ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀಡಿ ಎಲೆ ಸಾಗಿಸುತ್ತಿದ್ದ ಲಾರಿ ಬೆಂಕಿಗೆ ಆಹುತಿ: ಲಕ್ಷಾಂತರ ರೂ. ನಷ್ಟ

|
Google Oneindia Kannada News

ಕಾರವಾರ, ಫೆಬ್ರವರಿ 1: ಬೀಡಿ ಎಲೆ ಸಾಗಿಸುತ್ತಿದ್ದ ಲಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಹೆದ್ದಾರಿಯಲ್ಲಿಯೇ ಹೊತ್ತಿ ಉರಿದ ಘಟನೆ ಅಂಕೋಲಾ ತಾಲೂಕಿನ ಕಂಚಿನ ಬಾಗಿಲು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

ಸೋಮವಾರ ಸಂಜೆ ವೇಳೆಗೆ ಗುಜರಾತ್ ನಿಂದ ಮಂಗಳೂರು ಕಡೆ ತೆರಳುತ್ತಿದ್ದ ಲಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ಲಾರಿಯಲ್ಲಿ ಬೀಡಿ ಎಲೆ ತೆಗೆದುಕೊಂಡು ಹೋಗುತ್ತಿದ್ದು, ತಕ್ಷಣ ಎಲೆಗಳಿಗೂ ಬೆಂಕಿ ಹರಡಿದ ಪರಿಣಾಮ ಕ್ಷಣಾರ್ಧದಲ್ಲಿಯೇ ಬೆಂಕಿ ಲಾರಿಗೆ ಹರಡಿತ್ತು.

Karwar: The Lorry Carrying The Beedi Leaf Was Burned By Fire

ಬೆಂಗಳೂರು ಹೊರವಲಯದಲ್ಲಿ ಹೊತ್ತಿ ಉರಿದ ಅಗರಬತ್ತಿ ಕಾರ್ಖಾನೆ ಬೆಂಗಳೂರು ಹೊರವಲಯದಲ್ಲಿ ಹೊತ್ತಿ ಉರಿದ ಅಗರಬತ್ತಿ ಕಾರ್ಖಾನೆ

ಇನ್ನು ಹೆದ್ದಾರಿಯಲ್ಲಿಯೇ ಲಾರಿ ಹತ್ತಿ ಉರಿದಿದ್ದು, ಬೆಂಕಿ ತಗುಲಿದ ತಕ್ಷಣ ಲಾರಿಯಲ್ಲಿದ್ದ ಚಾಲಕ ಕೆಳಗೆ ಇಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಸುಮಾರು ಒಂದು ಘಂಟೆಗಳ ಕಾಲ ಲಾರಿಗೆ ಬೆಂಕಿ ಹತ್ತಿ ಉರಿದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

Karwar: The Lorry Carrying The Beedi Leaf Was Burned By Fire

Recommended Video

Union Budget 2021 : ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಬದಲಾವಣೆ! | Oneindia Kannada

ಲಾರಿ ಬೆಂಕಿ ಆಹುತಿಗೀಡಾದ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದ ನಂತರ, ಹೆದ್ದಾರಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
An incident occurred on National Highway 63 near the Kanchinabagilu village of Ankola Taluk when a truck carrying a beedi leaf burned from a short circuit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X