ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಕರ್ಣ; ಕಡಲ ತೀರದಲ್ಲಿ ಬೆಂಗಳೂರಿನ ಮೂವರು ಸಾವು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜನವರಿ 21: ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದವರು ಗೋಕರ್ಣ ಕಡಲಿನಲ್ಲಿ‌ ಈಜಾಡುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ಮೃತಪಟ್ಟವರನ್ನು ಬೆಂಗಳೂರಿನ ಹೆಬ್ಬಗೋಡಿ ತಿರುಪಾಲ್ಯದ ಸುಮಾ (21), ತಿಪ್ಪೇಶ್ ನಾಯಕ್ (20) ಮತ್ತು ರವಿ (35) ಮೃತಪಟ್ಟವರು. ಇನ್ನಿಬ್ಬರನ್ನು ರಕ್ಷಣೆ ಮಾಡಲಾಗಿದ್ದು, ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಕರ್ಣ ಕಡಲತೀರದಲ್ಲಿ ಈಜಲು ತೆರಳಿದ್ದ ಯುವಕ ಸಾವು: ನಾಲ್ವರ ರಕ್ಷಣೆಗೋಕರ್ಣ ಕಡಲತೀರದಲ್ಲಿ ಈಜಲು ತೆರಳಿದ್ದ ಯುವಕ ಸಾವು: ನಾಲ್ವರ ರಕ್ಷಣೆ

ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದ ಇವರು ಪ್ರವಾಸಕ್ಕೆ ಬಂದಿದ್ದರು. ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜುತ್ತಿದ್ದಾಗ ಒಮ್ಮೆಲೆ ಬಂದ ಅಲೆ ಐವರನ್ನೂ ಎಳೆದೊಯ್ದಿತ್ತು. ತಕ್ಷಣ ಅಲ್ಲಿಯೇ ಇದ್ದ ಬೋಟಿಂಗ್ ಚಟುವಟಿಕೆ ನಡೆಸುವ ಸಿಬ್ಬಂದಿ ರಕ್ಷಣೆಗೆ ಧಾವಿಸಿದರು.

 ಗೋಕರ್ಣ ಈಗ ಟೆಕ್ಕಿಗಳ ಹೊಸ ಲಾಗ್ ಇನ್ ತಾಣ! ಗೋಕರ್ಣ ಈಗ ಟೆಕ್ಕಿಗಳ ಹೊಸ ಲಾಗ್ ಇನ್ ತಾಣ!

Three Died In The Time Of Swimming In Gokarna Beach

ಆದರೆ, ಐವರ ಪೈಕಿ ಇಬ್ಬರನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಯಿತು. ಮೂವರನ್ನು ದಡಕ್ಕೆ ತಂದರಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 ಗೋಕರ್ಣ, ಮುರ್ಡೇಶ್ವರ ಖಾಲಿ ಖಾಲಿ; ರಜಾ ಸಮಯದಲ್ಲೂ ಜನ ಇಲ್ಲ ಗೋಕರ್ಣ, ಮುರ್ಡೇಶ್ವರ ಖಾಲಿ ಖಾಲಿ; ರಜಾ ಸಮಯದಲ್ಲೂ ಜನ ಇಲ್ಲ

Recommended Video

MES ಹಾಗೂ Shiv Sena ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸ್‌ ಇಲಾಖೆ | Oneindia Kannada

ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ.

English summary
Five persons from Bengaluru come to Gokarna for a trip. Three died in the time of swimming in Gokarna beach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X