• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೈಗಾದಲ್ಲಿ 5, 6ನೇ ಘಟಕ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ

|

ಉತ್ತರ ಕನ್ನಡ, ಸೆಪ್ಟೆಂಬರ್ 08 : ಕೇಂದ್ರ ಸರ್ಕಾರ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ಸ್ಥಾಪನೆಗೆ ಒಪ್ಪಿಗೆ ಕೊಟ್ಟಿದೆ. ಪರಿಸರವಾದಿಗಳು ಮತ್ತು ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೋ ಯೋಜನೆ ಅನುಮೋದನೆ ನೀಡಲಾಗಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕೈಗಾ ಅಣು ವಿದ್ಯುತ್ ಸ್ಥಾವರ ಯೋಜನೆ ವಿಸ್ತರಣೆಗೆ ಒಪ್ಪಿಗೆ ಕೊಟ್ಟಿದೆ. 5 ಮತ್ತು 6ನೇ ಹೊಸ ಘಟಕಗಳ ಸ್ಥಾಪನೆಗೆ ಭಾರತೀಯ ಅಣು ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಸಿ. ಪಾಠಕ್ ಸಚಿವಾಲಯಕ್ಕೆ ಮನವಿ ಮಾಡಿದ್ದರು.

ಸತತ 766 ದಿನ ವಿದ್ಯುತ್ ಉತ್ಪಾದಿಸಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಕೈಗಾ

ಪರಿಸರ ವಿಭಾಗದ ಹೆಚ್ಚುವರಿ ನಿರ್ದೇಶಕಿ ಡಾ. ಶ್ರುತಿ ರೈ ಭರದ್ವಾಜ್ ಸೆಪ್ಟೆಂಬರ್5ರಂದು ಬಿ. ಸಿ. ಪಾಠಕ್‌ಗೆ ಪತ್ರ ಬರೆದಿದ್ದಾರೆ. ಕೇಂದ್ರ ಹಣಕಾಸು ಸಲಹಾ ಸಮಿತಿ 17 ನಿರ್ದಿಷ್ಟ ಮತ್ತು 19 ಸಾಮಾನ್ಯ ಷರತ್ತುಗಳನ್ನು ವಿಧಿಸಿ ಯೋಜನೆಗೆ ಒಪ್ಪಿಗೆ ನೀಡಿದೆ.

ಕೈಗಾದಲ್ಲಿ ಬರ್ಡ್‌ ಮ್ಯಾರಾಥಾನ್; 8 ಹೊಸ ಪಕ್ಷಿಗಳು ಪತ್ತೆ

ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ ಉತ್ಪಾದನೆ ಮಾಡುವ ಒಟ್ಟು ವಿದ್ಯುತ್‌ನಲ್ಲಿ ಅರ್ಧದಷ್ಟನ್ನು ರಾಜ್ಯಕ್ಕೆ ನೀಡಬೇಕಾಗುತ್ತದೆ. ಆದರೆ, ಹೊಸ ಘಟಕದ ಸ್ಥಾಪನೆಗೆ ಪರಿಸರವಾದಿಗಳು ಮತ್ತು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.

ಹೊಸ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಪ್ರಕ್ರಿಯೆ ಆರಂಭ

ಈ ಯೋಜನೆಗಾಗಿ ಸುಮಾರು 8700 ಮರಗಳನ್ನು ಕಡಿಯಬೇಕಾಗುತ್ತದೆ. ಒಟ್ಟಾರೆ 120 ಹೆಕ್ಟೇರ್ ಪ್ರದೇಶದಲ್ಲಿ ಮರಗಳನ್ನು ಕಡಿಯಬೇಕಾಗಿದ್ದು, ಇದಕ್ಕೆ ಪ್ರತಿಯಾಗಿ ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ 732 ಹೆಕ್ಟೇರ್ ಅರಣ್ಯವನ್ನು ಅಭಿವೃದ್ಧಿ ಮಾಡಬೇಕು ಎಂದು ಸಚಿವಾಲಯ ಹೇಳಿದೆ.

ನಿರ್ದಿಷ್ಟ ಷರತ್ತುಗಳು

* ಕಾಮಗಾರಿ ಆರಂಭಕ್ಕೂ ಮೊದಲು ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯ ಅನುಮತಿ ಕಡ್ಡಾಯ

* ರೇಡಿಯೋ ಆಕ್ಟಿವ್ ಕಣಗಳ ಮಾಲಿನ್ಯ ಕುರಿತು ನಿರಂತರ ಪರಿಶೀಲನೆ

* ಘಟಕಗಳಿಂದ ಹೊರಬಿಡುವ ಗಾಳಿಯನ್ನು ನಿಯಂತ್ರಿಸಿ, ಸೂಚಿಸಿದ ಎತ್ತರಕ್ಕೆ ಬಿಡಬೇಕು

* ವಿಪತ್ತು ನಿರ್ವಹಣೆ, ತುರ್ತು ಸಂದರ್ಭಕ್ಕೆ ಸೂಕ್ತ ಯೋಜನೆ ರೂಪಿಸುವುದು

* ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಕಡ್ಡಾಯ

* ಘಟಕದಿಂದ ಹೊರಬರುವ ರೇಡಿಯೋ ಆಕ್ಟಿವ್ ನೀರಿನ ಸೂಕ್ತ ವಿಲೇವಾರಿ

* ಘಟಕದಿಂದ 20 ಕಿ. ಮೀ. ವ್ಯಾಪ್ತಿಯ ಜನರ ನಿಯಮಿತ ಆರೋಗ್ಯ ತಪಾಸಣೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union government approved to set up unit 5 and 6 at the atomic power station at Kaiga. Kaiga Nuclear Power Plant in Karwar taluk of Uttar Kannada district of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more