ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡದಲ್ಲಿ ಇಳಿಮುಖವಾಗುತ್ತಿರುವ ಕೊರೊನಾ; ಪ್ರವಾಸೋದ್ಯಮಕ್ಕೆ ಜೀವಕಳೆ!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೋಬರ್ 19: ಕೊರೊನಾ ಎರಡನೇ ಅಲೆ ಪ್ರಾರಂಭವಾದಾಗಿನಿಂದ ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿತ್ತು. ಅದರಲ್ಲೂ ಉತ್ತರ ಕನ್ನಡ ಜಿಲ್ಲೆ ಪಾಸಿಟಿವಿಟಿ ರೇಟ್‌ಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದಿದ್ದರಿಂದ ಒಂದು ಕಾಲದಲ್ಲಿ ಜಿಲ್ಲೆಯ ಜನರು ಭಯದಲ್ಲೇ ಜೀವನ ಸಾಗಿಸುವ ಪರಿಸ್ಥಿತಿ ಇತ್ತು. ಸದ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ನೆಮ್ಮದಿ ಮೂಡಿಸುವಂತಾಗಿದೆ ಪ್ರವಾಸೋದ್ಯಮ ಚಟುವಟಿಕೆಗಳು ಮತ್ತೆ ಗರಿಗೆದರಿವೆ.

ಕೊರೊನಾ ಮೊದಲನೇ ಅಲೆಗಿಂತಲೂ, ಎರಡನೇ ಅಲೆಯಲ್ಲಿ ಅಧಿಕ ಸಾವು- ನೋವುಗಳಾಗಿದ್ದವು. ಇನ್ನು ಸೋಂಕಿತರ ಸಂಖ್ಯೆ ಸಹ ದಿನಕ್ಕೆ ಸಾವಿರ ಗಡಿ ದಾಟಿತ್ತು. ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೇ, ಇಡೀ ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸಿತ್ತು. ಇದರ ನಡುವೆ ಕೊರೊನಾ ಎರಡನೇ ಅಲೆ ಮುಗಿಯಲಿದೆ ಎನ್ನುವಷ್ಟರಲ್ಲಿ ಮೂರನೇ ಅಲೆ ಕಾಲಿಡಲಿದೆ ಎನ್ನುವ ತಜ್ಞರ ವರದಿ ಇನ್ನಷ್ಟು ಆತಂಕವನ್ನು ಸೃಷ್ಟಿ ಮಾಡಿತ್ತು. ಆದರೆ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖ ಕಂಡಿದೆ.

ಅಕ್ಟೋಬರ್ 16 ಹಾಗೂ 17ರಂದು ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣ ಕೇವಲ 5 ಪ್ರಕರಣ ದಾಖಲಾದರೆ, 18ರಂದು 10 ಪ್ರಕರಣ ದಾಖಲಾಗಿದೆ. 16ರಂದು ಜಿಲ್ಲೆಯ ಶಿರಸಿಯಲ್ಲಿ ಒಂದು, ಯಲ್ಲಾಪುರದಲ್ಲಿ ಎರಡು ಸೇರಿ ಒಟ್ಟು ಮೂರು ಪ್ರಕರಣ ದಾಖಲಾಗಿದ್ದರೆ, 17ರಂದು ಅಂಕೋಲಾ ಹಾಗೂ ಜೊಯಿಡಾದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. 18ರಂದು ಕಾರವಾರ, ಅಂಕೋಲಾದಲ್ಲಿ ತಲಾ ಎರಡು, ಶಿರಸಿ ಮೂರು, ಕುಮಟಾ, ಭಟ್ಕಳ ಹಾಗೂ ಸಿದ್ದಾಪುರದಲ್ಲಿ ಕೇವಲ ಒಂದು ಪ್ರಕರಣ ಮಾತ್ರ ಪತ್ತೆಯಾಗಿದೆ.

Tourism Activities Begin In Uttara Kannada District Wake Of Covid-19 Cases Are Decreases

ಇನ್ನು ಕೊರೊನಾ ಸೋಂಕಿನ ಪ್ರಮಾಣ ದಿನೇ ದಿನೇ ಇಳಿಮುಖ ಆಗುತ್ತಲೇ ಇದೆ. ಅ.11ರಂದು ಜಿಲ್ಲೆಯಲ್ಲಿ 16 ಪ್ರಕರಣಗಳು ದಾಖಲಾಗಿದ್ದವು. 12ರಂದು 8 ಪ್ರಕರಣ ದಾಖಲಾದರೆ, 13ರಂದು 13 ಪ್ರಕರಣ, 14ರಂದು 12 ಪ್ರಕರಣ, 15ರಂದು 9 ಪ್ರಕರಣಗಳ ಮಾತ್ರ ದಾಖಲಾಗಿದೆ. ಇನ್ನು ಸಾವಿನ ಪ್ರಮಾಣ ಸಹ ಸಂಪೂರ್ಣ ಕಡಿಮೆಯಾಗಿದೆ. ಕಳೆದ ಎಂಟು ದಿನದಲ್ಲಿ ಸೋಂಕಿಗೆ ಜಿಲ್ಲೆಯಲ್ಲಿ ಮೂರು ಜನರು ಮಾತ್ರ ಬಲಿಯಾಗಿದ್ದಾರೆ.

11ರಂದು ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದರೆ, 12ರಂದು ಓರ್ವ ಬಲಿಯಾಗಿದ್ದಾರೆ. ಅದನ್ನು ಹೊರತಾಗಿ ಜಿಲ್ಲೆಯಲ್ಲಿ ಸಾವಿನ ಪ್ರಕರಣ ಎಲ್ಲಾ ದಿನದಲ್ಲಿ ಶೂನ್ಯ ದಾಖಲಾಗಿದೆ. ಸದ್ಯ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಿರುವುದರಿಂದ ಜನ ಜೀವನ ಸಹ ಸಾಮಾನ್ಯ ಸ್ಥಿತಿಯಲ್ಲಿದೆ.

ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾದ ನಂತರ ಅವರ ಕುಟುಂಬಸ್ಥರಲ್ಲಿ ಮಾತ್ರ ಉಳಿದ ಪ್ರಕರಣ ಪತ್ತೆಯಾಗುತ್ತಿದ್ದು, ಸಮುದಾಯದಲ್ಲಿ ಹರಡುವ ಪ್ರಕರಣ ಸಾಕಷ್ಟು ವಿರಳವಾಗಿದೆ. ಜಿಲ್ಲೆಯಲ್ಲಿ ಇದೇ ರೀತಿ ಕಡಿಮೆ ಪ್ರಕರಣ ಮುಂದುವರೆದರೆ ಇನ್ನು ಕೆಲ ದಿನದಲ್ಲಿಯೇ ಉತ್ತರ ಕನ್ನಡ ಕೊರೊನಾ ಮುಕ್ತ ಜಿಲ್ಲೆ ಆಗಬಹುದು ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.

Tourism Activities Begin In Uttara Kannada District Wake Of Covid-19 Cases Are Decreases

ಗರಿಗೆದರಿದ ಪ್ರಮಾಸೋದ್ಯಮ ಚಟುವಟಿಕೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಮತ್ತೆ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿದೆ. ಕೊರೊನಾ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಆಗಮಿಸದೇ ಬಿಕೋ ಎನ್ನುತ್ತಿದ್ದವು. ಇನ್ನು ಪ್ರವಾಸೋದ್ಯಮ ಚಟುವಟಿಕೆ ಸಹ ಕುಂಠಿತವಾಗಿದ್ದರಿಂದ ಅದನ್ನೇ ನಂಬಿಕೊಂಡಿದ್ದ ಜನರು ಸಹ ಸಂಕಷ್ಟಕ್ಕೆ ಸಿಲುಕಿದ್ದರು.

ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾದ ಬೆನ್ನಲ್ಲೇ ಕಳೆದ ಒಂದು ತಿಂಗಳಿನಿಂದ ಉತ್ತರ ಕನ್ನಡ ಜಿಲ್ಲೆಯತ್ತ ಮುಖ ಮಾಡುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಸದ್ಯ ದಸರಾ ರಜೆ ಪ್ರಾರಂಭವಾದ ನಂತರ ಕರಾವಳಿ ಭಾಗಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ರಜೆ ದಿನಗಳಲ್ಲಿ ಪ್ರಮುಖ ಪ್ರವಾಸಿ ತಾಣವಾದ ಗೋಕರ್ಣ ಹಾಗೂ ಮುರುಡೇಶ್ವರದಲ್ಲಿ ಬಹುತೇಕ ಲಾಡ್ಜ್‌ಗಳು ಭರ್ತಿಯಾಗುತ್ತಿದೆ.

Tourism Activities Begin In Uttara Kannada District Wake Of Covid-19 Cases Are Decreases

Recommended Video

ಪಾಕ್ ಮುಂದೆ ಭಾರತ ಸೋಲೋದು ಗ್ಯಾರೆಂಟಿ ಅಂತಾ ಸೆಹ್ವಾಗ್ ಹೇಳಿದ್ಯಾಕೆ? | Oneindia Kannada

ನೆರೆಯ ಗೋವಾಕ್ಕೆ ತೆರಳಲು ಎರಡು ಡೋಸ್ ಕೋವಿಡ್ ವ್ಯಾಕ್ಸಿನೇಷನ್ ಆಗಿರಬೇಕು, ಅಥವಾ ನೆಗೆಟಿವ್ ಪ್ರಮಾಣ ಪತ್ರ ಇರಬೇಕಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯೇ ಸೇಫ್ ಎನ್ನುವ ನಿಟ್ಟಿನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮರುಜೀವ ಬಂದಂತಾಗಿದೆ.

English summary
The number of coronavirus cases in Uttara Kannada district is declining and Tourism Activities Begins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X