನಕ್ಕೇ ವಂಚನೆ!ಶಿರಸಿಯ‌ ಮಾರಿಕಾಂಬಾ ದೇವಸ್ಥಾನಕ್ಕೇ ವಂಚನೆ!

ಇಮೇಲ್ ಮೂಲಕ ಸಂಪರ್ಕಿಸಿದ್ದ ವ್ಯಕ್ತಿ ಅಮೆರಿಕಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದ. ಅದನ್ನು ನಂಬಿದ ಯುವತಿಯು ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದಾಳೆ. ಬಳಿಕ ವಂಚಕರು ಯುವತಿಯ ವಾಟ್ಸಾಪ್‌ಗೆ ಪ್ರಶ್ನೆ ಪತ್ರಿಕೆಯೊಂದನ್ನು ಕಳಿಸಿ ಅದಕ್ಕೆ ಉತ್ತರಿಸುವಂತೆ ತಿಳಿಸಿದ್ದರು.

ECIL ನೇಮಕಾತಿ 2021: 650 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ ECIL ನೇಮಕಾತಿ 2021: 650 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Uttar Kannada Job Offer In America Honnavar Women Cheated

ಯುವತಿಯು ಅವರಿಗೆ ತನ್ನ ಉತ್ತರವನ್ನು ಕಳುಹಿಸಿಕೊಟ್ಟಿದ್ದಾರೆ. ಈ ಸೈಬರ್ ವಂಚಕರು ಯುವತಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ, ಅವರಿಂದ ಪಾಸ್‌ಪೋರ್ಟ್ ಚಾರ್ಜ್, ವಿಸಾ ಚಾರ್ಜ್, ಮೆಡಿಕಲ್ ರಿಪೋರ್ಟ್ ಅಪ್ಲಿಕೇಶನ್ ಫೀಸ್, ಎನ್.ಓ.ಸಿ ಫೀಸ್, ಹೆಲ್ತ್ ಇನ್ಸುರೆನ್ಸ್ ಫೀಸ್ ಇತ್ಯಾದಿ ಹೀಗೆ ವಿವಿಧ ತೆರಿಗೆ, ಸುಂಕ ಕಟ್ಟುವಂತೆ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ; ಫೆ. 20ರೊಳಗೆ ಅರ್ಜಿ ಹಾಕಿ ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ; ಫೆ. 20ರೊಳಗೆ ಅರ್ಜಿ ಹಾಕಿ

ಅವರನ್ನು ನಂಬಿದ್ದ ಯುವತಿಯು ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 2020ರ ಆಗಸ್ಟ್ 13 ರಿಂದ 2021ರ ಜನವರಿ 17ರ ವರೆಗೆ 5 ತಿಂಗಳ ಅವಧಿಯಲ್ಲಿ ಒಟ್ಟು 57,14,749 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಉದ್ಯೋಗ ಕೊಡಿಸದೆ ಮೋಸ ಮಾಡಿದ್ದಾರೆ ಎಂದು ಯುವತಿಯು ಬುಧವಾರದಂದು ದೂರು ದಾಖಲಿಸಿದ್ದಾರೆ.

Recommended Video

ಯಾವುದೇ ಕಾರಣಕ್ಕೂ ಮನೆ ಮುಂದೆ ಗಾಡಿ ನಿಲ್ಲಿಸಬೇಡಿ ! | Oneindia Kannada

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಅಪರಾಧ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

English summary
Honnavar based women cheated offering job in America. Women paid 57 lakh Rs from past five months. Complaint filed in Karwar police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X