ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನುಗಾರಿಕೆಗೆ 'ಲಾಕ್': ಕಾರ್ಮಿಕರಿಲ್ಲದೆ ಬಂದರುಗಳಲ್ಲಿ ನಿಂತಲ್ಲೇ ನಿಂತ ದೋಣಿಗಳು

|
Google Oneindia Kannada News

ಕಾರವಾರ, ಮೇ 11: ಕೊರೊನಾ ತಡೆಗೆ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಇದರ ನೇರ ಪರಿಣಾಮ ಮೀನುಗಾರಿಕೆಗೆ ತಟ್ಟಿದೆ. ಕಾರ್ಮಿಕರಿಲ್ಲದೆ ದೋಣಿಗಳು ಮೀನುಗಾರಿಕಾ ಬಂದರುಗಳಲ್ಲೇ ಲಂಗರು ಹಾಕಿರುವ ದೃಶ್ಯಗಳು ಇದೀಗ ಕರಾವಳಿ ಜಿಲ್ಲೆಗಳ ಬಂದರುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಿವೆ.

ಮತ್ಸ್ಯಕ್ಷಾಮ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಮೀನುಗಾರರು, ಇದೀಗ ಕಾರ್ಮಿಕರಿಲ್ಲದೆ ಮೀನುಗಾರಿಕೆಗೆ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಮೊದಲೇ ಮತ್ಸ್ಯಕ್ಷಾಮ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ಬೋಟ್ ಮಾಲೀಕರು ನಷ್ಟ ಅನುಭವಿಸುವಂತಾಗಿತ್ತು.

ಮೀನುಗಾರಿಕೆಗೆ ತೆರಳಿದರೆ ಡೀಸೆಲ್ ಖರ್ಚು ಹುಟ್ಟದ ಹಿನ್ನೆಲೆಯಲ್ಲಿ ಬಹುತೇಕ ಬೋಟ್‌ಗಳು ಜನವರಿ ವೇಳೆಗೆ ದಡದಲ್ಲಿ ಲಂಗರು ಹಾಕಿದ್ದವು. ಆದರೆ, ಇದೀಗ ಮತ್ತೆ ಕೊರೋನಾ ಅಬ್ಬರದ ಹಿನ್ನೆಲೆ ಟಫ್ ರೂಲ್ಸ್ ಜಾರಿ ಮಾಡಿದ್ದು, ಲಾಕ್‌ಡೌನ್ ಕಾರಣ ಹೊರ ರಾಜ್ಯದ ಕಾರ್ಮಿಕರು ಮನೆಗಳತ್ತ ತೆರಳಿದ್ದಾರೆ.

Uttar Kannada: Fishing Boats Standing In Harbors Without Laborers Due To Lockdown

ಇದರಿಂದ ಅಪರೂಪಕ್ಕೊಮ್ಮೆ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ಗಳನ್ನು ಕೂಡ ಲಂಗರು ಹಾಕುವಂತಾಗಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.

ಉತ್ತರ ಕನ್ನಡ ಜಿಲ್ಲೆಯ ಬೋಟ್‌ಗಳಲ್ಲಿ ಹೆಚ್ಚಾಗಿ ಒಡಿಶಾ, ತಮಿಳುನಾಡು, ಕೇರಳ ಹೀಗೆ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿ ದುಡಿಯುತ್ತಾರೆ. ಆದರೆ, ಕಳೆದ ಬಾರಿ ಲಾಕ್‌ಡೌನ್‌ನಿಂದಾಗಿ ಸಂಕಷ್ಟ ಅನುಭವಿಸಿದ್ದ ಕಾರ್ಮಿಕರು, ಈ ಬಾರಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದಂತೆ ತಮ್ಮ ಊರುಗಳತ್ತ ಕಾಲ್ಕಿತ್ತಿದ್ದಾರೆ.

Uttar Kannada: Fishing Boats Standing In Harbors Without Laborers Due To Lockdown

ಕಳೆದ ಬಾರಿ ಲಾಕ್‌ಡೌನ್‌ನಿಂದಾಗಿ ಮೀನುಗಾರಿಕೆ ನಡೆಸಲಾಗದೆ ನಷ್ಟದಲ್ಲಿದ್ದ ಮೀನುಗಾರರು, ಅನಿವಾರ್ಯವಾಗಿ ಬೋಟ್‌ಗಳನ್ನು ಲಂಗರು ಹಾಕಿದ್ದಾರೆ. ಆದರೆ, ಮೀನುಗಾರಿಕೆಗಾಗಿ ಅದೆಷ್ಟೋ ಮಂದಿ ಬ್ಯಾಂಕ್, ಸ್ವ-ಸಹಾಯ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದು, ಇದೀಗ ಮೀನುಗಾರಿಕೆ ಇಲ್ಲದೆ ಸಾಲ ತೀರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.

Recommended Video

Kamal Pant : ಇನ್ಮುಂದೆ ಯಾರಿಗೂ ಹೋಡಿಯೋ ಹಾಗಿಲ್ಲ! | Oneindia Kannada

English summary
Lockdown has been implemented in Karnataka for the Covid-19 control. fishing boats standing in coastal district Harbors Without Laborers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X