ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ರಿಬಲ್ ರೈಡಿಂಗ್: ಶಿರಸಿಯಲ್ಲಿ ಕಾರು ಮಾಲೀಕನಿಗೆ ದಂಡ

|
Google Oneindia Kannada News

ಶಿರಸಿ, ಅಕ್ಟೋಬರ್ 4: ಮೋಟಾರು ವಾಹನ ಕಾಯ್ದೆ ತಿದ್ದುಪಡಿಯ ನಂತರ ಸಂಚಾರಿ ಪೊಲೀಸರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಶಿರಸಿಯಲ್ಲೂ ಇಂಥದ್ದೇ ಒಂದು ಉದಾಹರಣೆ ದೊರೆತಿದೆ. ತ್ರಿಬಲ್ ರೈಡಿಂಗ್ ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾಗಿ ಕಾರಿನ ಮಾಲೀಕರೊಬ್ಬರಿಗೆ ಪೊಲೀಸರು 2 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ದಾವಣಗೆರೆ: ಟ್ರಾಫಿಕ್ ಪೊಲೀಸ್ ಲಂಚಾವತಾರ ವಿಡಿಯೋದಲ್ಲಿ ಸೆರೆದಾವಣಗೆರೆ: ಟ್ರಾಫಿಕ್ ಪೊಲೀಸ್ ಲಂಚಾವತಾರ ವಿಡಿಯೋದಲ್ಲಿ ಸೆರೆ

Traffic Police Impose Fine For Triple Ride To Car Owner In Sirsi

ಶಿರಸಿ ನಿಲೇಕಣಿಯ ಪ್ರದೀಪ ನಾಯ್ಕ ಎಂಬುವವರಿಗೆ ಕಾರು ನಂಬರ್ ಸಹಿತ ದಂಡದ ಪಾವತಿ ಪತ್ರ ಅಂಚೆ ಮೂಲಕ ಮನೆಗೆ ಬಂದಿದೆ. ಶಿರಸಿ ನಗರ ಠಾಣೆಯಿಂದ ಈ ಪತ್ರ ಬಂದಿದೆ. ಮೋಟಾರು ವಾಹನ ಕಾಯ್ದೆ 1988ರ ಕಲಂ 133ರ ಪ್ರಕಾರ ನಿಯಮ ಉಲ್ಲಂಘನೆ ಮಾಡಿರುವುದಾಗಿ ಆರೋಪಿಸಲಾಗಿದೆ.

Traffic Police Impose Fine For Triple Ride To Car Owner In Sirsi

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರು ಮಾಲೀಕ, ಪೊಲೀಸರ ತಪಾಸಣೆ ಎಷ್ಟೊಂದು ಅವೈಜ್ಞಾನಿಕ ಎಂಬುದಕ್ಕೆ ಈ ಪತ್ರ ಸಾಕ್ಷಿಯಾಗಿದೆ. ಬೈಕ್ ‌ಗೆ ಅನ್ವಯವಾಗುವ ನಿಯಮವನ್ನು ಕಾರಿಗೆ ಅನ್ವಯಿಸಿ, ದಂಡ ವಿಧಿಸಲಾಗಿದೆ. ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮ ಪಾಲಿಸುವುದು ಕಡ್ಡಾಯವಾದಂತೆ ಇಲಾಖೆ ಕೂಡ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

English summary
A car owner has been fined Rs 2000 for triple riding case in sirsi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X