ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿಯಲ್ಲಿ ದೇವಾಲಯದ ಗೋಡೆ ಧ್ವಂಸಗೊಳಿಸಿ ಕಳಶ ಕದ್ದೊಯ್ದ ಕಿಡಿಗೇಡಿಗಳು

By ಕಾರವಾರ ಪ್ರತಿನಿಧಿ
|
Google Oneindia Kannada News

ಶಿರಸಿ, ಮಾರ್ಚ್ 28: ಕಿಡಿಗೇಡಿಗಳು ದೇವಸ್ಥಾನದ ಗೋಡೆ ಒಡೆದು ಕಳಶ ಕಿತ್ತುಕೊಂಡು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕಸ್ತೂರಿ ಬಾ ನಗರದಲ್ಲಿ ನಡೆದಿದೆ.

ನಗರದ ಹೊರ ಭಾಗದಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದ್ದು, ನಿನ್ನೆ ಬುಧವಾರ (ಮಾ.27) ತಡ ರಾತ್ರಿ ಈ ಕೃತ್ಯ ಎಸಲಾಗಿದೆ ಎಂದು ಹೇಳಲಾಗಿದೆ.

ಆಟೋ ಚಾಲಕ ದರ್ಶನ್ ಫೋಟೋ ಹಾಕಿದ್ದೇ ತಪ್ಪಾಯ್ತಾ?ಆಟೋ ಚಾಲಕ ದರ್ಶನ್ ಫೋಟೋ ಹಾಕಿದ್ದೇ ತಪ್ಪಾಯ್ತಾ?

ಕಳಶ ಕಿತ್ತುಕೊಂಡು ಹೋಗಿರುವ ಕಿಡಿಗೇಡಿಗಳು ದೇವಾಲಯದ ಗೋಡೆಯನ್ನು ಹಾರೆ, ಗುದ್ದಲಿಯಿಂದ ಒಡೆದಿದ್ದು, ಇಡೀ ದೇವಾಲಯದ ಭಾಗಕ್ಕೆ ಹಾನಿಯಾಗಿದೆ.ವಿಷಯ ತಿಳಿಯುತ್ತಿದ್ದಂತೆ ದೇವಾಲಯದ ಬಳಿ ನೂರಾರು ಜನರು ಧಾವಿಸಿದ್ದಾರೆ.

Thieves stole the kalasha of the temple in Sirsi

 ಯಶಸ್ವಿಯಾದ ಆಪರೇಷನ್ ಕಾವೇರಿ ಎಕ್ಸ್‌ಪ್ರೆಸ್:ಮೂವರ ಬಂಧನ ಯಶಸ್ವಿಯಾದ ಆಪರೇಷನ್ ಕಾವೇರಿ ಎಕ್ಸ್‌ಪ್ರೆಸ್:ಮೂವರ ಬಂಧನ

ಸ್ಥಳಕ್ಕೆ ನಗರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಶಿರಸಿ ಶಹರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Thieves stole the kalasha of the temple in Sirsi

 ಗುಜರಾತ್ ಮಾಜಿ ಸಿಎಂ ಮನೆಯಲ್ಲಿ ಕಳ್ಳತನ, ಚೌಕೀದಾರ್‌ ಮೇಲೆ ಅನುಮಾನ! ಗುಜರಾತ್ ಮಾಜಿ ಸಿಎಂ ಮನೆಯಲ್ಲಿ ಕಳ್ಳತನ, ಚೌಕೀದಾರ್‌ ಮೇಲೆ ಅನುಮಾನ!

ಕಿಡಿಗೇಡಿಗಳು ಬೇರೆ ಬೇರೆ ಕಡೆ ದೇವಸ್ಥಾನದ ವಿಗ್ರಹ, ಕಳಶ, ಬಂಗಾರ, ನಗದನ್ನು ಕದ್ದು ಒಯ್ದಿರುವ ಘಟನೆಗಳನ್ನು ಆಗಾಗ ನಾವು ಕೇಳುತ್ತಲೇ ಇರುತ್ತವೆ. ಇಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ಬೀಗ ಒಡೆದು ದೋಚುತ್ತಿದ್ದ ಕಳ್ಳರು, ಈ ಬಾರಿ ಕಳಶಕ್ಕಾಗಿ ದೇವಸ್ಥಾನದ ಗೋಡೆಯನ್ನೇ ಅಗೆದಿರುವುದನ್ನು ಕಂಡು ಜನರು ಹಿಡಿಶಾಪ ಹಾಕುತ್ತಿದ್ದಾರೆ.

English summary
Thieves stole the kalasha of the temple.The incident took place in the Kasturi Baa Nagar of Sirsi city in Uttara Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X