ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಟ್ಕಳದಲ್ಲಿದ್ದ ಶಂಕಿತ ಭಯೋತ್ಪಾದಕನ ಹೆಂಡತಿ ಮರಳಿ ಪಾಕಿಸ್ತಾನಕ್ಕೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಭಟ್ಕಳ, ಅಕ್ಟೋಬರ್ 7: ಶಂಕಿತ ಭಯೋತ್ಪಾದಕನ ಹೆಂಡತಿ, ಪಾಕಿಸ್ತಾನ ಮೂಲದ ಮಹಿಳೆಯ ವೀಸಾವನ್ನು ಭಾರತೀಯ ವಿದೇಶಾಂಗ ಇಲಾಖೆ ರದ್ದುಪಡಿಸಿ, ಆಕೆಯನ್ನು ಪಾಕಿಸ್ತಾನಕ್ಕೆ ಮರಳಿ ಕಳುಹಿಸಿದೆ. ಭಟ್ಕಳದಲ್ಲಿ ಹೋಮಿಯೋಪಥಿ ವೈದ್ಯನಾಗಿದ್ದ ಶಂಕಿತ ಉಗ್ರ ಡಾ. ಸಯ್ಯದ್ ಇಸ್ಮಾಯಿಲ್ ಅಫಾಕ್ ಲಂಕಾನ ಪತ್ನಿ ಅರ್ಸಲಾ ಅಬೀರಾಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ.

ಗಂಡ- ಹೆಂಡತಿ ಖಾತೆಗೆ ಪಾಕಿಸ್ತಾನದ ಕೆಲವು ನಿಷೇಧಿತ ಸಂಘಟನೆಗಳು ಹಣ ವರ್ಗಾವಣೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಅರ್ಸಲಾಳ​ನ್ನು ಕೂಡ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದರು. ದೇಶದ ಭದ್ರತಾ ದೃಷ್ಟಿಯಿಂದ ಕೇಂದ್ರ ಗೃಹ ಇಲಾಖೆ ಈಕೆಯ ವೀಸಾವನ್ನು ರದ್ದುಪಡಿಸಿ, ಮೂರು ತಿಂಗಳಲ್ಲಿ ದೇಶ ತೊರೆಯುವಂತೆ ಉತ್ತರ ಕನ್ನಡ ಪೊಲೀಸ್ ಇಲಾಖೆಯ ಮೂಲಕ ಆಗಸ್ಟ್ ನಲ್ಲಿ ನೋಟಿಸ್ ಜಾರಿ ಮಾಡಿತ್ತು. ಇದೀಗ ಆಕೆಯನ್ನು ಪಾಕಿಸ್ತಾನಕ್ಕೆ ಮರಳಿ ಕಳುಹಿಸಲಾಗಿದೆ.

ಭಟ್ಕಳ ಮೂಲದ ಐಎಸ್‌ಐಎಸ್ ಉಗ್ರ ಶಫಿ ಅರ್ಮರ್ ಸಾವುಭಟ್ಕಳ ಮೂಲದ ಐಎಸ್‌ಐಎಸ್ ಉಗ್ರ ಶಫಿ ಅರ್ಮರ್ ಸಾವು

ಭಟ್ಕಳ ಮೂಲದ ಅಫಾಕ್ ಲಂಕಾ 2006ರಲ್ಲಿ ಪಾಕಿಸ್ತಾನದ ಅರ್ಸಲಾಳನ್ನು ದುಬೈನಲ್ಲಿ ವಿವಾಹವಾಗಿದ್ದ. ಪಂಜಾಬ್​ನ ಅತ್ತಾರಿ ಗಡಿ ಮೂಲಕ ಆಕೆ ಭಾರತ ಪ್ರವೇಶಿಸಿದ್ದಳು. ಮೊದಲು ಪ್ರವಾಸಿ ವೀಸಾದ ಮೇಲೆ ಭಟ್ಕಳದಲ್ಲಿದ್ದ ಈಕೆ, ನಂತರ ವೀಸಾ ಅವಧಿ ವಿಸ್ತರಿಸಿಕೊಂಡಿದ್ದಳು. ಆದರೆ ಮೂರು ತಿಂಗಳ ಹಿಂದೆ ಈ ವೀಸಾವನ್ನು ಗೃಹ ಇಲಾಖೆ ರದ್ದುಪಡಿಸಿತ್ತು.

Arsela Abira

ಅಫಾಕ್ ಜೈಲಿನಲ್ಲಿ
ವಿವಾಹವಾದ ಬಳಿಕ ಕೆಲವು ವರ್ಷ ಪಾಕಿಸ್ತಾನದಲ್ಲಿ ನೆಲೆಸಿ, ನಂತರ ಭಟ್ಕಳದ ಆಜಾದ್‌ ನಗರದಲ್ಲಿ ಯುನಾನಿ ವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನು ಇವರು ತೆರೆದಿದ್ದರು. ಬೆಂಗಳೂರಿನ ಚರ್ಚ್​ ಸ್ಫೋಟ ಪ್ರಕರಣದಲ್ಲಿ ಉಗ್ರ ಸಂಘಟನೆಗಳ ಜತೆ ಸಂಬಂಧ ಇರುವ ಆರೋಪದ ಮೇಲೆ ಅಫಾಕ್ ಲಂಕಾನನ್ನು ಬೆಂಗಳೂರು ಸಿಸಿಬಿ ಪೊಲೀಸರು 2015ರಲ್ಲಿ ಬಂಧಿಸಿದ್ದರು.

ಭಯೋತ್ಪಾದನೆ ಚಟುವಟಿಕೆಗಳಿಗೆ ಈತನು ತನ್ನ ಮಾವನ ಮನೆ ಇರುವ ಪಾಕಿಸ್ತಾನದಿಂದ ಬೆಂಬಲ ಪಡೆದಿದ್ದ ಎಂಬ ಆರೋಪವಿದೆ. ಅಲ್ಲಿನ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಮುಖಂಡ ರಿಯಾಜ್​ ನನ್ನು ಭೇಟಿಯಾಗಿದ್ದ. 2009ರಲ್ಲಿ ದುಬೈಗೆ ತೆರಳಲು ಪಾಕಿಸ್ತಾನದ ಸಂಘಟನೆಗಳೇ ಈತನಿಗೆ ಟಿಕೆಟ್ ಮಾಡಿಸಿಕೊಟ್ಟಿದ್ದವು ಎಂಬ ಆರೋಪಗಳಿವೆ.

ಭಟ್ಕಳದಲ್ಲಿದ್ದಾರೆ ಪಾಕಿಸ್ತಾನದ 14 ಪ್ರಜೆಗಳು
ಭಟ್ಕಳ ಮೂಲದ ಮುಸ್ಲಿಂ ನವಾಯತ ಗಂಡಸರನ್ನು ವಿವಾಹವಾದ ಪಾಕಿಸ್ತಾನದ 14 ಮಹಿಳೆಯರು, ಇಬ್ಬರು ಮಕ್ಕಳು ಭಟ್ಕಳದಲ್ಲಿದ್ದಾರೆ. ಭಾರತ-ಪಾಕ್ ಸಂಬಂಧ ಉತ್ತಮವಾಗಿಲ್ಲದ ಕಾರಣ ಅಲ್ಲಿನ ಪ್ರಜೆಗಳಿಗೆ ದೀರ್ಘಾವಧಿ ವೀಸಾ ನೀಡುವುದಿಲ್ಲ. 30 ಹಾಗೂ 90 ದಿನದ ವೀಸಾ ನೀಡಲಾಗುತ್ತದೆ. ಮತ್ತೆ ವೀಸಾ ನವೀಕರಣ ಮಾಡಿಕೊಂಡು ಇವರು ಇರುತ್ತಾರೆ.

ಇಲ್ಲಿಗೆ ಬಂದು 5 ವರ್ಷವಾದ ನಂತರ ಕಾಯಂ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು. 30 ವರ್ಷಗಳಿಂದ ಇಲ್ಲಿಯೇ ಇದ್ದು, ಭಾರತೀಯ ಪೌರತ್ವ ಪಡೆದ ಪಾಕ್ ಮಹಿಳೆಯರೂ ಭಟ್ಕಳದಲ್ಲಿದ್ದಾರೆ.

English summary
Suspected terrorists wife sent back to Pakistan from Bhatkal, Uttara Kannada. Here is the interesting story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X