ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಕರ್ಣ ಈಗ ಟೆಕ್ಕಿಗಳ ಹೊಸ ಲಾಗ್ ಇನ್ ತಾಣ!

|
Google Oneindia Kannada News

ಕಾರವಾರ, ಸೆಪ್ಟೆಂಬರ್ 29: ಕೇಂದ್ರ ಸರ್ಕಾರ ಅನ್ ಲಾಕ್ 4.0 ಘೋಷಿಸಿದ ಬಳಿಕ ಹೋಂ ಸ್ಟೇಗಳು, ಹೋಟೆಲ್- ರೆಸ್ಟೋರೆಂಟ್ ಗಳು ತೆರೆದುಕೊಂಡು ಕಾರ್ಯಾಚರಿಸುತ್ತಿವೆ. ಇಷ್ಟು ದಿನ ವರ್ಕ್ ಫ್ರಂ ಹೋಮ್ ನಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಗಳು ಅನ್ ಲಾಕ್ ಘೋಷಣೆಯ ಬಳಿಕ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಹೋಂ ಸ್ಟೇಗಳನ್ನ ತಮ್ಮ ಲಾಗ್ ಇನ್ ತಾಣಗಳನ್ನಾಗಿ ಮಾಡಿಕೊಂಡಿದ್ದಾರೆ.

ಹೌದು. ಇಷ್ಟು ದಿನ ಕೊರೊನಾ ಲಾಕ್ ಡೌನ್ ನಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಟೆಕ್ಕಿಗಳಂತೂ ಮನೆಯಿಂದಲೇ ಕೆಲಸ ಶುರು ಮಾಡಿಕೊಂಡಿದ್ದರು. ಬೆಳಗ್ಗೆದ್ದರೆ ಆನ್ಲೈನ್ ಮೀಟಿಂಗ್, ಚಾಟಿಂಗ್, ಅಸೈನ್ಮೆಂಟ್, ಪ್ರಾಜೆಕ್ಟ್ಸ್... ಒಟ್ಟಾರೆಯಾಗಿ, ಮನೆಯಲ್ಲಿದ್ದರೂ ನೆಮ್ಮದಿ ಇಲ್ಲದಂತೆ ಕಂಪ್ಯೂಟರ್, ಲ್ಯಾಪ್‌ಟಾಪ್ ಗಳನ್ನೇ ರಾತ್ರಿಯವರೆಗೂ ಜೊತೆಗಾರನನ್ನಾಗಿ ಮಾಡಿಕೊಂಡಿದ್ದರು.

ವೀಕೆಂಡ್ ನಲ್ಲಿ ಬಂಡೀಪುರ ಸಫಾರಿಯತ್ತ ಹೆಚ್ಚಾಗಿದೆ ಪ್ರವಾಸಿಗರ ಒಲವುವೀಕೆಂಡ್ ನಲ್ಲಿ ಬಂಡೀಪುರ ಸಫಾರಿಯತ್ತ ಹೆಚ್ಚಾಗಿದೆ ಪ್ರವಾಸಿಗರ ಒಲವು

ಇದೀಗ ಲಾಕ್ ಡೌನ್ 4.0 ಘೋಷಿಸಿದ ಬಳಿಕ ಸಾಕಷ್ಟು ಚಟುವಟಿಕೆಗಳು ಪುನರಾರಂಭಗೊಂಡಿದೆ. ಹೋಂ ಸ್ಟೇಗಳು ಕೂಡ ಕೋವಿಡ್ ಮಾರ್ಗಸೂಚಿಗಳಂತೆ ತೆರೆದುಕೊಂಡಿವೆ. ಗೋಕರ್ಣದಲ್ಲಿನ ಹೋಂ ಸ್ಟೇಗಳಿಗೆ ಬೇಡಿಕೆಯೂ ಹೆಚ್ಚಾಗಿದೆ.

 ಗೋಕರ್ಣದತ್ತ ಮುಖ ಮಾಡುತ್ತಿರುವ ಟೆಕ್ಕಿಗಳು

ಗೋಕರ್ಣದತ್ತ ಮುಖ ಮಾಡುತ್ತಿರುವ ಟೆಕ್ಕಿಗಳು

ಗೋಕರ್ಣದ ಹೋಂ ಸ್ಟೇಗಳು ಉಳಿದೆಡೆಯ ಹೋಂ ಸ್ಟೇಗಳಿಗಿಂತ ಸ್ವಲ್ಪ ಭಿನ್ನ. ಇಲ್ಲಿ ಮನೆಯೂಟದ ರುಚಿ, ಮನೆಯವರಂತೆ ಅತಿಥಿಗಳಿಗೆ ಸತ್ಕಾರ, ಜೊತೆಗೆ ಕಡಲ ತೀರದಲ್ಲಿ ಸ್ವಚ್ಛಂದವಾಗಿ ಓಡಾಡುವ ಅವಕಾಶ. ಧಾರ್ಮಿಕ, ಪುರಾಣ ಪ್ರಸಿದ್ಧ ತಾಣಗಳು, ಒಟ್ಟಾರೆಯಾಗಿ ರಿಫ್ರೆಶ್ ಮೂಡಲ್ಲಿ ಕಾರ್ಯನಿರ್ವಹಿಸಲು ಹೇಳಿ ಮಾಡಿಸಿದಂಥ ಜಾಗ ಗೋಕರ್ಣ ಬಿಟ್ಟರೆ ಬೇರೆಲ್ಲಿಯೂ ಸಿಗುವುದು ಕಡಿಮೆ. ಹೀಗಾಗಿ, ವರ್ಕ್ ಫ್ರಾಮ್ ಹೋಮ್ ನಿಂದಾಗಿ ದಣಿದಿದ್ದ ಟೆಕ್ಕಿಗಳು ಈಗ ಗೋಕರ್ಣದತ್ತ ಮುಖ ಮಾಡಿದ್ದಾರೆ.

 ಕಡಲ ತೀರದ ಆಕರ್ಷಣೆ

ಕಡಲ ತೀರದ ಆಕರ್ಷಣೆ

ಗೋಕರ್ಣದಲ್ಲಿ ಬೆಳಿಗ್ಗೆ ಕಡಲತೀರದಲ್ಲಿ ವಾಯುವಿಹಾರ ಮಾಡಿ ಉಪಾಹಾರ ಮುಗಿಸಿ ಕೆಲಸಕ್ಕೆ ಕೂರುವ ಟೆಕ್ಕಿಗಳು, ಮಧ್ಯಾಹ್ನ ಮನೆ ರುಚಿಯ ಗ್ರಾಮೀಣ ಶೈಲಿಯ ಭೋಜನ ಸವಿಯುತ್ತಿದ್ದಾರೆ. ಸಂಜೆಯ ವೇಳೆಗೆ ಕೆಲಸಗಳನ್ನು ಪೂರ್ಣಗೊಳಿಸಿಕೊಂಡು ಮತ್ತೆ ಕಡಲತೀರದತ್ತ ಹೊರಳುತ್ತಿದ್ದಾರೆ.

ಕೊಡಗಿನಲ್ಲಿ ತಗ್ಗಿದ ಮಳೆ; ತಲಕಾವೇರಿಯಲ್ಲಿ ಭಕ್ತರ ದಂಡುಕೊಡಗಿನಲ್ಲಿ ತಗ್ಗಿದ ಮಳೆ; ತಲಕಾವೇರಿಯಲ್ಲಿ ಭಕ್ತರ ದಂಡು

 ಹೋಂ ಸ್ಟೇನಲ್ಲಿ ಇಂಟರ್ನೆಟ್ ಸೌಲಭ್ಯ

ಹೋಂ ಸ್ಟೇನಲ್ಲಿ ಇಂಟರ್ನೆಟ್ ಸೌಲಭ್ಯ

ಸದ್ಯ ಗೋಕರ್ಣದ ಬಹುತೇಕ ಹೋಂ ಸ್ಟೇಗಳು ಬೆಂಗಳೂರು, ಆಂಧ್ರ, ಕೇರಳ, ಮುಂಬೈ ಮೂಲದ ಟೆಕ್ಕಿಗಳಿಂದ ಭರ್ತಿಯಾಗಿವೆ. ಅಲ್ಲಿಂದ ಇಲ್ಲಿಗೆ ಬರಲು ಕಾರಣ ಕೂಡ ಇದೆ. ಗೋಕರ್ಣದಲ್ಲಿ ಸ್ವಚ್ಛಂದ ವಾತಾವರಣದ ಜೊತೆಗೆ ಇಂಟರ್ನೆಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೋಂ ಸ್ಟೇ ಮಾಲೀಕರು ಒದಗಿಸುತ್ತಿದ್ದಾರೆ.

 ಗೋಕರ್ಣದಲ್ಲೀಗ ಜನರ ಕಲರವ

ಗೋಕರ್ಣದಲ್ಲೀಗ ಜನರ ಕಲರವ

ಹೀಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿರುವ ಕಾರಣ ಸಾಕಷ್ಟು ಮಂದಿ ಸದ್ಯ ಗೋಕರ್ಣಕ್ಕೆ ಲಗ್ಗೆ ಇಡುತ್ತಿದ್ದಾರೆ. ಕಳೆದ ಐದಾರು ತಿಂಗಳ ಲಾಕ್ ಡೌನ್ ನಿಂದಾಗಿ ವಿದೇಶಿಗರೂ ಇಲ್ಲದೆ ಭಣಗುಡುತ್ತಿದ್ದ ಗೋಕರ್ಣದಲ್ಲಿ ಈಗ ಟೆಕ್ಕಿಗಳ ಕಲರವ ಆರಂಭವಾಗಿದೆ.

Recommended Video

Y.S.V Datta : ನನ್ boss ದೇವೇಗೌಡ್ರು | Oneindia Kannada

English summary
Software engineers visiting and staying more at Gokarna home stays in Uttara Kannada district after unlock 4.0 announced
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X