ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಳವಿ ಚೆನ್ನಬಸವೇಶ್ವರ ಮಹಾರಥೋತ್ಸವ ಫೆ. 10 ಕ್ಕೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಫೆಬ್ರವರಿ 05: ಕಾರವಾರ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಉಳವಿ ಚೆನ್ನಬಸವೇಶ್ವರ ಜಾತ್ರಾ ಮಹೋತ್ಸವವು ಫೆ.01 ರಿಂದ ಆರಂಭವಾಗಿದ್ದು, 12 ರವರೆಗೆ ನಡೆಯಲಿದೆ. 10 ರ ಸಂಜೆ 4ಕ್ಕೆ ಮಹಾರಥೋತ್ಸವ ನೆರವೇರಲಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಗಂಗಾಧರ ಚೆನ್ನಪ್ಪ ಕಿತ್ತೂರ ಹೇಳಿದರು.

ಕಾರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಫೆ.01 ರಂದು ಬೆಳಿಗ್ಗೆ 7ಕ್ಕೆ ಪಟಸ್ಥಲ ಧ್ವಜಾರೋಹಣದ ಮೂಲಕ ಜಾತ್ರೋತ್ಸವ ಆರಂಭವಾಗಿದ್ದು, ಫೆ.04 ರಂದು ಹುಂಡಿಗಳ ಪೂಜೆ, ಉತ್ಸವ ಮೂರ್ತಿ ಪ್ರತಿಷ್ಠಾಪನೆ, ಪಲ್ಲಕ್ಕಿ ಉತ್ಸವವಿದೆ ಎಂದರು.

ಗೋಕರ್ಣಕ್ಕೆ ಬಂದಿಳಿದ ಥೈಲ್ಯಾಂಡ್ ಮಹಿಳೆಯರು; ಕಾರವಾರದಲ್ಲೂ ಕೊರೊನಾ ಭೀತಿಗೋಕರ್ಣಕ್ಕೆ ಬಂದಿಳಿದ ಥೈಲ್ಯಾಂಡ್ ಮಹಿಳೆಯರು; ಕಾರವಾರದಲ್ಲೂ ಕೊರೊನಾ ಭೀತಿ

ಮತ್ತೆ ಫೆ.5 ರಂದು ಪಲ್ಲಕ್ಕಿ ಉತ್ಸವ, ರಕ್ಷಾದೇವಿ ಸಣ್ಣ ರಥೋತ್ಸವ, 6 ರಂದು ವೀರಭದ್ರ ದೇವರ ಉತ್ಸದ ಸಣ್ಣ ರಥೋತ್ಸವ, 7 ರಂದು ಎಲ್ಲ ದೇವಾದಿಗಳ ಸಣ್ಣ ರಥೋತ್ಸವ, 9 ರಂದು ಚನ್ನಬಸವೇಶ್ವರ ರಥಾರೋಹಣ, 10 ರಂದು ಸಂಜೆ ೪ಕ್ಕೆ ಮಹಾರಥೋತ್ಸವ ಜರುಗಲಿದೆ. 12 ರಂದು ಸಂಜೆ ಓಕುಳಿ, ಸಣ್ಣ ರಥೋತ್ಸವದೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

Ulavi Chennabasaveshwara Maharathotsava On February 10th

"ಫೆ.9 ರಂದು ಮಧ್ಯಾಹ್ನ 12 ಗಂಟೆಗೆ ಚೆನ್ನಬಸವ ಪ್ರಸಾದ ಮತ್ತು ಶಿವಶರಣ ಶರಣೆಯರ ಪ್ರಸಾದ, ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಸಂಸದೀಯ ವ್ಯವಹಾರಗಳ ಹೆಚ್ಚುವರಿ ಖಾತೆ ಸಚಿವ ಪ್ರಹ್ಲಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರು ಹಾಜರಿರಲಿದ್ದಾರೆ' ಎಂದು ತಿಳಿಸಿದರು.

ಹಳಿಯಾಳದಲ್ಲಿ ಬಾಲ್ಯದ ಶಾಲೆ ಕಂಡು ಭಾವುಕರಾದ ದೇಶಪಾಂಡೆಹಳಿಯಾಳದಲ್ಲಿ ಬಾಲ್ಯದ ಶಾಲೆ ಕಂಡು ಭಾವುಕರಾದ ದೇಶಪಾಂಡೆ

ಮಾಜಿ ಸಚಿವ ಹಾಗೂ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರು ಫೆ.10 ರಂದು ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಜಿಲ್ಲಾ ಪಂಚಾಯತಿ ಸದಸ್ಯ ರಮೇಶ ನಾಯ್ಕ, ಜೊಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ, ಕಾಳಿಹುಲಿ ಯೋಜನೆಯ ದಾಂಡೇಲಿ ಕ್ಷೇತ್ರ ನಿರ್ದೇಶಕ ಮರಿಯಾ ಕ್ರಿಸ್ತು ರಾಜಾ ಡಿ. ಹಾಜರಿರುವರು ಎಂದು ಗಂಗಾಧರ ಕಿತ್ತೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಸಂಜಯ ಬಸವರಾಜ, ದೇವಸ್ಥಾನದ ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ, ಮೀನುಗಾರ ಮುಖಂಡ ಗಣಪತಿ ಉಳ್ವೇಕರ ಇದ್ದರು.

English summary
The Ulavi Chennabasaveshwara Fair will be held from February 01 to 12 at the Joida Taluk in Karwar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X