ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲ್ಲಾಪುರ ಕ್ಷೇತ್ರ ಮತದಾನ: ವಿಕಲಚೇತನ ಮತದಾರರ ಟ್ರ್ಯಾಕಿಂಗ್

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಡಿಸೆಂಬರ್ 5: ಯಲ್ಲಾಪುರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಒಟ್ಟು 1.72 ಲಕ್ಷ ಮತದಾರರಿದ್ದು, 2,024 ವಿಕಲಚೇತನ (ಪಿಡಬ್ಲುಡಿ) ಮತದಾರರು ಮತ ಚಲಾಯಿಸುತ್ತಿದ್ದಾರೆ. ಇವರೆಲ್ಲರನ್ನು ಗೂಗಲ್ ಮ್ಯಾಪಿಂಗ್ ಮೂಲಕ ಟ್ರ್ಯಾಕಿಂಗ್ ಮಾಡಲಾಗುತ್ತಿದೆ.

LIVE :ನಾನು ಮತ್ತೆ ಸಿಎಂ ಆಗ್ಬೇಕೆಂದು ಯಾವಾಗ ಹೇಳಿದ್ದೆ?: ಸಿದ್ದರಾಮಯ್ಯLIVE :ನಾನು ಮತ್ತೆ ಸಿಎಂ ಆಗ್ಬೇಕೆಂದು ಯಾವಾಗ ಹೇಳಿದ್ದೆ?: ಸಿದ್ದರಾಮಯ್ಯ

ಕಳೆದ ಚುನಾವಣೆಯಲ್ಲೇ ವಿಕಲಚೇತನ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದೇ ಇರಲಿ ಎಂದು ಜಿಲ್ಲಾ ಚುನಾವಣಾ ಆಯೋಗ ಇಂಥವರನ್ನು ಗುರುತಿಸಿ ಮ್ಯಾಪಿಂಗ್ ಮಾಡುವ ಕಾರ್ಯಕ್ಕೆ ಮುಂದಾಗಿತ್ತು. ಮತದಾನದ ದಿನ ಆಯೋಗದ ವೆಚ್ಚದಲ್ಲೇ ಅವರನ್ನು ಮತಗಟ್ಟೆಗೆ ಕರೆದುಕೊಂಡು ಬಂದು ಮತದಾನ ಮಾಡಿಸುವ ಯೋಜನೆ ರೂಪಿಸಿ ಯಶಸ್ವಿಯಾಗಿತ್ತು. ಈ ಉಪ ಚುನಾವಣೆಯಲ್ಲಿ ಕೂಡಾ ಅದೇ ಯೋಜನೆಯನ್ನು ಮುಂದುವರೆಸಿದೆ.

Tracking Handicap Voters In Yellapur

ಯಲ್ಲಾಪುರ ಕ್ಷೇತ್ರದಲ್ಲಿರುವ ವಿಕಲಚೇತನ ಮತದಾರರ ಹೆಸರು, ವಿಳಾಸದ ಅಳವಡಿಕೆ ಮಾಡಿ ಮತದಾನದ ದಿನ ಅವರನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಹಸಿರು ಬಣ್ಣದಿಂದ ವಿಕಲಚೇತನರ ಇರುವಿಕೆ ಗುರುತಿಸಲಾಗಿದ್ದು, ಮತದಾನವಾದ ಬಳಿಕ ಈ ಗುರುತು ನೀಲಿ ಬಣ್ಣವಾಗುತ್ತಿತ್ತು. ಈ ಬಾರಿಯೂ ಮತದಾನಕ್ಕೆ ಮೊದಲು ಒಂದು ಬಣ್ಣ ಮತದಾನದಲ್ಲಿ ಪಾಲ್ಗೊಂಡರೆ ಮತ್ತೊಂದು ಬಣ್ಣವಾಗಲಿದೆ. ಇದರಿಂದ ಗುರುತಿಸಲ್ಪಟ್ಟ ವಿಕಲಚೇತನ ಮತದಾರ ಮತದಾನ ಮಾಡಿದ್ದಾನೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. ಈ ಗೂಗಲ್ ಮ್ಯಾಪ್ ಮೂಲಕ ವಿಕಲ ಚೇತನ ಮತದಾರರು ಎಲ್ಲಿದ್ದಾರೆ? ಅವರ ಮತಗಟ್ಟೆ ಸಂಖ್ಯೆ ಯಾವುದು? ಮತದಾನ ಆಗಿದೆಯೇ ಇಲ್ಲವೇ ಎಂದು ಕುಳಿತಲ್ಲಿಯೇ ಅಧಿಕಾರಿಗಳು ಟ್ರ್ಯಾಕ್ ಮಾಡುತ್ತಿದ್ದಾರೆ.

ಯಲ್ಲಾಪುರ ಕ್ಷೇತ್ರ ಉಪಚುನಾವಣೆ: ಗೆಲ್ಲುವ ಹಠದಲ್ಲಿ ಹೆಬ್ಬಾರ್, ನಾಯ್ಕಯಲ್ಲಾಪುರ ಕ್ಷೇತ್ರ ಉಪಚುನಾವಣೆ: ಗೆಲ್ಲುವ ಹಠದಲ್ಲಿ ಹೆಬ್ಬಾರ್, ನಾಯ್ಕ

ಬೆಳಿಗ್ಗೆ 10 ಗಂಟೆಯವರೆಗೆ 202 ಅಂಗವಿಕಲ ಮತದಾರರು ಮತದಾನ ಮಾಡಿದ್ದಾರೆ. ಇನ್ನೂ 1,822 ಮಂದಿ ಮತದಾನ ಮಾಡುವುದು ಬಾಕಿ ಇದೆ.

English summary
There are a total of 1.72 lakh voters in the by-election in Yellapur constituency, while 2,024 handicap (PWD) voters are voting. All these are tracked by Google mapping
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X