ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತದಾರರನ್ನು ಆಕರ್ಷಿಸಲು ಉತ್ತರ ಕನ್ನಡದಲ್ಲಿ ಸಿಂಗಾರಗೊಂಡ ಮತಗಟ್ಟೆಗಳು

|
Google Oneindia Kannada News

ಕಾರವಾರ, ಏಪ್ರಿಲ್ 22:ಮತದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಾರಿ ಜಿಲ್ಲಾಡಳಿತ 17 ವಿಶೇಷ ಮತಗಟ್ಟೆಗಳನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ತೆರೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜಿಲ್ಲೆಯಲ್ಲಿ ಒಟ್ಟು 1,922 ಮತಗಟ್ಟೆ ತೆರೆಯಲಾಗಿದೆ. ಇದರಲ್ಲಿ 11 ಸಖಿ ಮತಗಟ್ಟೆ, 2 ಅಂಗವಿಕಲ ಸ್ನೇಹಿ (ಪಿಡಬ್ಲ್ಯುಡಿ- ಪರ್ಸನ್ಸ್ ವಿತ್ ಡಿಸೇಬಲಿಟೀಸ್ ) ಹಾಗೂ 4 ಸಾಂಪ್ರದಾಯಿಕ ಮತಗಟ್ಟೆಗಳು ಸೇರಿವೆ.

ಈ ಮತಗಟ್ಟೆಗಳು ಉಳಿದೆಲ್ಲಕ್ಕಿಂತ ಹೆಚ್ಚು ಸೌಕರ್ಯ ಹಾಗೂ ಅಲಂಕಾರ ಹೊಂದಿರುತ್ತವೆ. ಜತೆಗೆ, ಲಭ್ಯ ಇರುವ ಎಲ್ಲ ಸೌಕರ್ಯಗಳನ್ನೂ ಬಳಸಿಕೊಂಡು ಈ ವಿಶೇಷ ಮತಗಟ್ಟೆಗಳನ್ನು ಸಿಂಗಾರ ಮಾಡಲಾಗಿದೆ. ಸಹಜವಾಗಿಯೇ ಇವುಗಳನ್ನು ವೈವಿಧ್ಯಮಯವಾಗಿ ಸಿದ್ಧಗೊಳಿಸಲಾಗಿದೆ.

This time 17 special polling stations has opened in Uttara Kannada

ಹಿಂದಿನ ವಿಧಾನಸಭಾ ಚುನಾವಣೆ ವೇಳೆ ನಿರ್ಮಿಸಿದ 'ಪಿಂಕ್'ಮತಗಟ್ಟೆ ಮಾದರಿಯಲ್ಲೇ ಸಖಿ ಮತಗಟ್ಟೆ ಇರಲಿವೆ. ಆದರೆ, ಈ ಬಾರಿ ಇದರ ಬಣ್ಣವನ್ನು ನೀಲಿಗೆ ಬದಲಾಯಿಸಲಾಗಿದೆ.

 ಟಿಕೆಟ್ ಕೊಟ್ಟರೆ ವಾರಣಾಸಿಯಿಂದ ಸ್ಪರ್ಧೆ: ಮಲ್ಲಿಕಾರ್ಜುನ ಖರ್ಗೆ ಟಿಕೆಟ್ ಕೊಟ್ಟರೆ ವಾರಣಾಸಿಯಿಂದ ಸ್ಪರ್ಧೆ: ಮಲ್ಲಿಕಾರ್ಜುನ ಖರ್ಗೆ

ಸಖಿ ಮತಗಟ್ಟೆಗಳಲ್ಲಿ ಎಲ್ಲ ಕೆಲಸಗಳನ್ನೂ ಮಹಿಳಾ ಸಿಬ್ಬಂದಿಯೇ ನಿರ್ವಹಿಸಲಿದ್ದಾರೆ. ನೀಲಿ ಬಣ್ಣದ ವೇಷಭೂಷಣ ಧರಿಸಲಿದ್ದಾರೆ. ಇಬ್ಬರು ಹೆಚ್ಚುವರಿ ಅಧಿಕಾರಿಗಳನ್ನೂ ನೀಡಲಾಗುತ್ತದೆ. ಮತಗಟ್ಟೆಗಳನ್ನೂ ಸಂಪೂರ್ಣ ನೀಲಿ ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಗೋಟೆಗಳು, ಫಲಕಗಳನ್ನು ಸೇರಿದಂತೆ ಎಲ್ಲವೂ ನೀಲಿಯಾಗಿರಲಿದೆ.

This time 17 special polling stations has opened in Uttara Kannada

ಅಂಗವಿಕಲ ಸ್ನೇಹಿ ಮತಗಟ್ಟೆಗಳಲ್ಲಿ ಅಧಿಕಾರಿ ಹಾಗೂ ಎಲ್ಲ ಸಿಬ್ಬಂದಿ ಅಂಗವಿಕಲರೇ ಇರಲಿದ್ದಾರೆ. ಈ ಮತಗಟ್ಟೆಗಳಲ್ಲಿ ಗಾಲಿಕುರ್ಚಿ, ಅಂಗವಿಕಲರು ಹಾಗೂ ಅಶಕ್ತರನ್ನು ಕರೆತರಲು- ಮತದಾನದ ನಂತರ ಮನೆಗೆ ತಲುಪಿಸಲು ವಾಹನ ವಾಹನ ವ್ಯವಸ್ಥೆಯನ್ನೂ ಮಾಡಲಾಗಿದೆ.

ಗಮನ ಸೆಳೆಯುವ ಸಾಂಪ್ರದಾಯಿಕ ಮತಗಟ್ಟೆಗಳು

ಚುನಾವಣಾ ಆಯೋಗದ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅವು ಜನರನ್ನು ಆಕರ್ಷಿಸುತ್ತಿವೆ.

This time 17 special polling stations has opened in Uttara Kannada

ಚುನಾವಣೆಯಲ್ಲಿ ಸರ್ವರೂ ಪಾಲ್ಗೊಳ್ಳುವ ಉದ್ದೇಶದಿಂದ ಈ ಮಾದರಿ ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಬುಡಕಟ್ಟು ಜನರು ವಾಸಿಸುವ ಹಾಡಿ ಹಾಗೂ ಗ್ರಾಮಗಳಾದ ಹಳಿಯಾಳದ ಸಾಂಬ್ರಾಣಿ, ಗರಡೊಳ್ಳಿ, ಯಲ್ಲಾಪುರ ತಾಲ್ಲೂಕಿನ ಕೋಟೆಮನೆ ಹಾಗೂ ಬಿಳಕಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಮತಗಟ್ಟೆಗಳನ್ನು ತೆರೆಯಲಾಗಿದೆ.

ಬುಡಕಟ್ಟು ಜನಾಂಗಗಳಾದ ಸಿದ್ದಿ, ಗೌಳಿ ಹಾಗೂ ಕುಣಬಿಗಳ ಸಂಸ್ಕೃತಿ ಬಿಂಬಿಸುವ ಕೇಂದ್ರಗಳಂತೆ ಈ ಮತಗಟ್ಟೆಗಳನ್ನು ಶೃಂಗರಿಸಲಾಗಿದೆ. ಗೋಡೆಗಳ ಮೇಲೆ ಹಸೆ ಚಿತ್ರಕಲೆಯನ್ನು ಬಿಡಿಸಲಾಗಿದೆ. ತಳಿರು- ತೋರಣಗಳನ್ನು ಕಟ್ಟಿ ಸಾಂಪ್ರದಾಯಿಕವಾಗಿ ಬುಡಕಟ್ಟು ಸಮುದಾಯದ ಮತದಾರರನ್ನು ಸ್ವಾಗತಿಸಲು ಈ ರೀತಿ ಸಜ್ಜುಗೊಳಿಸಲಾಗಿದೆ.

English summary
This time the district administration has opened 17 special polling stations in Uttara Kannada district.These are diversified.Read this news for more information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X