ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಛತ್ತೀಸ್ ಘಡ ನಕ್ಸಲ್ ದಾಳಿಗೆ ಕರ್ನಾಟಕದ ಇಬ್ಬರು ಯೋಧರ ಬಲಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ.10: ಛತ್ತೀಸ್ ಘಡ ದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ ವೇಳೆ ನೆಲ ಬಾಂಬ್ ಸ್ಪೋಟಗೊಂಡು ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ. ನಗರದ ಕೋಡಿಬಾಗದ ವಿಜಯಾನಂದ ಸುರೇಶ್ ನಾಯ್ಕ (28), ಅವರೊಂದಿಗೆ ಇದ್ದ ಬೆಳಗಾವಿ ಮೂಲದ ಸಂತೋಷ್ ಲಕ್ಷ್ಮಣ್ ಗೌರವ್ ಕೂಡ ನಕ್ಸಲ್ ಬಾಂಬ್ ಗೆ ಬಲಿಯಾಗಿದ್ದಾರೆ.

2014ರಲ್ಲಿ ಸೈನ್ಯಕ್ಕೆ ಸೇರಿಕೊಂಡಿದ್ದ ಸುರೇಶ್ ಬಿಎಸ್ಎಫ್ ನಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಛತ್ತೀಸ್ ಘಡದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ವೇಳೆ ಅಡಗಿಸಿಟ್ಟ ನೆಲಬಾಂಬ್ ಸಿಡಿದು ಹುತಾತ್ಮರಾಗಿದ್ದಾರೆ.

ತರಬೇತಿಗೆ ತೆರಳಿದ್ದ 10 ಬಿಎಸ್ ಎಫ್ ಯೋಧರು ನಿಗೂಢವಾಗಿ ನಾಪತ್ತೆತರಬೇತಿಗೆ ತೆರಳಿದ್ದ 10 ಬಿಎಸ್ ಎಫ್ ಯೋಧರು ನಿಗೂಢವಾಗಿ ನಾಪತ್ತೆ

ವಿಜಯಾನಂದ ನಿವೃತ್ತ ರೆವಿನ್ಯೂ ಇನ್ಸ್ ಪೆಕ್ಟರ್ ಸುರೇಶ್ ನಾಯ್ಕ ಅವರ ಪುತ್ರ.

Two personnel of Border Security Forces were killed in a powerful IED

ಈ ಯೋಧರು ನಕ್ಸಲ್ ಹಾವಳಿ ಪೀಡಿತ ತಡಬೌಲಿ ಗ್ರಾಮ ಸಮೀಪದ ಅರಣ್ಯದಲ್ಲಿ ಸೋಮವಾರ ಸಂಜೆ ಬೈಕ್ ನಲ್ಲಿ ಗಸ್ತು ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬಿಎಸ್ಎಫ್ ನ 121ನೇ ಬೆಟಾಲಿಯನ್ ನ ಯೋಧರ ಬೈಕ್ ಗಸ್ತು ತಂಡವನ್ನು ಗುರಿಯಾಗಿಟ್ಟುಕೊಂಡೇ ನಕ್ಸಲರು ಸ್ಫೋಟ ನಡೆಸಿದರು.

ಸ್ಫೋಟದ ರಭಸಕ್ಕೆ ಬೈಕ್ ಗಾಳಿಯಲ್ಲಿ ಚಿಮ್ಮಿ ಬಿದ್ದಿದ್ದು ಯೋಧರಿಬ್ಬರೂ ತೀವ್ರವಾಗಿ ಗಾಯಗೊಂಡರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಛತ್ತೀಸ್ ಘಡ ಸುಕ್ಮದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಹಾಸನ ಜಿಲ್ಲೆಯ ಸಿಆರ್ ಪಿಎಫ್ ಯೋಧ ಮೃತಪಟ್ಟಿದ್ದರು. ಅರಕಲಗೂಡು ತಾಲೂಕಿನ ಹರದೂರು ಗ್ರಾಮದ ಚಂದ್ರು (29) ಮರಣ ಹೊಂದಿದ ವೀರ ಯೋಧ.

English summary
Two personnel of Border Security Forces (BSF) were killed in a powerful Improvised Explosive Device (IED) blast triggered by the outlawed CPI (Maoist) at Chote Bethiya forested route in strife-torn Kanker district, about 200 km south of Raipur on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X