ಕೊನೆಗೂ ಮರುಜೀವ ಪಡೆಯಿತು 16 ಕೋಟಿಯ "ಲಾಟರಿ'ಯಲ್ಲಿ ವಿಜೇತಳಾಗಿದ್ದ ಭಟ್ಕಳದ ಕಂದಮ್ಮ!
ಕಾರವಾರ, ಫೆಬ್ರವರಿ 17: ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದ್ದ 14 ತಿಂಗಳ ಫಾತಿಮಾ, ಬೆಂಗಳೂರು ಆಸ್ಪತ್ರೆಯಲ್ಲಿ 16 ಕೋಟಿ ರೂ.ಗಳ "ಕ್ರಾಂತಿಕಾರಿ' ಜೀನ್ ಚಿಕಿತ್ಸೆಗೆ ಒಳಗಾಗಿ ಈಗ ಮರುಜೀವ ಪಡೆದಿದ್ದಾಳೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಮೊಹಮ್ಮದ್ ಬೆಸಿಲ್ ಮತ್ತು ಖಾದಿಜಾ ಅವರ ಪುತ್ರಿಯಾಗಿರುವ ಫಾತಿಮಾ, ಕಳೆದ ತಿಂಗಳ ಕೊನೆಯಲ್ಲಿ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ "ಝೋಲ್ಗೆನ್ಸ್ಮಾ' - ಜೀನ್ ಥೆರಪಿಗೆ ಒಳಗಾಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪೆಟ್ರೋಲ್ನಲ್ಲಿ ನೀರು ಮಿಶ್ರಣ: ಬಂಕ್ ಮಾಲೀಕರಿಗೆ ಬಿತ್ತು 15 ಲಕ್ಷ ರೂ. ದಂಡ!
ಬೆನ್ನುಮೂಳೆ ಸ್ನಾಯು ಕ್ಷೀಣತೆಯ ಈ ಕಾಯಿಲೆಗೆ ಔಷಧಿಯನ್ನು ಪ್ರಮುಖ ಔಷಧ ಕಂಪನಿಯಾಗಿರುವ ಸ್ವೀಡನ್ ನ ನೊವಾರ್ಟಿಸ್ ತಯಾರಿಸುತ್ತದೆ. ಆದರೆ ಇದಕ್ಕೆ ಸುಮಾರು 2.1 ಮಿಲಿಯನ್ ಯುಎಸ್ ಡಾಲರ್, ಅಂದರೆ ಸುಮಾರು 16 ಕೋಟಿ ರೂ. ಬೆಲೆ ಇದೆ. ಹೀಗಾಗಿ ಅದೆಷ್ಟೋ ಮಂದಿ ಈ ಕಾಯಿಲೆಗೆ ತುತ್ತಾದವರು ಔಷಧಿ ಕೊಳ್ಳುವ ಸಾಮರ್ಥ್ಯವಿಲ್ಲದೆ ನರಳಿ- ನರಳಿ ಸಾವನ್ನಪ್ಪುತ್ತಾರೆ.
ಆದರೆ ಮಾನವೀಯತೆ ಮೆರೆಯುವ ಈ ಕಂಪೆನಿ, ಪ್ರತಿವರ್ಷ ಜಗತ್ತಿನಲ್ಲಿ ಈ ಕಾಯಿಲೆಗೆ ತುತ್ತಾದವರ ಹೆಸರುಗಳನ್ನು ಪಡೆದು ವರ್ಷಕ್ಕೊಮ್ಮೆ ಲಾಟರಿ ಆರಿಸಿ, ಲಾಟರಿಯಲ್ಲಿ ವಿಜೇತರಾದವರಿಗೆ ಈ 16 ಕೋಟಿಯ ಔಷಧವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಈ ರೀತಿಯ ಮಿಲಿಯನೇರ್ ಅದೃಷ್ಟಶಾಲಿಗಳ ಪೈಕಿ ಫಾತಿಮಾ ಈ ಬಾರಿ ವಿಜೇತೆಯಾಗಿ ಹೊರಹೊಮ್ಮಿದ್ದಳು.
ಮನೆ ಕಳೆದುಕೊಂಡಿದ್ದ ವೃದ್ಧೆಗೆ ಆಸರೆಯಾದ ಯುವಾ ಬ್ರಿಗೇಡ್
ಸದ್ಯ ಫಾತಿಮಾ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಾಣುತ್ತಿದ್ದಾಳೆ. ಸ್ವಾಧೀನ ಕಳೆದುಕೊಂಡಿದ್ದ ಕಾಲಿಗೆ ಈಗ ಜೀವ ಬಂದಿದೆ. ಸಾಮಾನ್ಯ ಮಗುವಿನಂತೆ ಆಗಲು ಇನ್ನೂ ಕೆಲ ಸಮಯ ತೆಗೆದುಕೊಳ್ಳುತ್ತದೆ ಎಂದು ಫಾತಿಮಾ ತಂದೆ ಬೆಸಿಲ್ ತಿಳಿಸಿದ್ದಾರೆ.
ಅಂಬೆಗಾಲಿಡುವವರಿಗೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಅಥವಾ ಎಸ್ಎಂಎ ಎಂದು ಗುರುತಿಸಲಾಗುವ ಈ ಕಾಯಿಲೆಯು ಮೆದುಳಿನಿಂದ ಸ್ನಾಯುಗಳಿಗೆ ವಿದ್ಯುತ್ ಸಂಕೇತಗಳನ್ನು ಒಯ್ಯುವ ನರಕೋಶಗಳ ನಷ್ಟದಿಂದ ಉಂಟಾಗುತ್ತದೆ. ಈ ಸಿಗ್ನಲಿಂಗ್ಗೆ ಅಗತ್ಯವಾದ ಪ್ರೋಟೀನ್ ತಾಯಿ ಮತ್ತು ತಂದೆಯ ಜೀನ್ನಿಂದ ಮಾತ್ರ ಸಂಕೇತಿಸುತ್ತದೆ.
ಆದರೆ ಈ ಎರಡೂ ಪ್ರತಿಗಳು ದೋಷಪೂರಿತವಾಗಿದ್ದರೆ ಮತ್ತು ಚಿಕಿತ್ಸೆಯಿಲ್ಲದೆ ಇದ್ದರೆ ಮಗು ಈ ಅಸ್ವಸ್ಥತೆಗೆ ಒಳಗಾಗುತ್ತದೆ. ಈ ಕಾಯಿಲೆ ಅಂತಿಮವಾಗಿ ಮಾರಕ ಕೂಡ ಹೌದು. ಆದರೆ ಮಿಲಿಯನೇರ್ಗಳು ಅಥವಾ ಹಣವಂತರು ಮಾತ್ರ ಇದಕ್ಕೆ ಸಂಬಂಧಿಸಿದ ಚಿಕಿತ್ಸೆಯ ವೆಚ್ಚವನ್ನು ನಿಭಾಯಿಸಬಲ್ಲರು.
ಪ್ರಸ್ತುತ ಸುಮಾರು 200 ಮಕ್ಕಳು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ಈ ಔಷಧಿಯನ್ನು ಉಚಿತವಾಗಿ ಪಡೆದ ಏಕೈಕ ಮಗು ಫಾತಿಮಾ ಆಗಿದ್ದಾಳೆ.