ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಚ್ಚೆ ಹಾಕುವುದಕ್ಕೆ ಉತ್ತರ ಕನ್ನಡದಲ್ಲಿ ನಿರ್ಬಂಧ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಮೇ.21: ಜಾತ್ರೆ ಮತ್ತು ಉತ್ಸವಗಳಲ್ಲಿ ಒಬ್ಬರಾದಂತೆ ಮತ್ತೊಬ್ಬರಿಗೆ ಸಂಸ್ಕರಿಸದ ಒಂದೇ ಸೂಜಿಯಿಂದ ಹಚ್ಚೆ ಹಾಕಿಸಿಕೊಳ್ಳುವುದು ಸೋಂಕಿಗೆ ಕಾರಣವಾಗಲಿದೆ. ಹೀಗಾಗಿ, ಹಚ್ಚೆ ಹಾಕುವುದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವ ಆಸಕ್ತಿ ಯುವಜನರಲ್ಲಿ ಹೆಚ್ಚುತ್ತಿದೆ.ಇದು ಎಚ್‍ಐವಿಯಂಥ ಸೋಂಕಿಗೂ ಕಾರಣವಾಗಬಹುದು. ಎಚ್‍ಐವಿ ಸೋಂಕು ನಿವಾರಣ ಪ್ರಾಧಿಕಾರದ ಮುಖ್ಯಸ್ಥರು ಹಚ್ಚೆ ಹಾಕುವುದನ್ನು ನಿಷೇಧಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಜಾತ್ರೆ, ಉತ್ಸವ ಅಥವಾ ಇನ್ನಾವುದೇ ಕಡೆಗಳಲ್ಲಿ ಹಚ್ಚೆ ಹಾಕುವುದನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tattoos be blocked in Uttara Kannada district

ಹುತಾತ್ಮ ಸೈನಿಕರ ಹೆಸರು ಹಚ್ಚೆ ಹಾಕಿಸಿಕೊಂಡ ದೇಶಪ್ರೇಮಿಹುತಾತ್ಮ ಸೈನಿಕರ ಹೆಸರು ಹಚ್ಚೆ ಹಾಕಿಸಿಕೊಂಡ ದೇಶಪ್ರೇಮಿ

ಕಾನೂನು ಬಾಹಿರವಾಗಿ ಹಚ್ಚೆ ಹಾಕುವುದು ಕಂಡುಬಂದರೆ ಅವರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ಜಾತ್ರೆ ಮತ್ತು ಉತ್ಸವ ಸಮಿತಿಯವರು ಈ ಬಗ್ಗೆ ಎಚ್ಚರ ವಹಿಸುವಂತೆಯೂ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

English summary
Deputy Commissioner Dr K Harish Kumar has ordered that tattoos be blocked in Uttara Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X