ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸಲ್ಮಾನನ ಮಗ ಗಾಂಧಿ ಹೇಗಾದ? : ಅನಂತ ಕುಮಾರ್ ಹೆಗಡೆ ಪ್ರಶ್ನೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಮಾರ್ಚ್ 10 : 'ಇಡೀ ಜಗತ್ತು ಏರ್ ಸ್ಟ್ರೈಕ್ ನಡೆದಿರುವುದನ್ನ ಒಪ್ಪಿಕೊಂಡಿದೆ. ಆದರೆ, ಕೆಲವರಿಗೆ ಸಾಕ್ಷ್ಯ ಕೊಡಬೇಕಂತೆ. ನಮ್ಮ ಸೈನಿಕರು ಪಾಕಿಸ್ತಾನದಲ್ಲಿ ಹೋಗಿ ಉಗ್ರರನ್ನ ಹೊಡೆದಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಆದರೆ, ಮುಸಲ್ಮಾನನ ಮಗ ಗಾಂಧಿ ಹೇಗಾದ ಅನ್ನೋದಕ್ಕೆ ಸಾಕ್ಷಿ ಕೊಡುತ್ತಾರಾ?' ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪ್ರಶ್ನಿಸಿದರು.

ಭಟ್ಕಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನಂತ ಕುಮಾರ್ ಹೆಗಡೆ ಅವರು ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿಯನ್ನು ನಡೆಸಿದರು.

ಅನಂತ್‌ಕುಮಾರ್ ಹೆಗಡೆಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆಅನಂತ್‌ಕುಮಾರ್ ಹೆಗಡೆಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ

'ಮುಸಲ್ಮಾನ ಅಪ್ಪ, ಕ್ರಿಶ್ಚಿಯನ್ ತಾಯಿಗೆ ಹುಟ್ಟಿರುವ ಪರದೇಶಿ ಬ್ರಾಹ್ಮಣ ಹೇಗಾದ? ಇದಕ್ಕೆ ಡಿಎನ್ಎ ಸಾಕ್ಷಿ ಕೊಡುತ್ತಾರಾ?' ಎಂದು ಅನಂತ್ ಕುಮಾರ್ ಹೆಗಡೆ ಅವರು ವ್ಯಂಗ್ಯವಾಡಿದರು.

Union minister Anant Kumar Hegde sparks controversy

'ರಾಜೀವ್ ಗಾಂಧಿ ದೇಹ ಛಿದ್ರವಾಗಿದ್ದ ವೇಳೆ ರಾಹುಲ್ ರಕ್ತವನ್ನು ಪರೀಕ್ಷೆಗೆ ಕೇಳಿದ್ದರು. ಆದರೆ, ರಾಹುಲ್ ಬೇಡ, ಪ್ರಿಯಾಂಕಾ ಗಾಂಧಿ ರಕ್ತ ಪಡೆಯಲು ಸೋನಿಯಾ ಹೇಳಿದರು. ಅಂಥವರು ಇವತ್ತು‌ ಸಾಕ್ಷಿ ಕೇಳುತ್ತಿದ್ದಾರೆ' ಎಂದು ದೂರಿದರು.

ಇಟಲಿ ರಕ್ತದವರು ಭಾರತ ದೇಶವನ್ನಾಳಬಾರದು: ಅನಂತ್‌ಕುಮಾರ್ ಹೆಗಡೆ ಇಟಲಿ ರಕ್ತದವರು ಭಾರತ ದೇಶವನ್ನಾಳಬಾರದು: ಅನಂತ್‌ಕುಮಾರ್ ಹೆಗಡೆ

ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಅನಂತ ಕುಮಾರ ಹೆಗಡೆ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಅನಂತ ಕುಮಾರ ಹೆಗಡೆ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

English summary
Union minister Anant Kumar Hegde has sparked another controversy after his comment on AICC president Rahul Gandhi. Anant Kumar Hegde addressed BJP workers meet at Bhatkal on March 10, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X