ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ ಜಿಲ್ಲೆಯಲ್ಲಿ ಹೋಳಿಗೆ ರಂಗೇರಿದೆ ಸುಗ್ಗಿ ಕುಣಿತ

|
Google Oneindia Kannada News

ಕಾರವಾರ, ಮಾರ್ಚ್ 7: ಹೋಳಿ ಹುಣ್ಣಿಮೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೋಳಿ ಹಬ್ಬದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಸುಗ್ಗಿಯ ಸೊಬಗು ಪ್ರಾರಂಭವಾಗಿದೆ. ಎಲ್ಲಿ ನೋಡಿದರೂ ಬಗೆ ಬಗೆಯ ವೇಷಧಾರಿಗಳು, ಕೋಲಾಟ ಗುಮಟೆಪಾಂಗಿನ ಸದ್ದು, ಸಡಗರ, ಸಂಭ್ರಮ ಕಾಣುತ್ತಿದೆ.

ಹೋಳಿ ಹುಣ್ಣಿಮೆ ಹತ್ತಿರ ಬರುತ್ತಿದೆಯೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಗ್ಗಿಯ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಜಿಲ್ಲೆಯಲ್ಲಿನ ಹಾಲಕ್ಕಿ, ಕೋಮಾರಪಂಥ, ಕರೆ ಒಕ್ಕಲಿಗ, ನಾಮಧಾರಿ, ಅಂಬಿಗ, ಆಗೇರ ಸೇರಿದಂತೆ ಅನೇಕ ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆ ಸುಗ್ಗಿ ಕುಣಿತವನ್ನು ಹೋಳಿ ಹುಣ್ಣಿಮೆ ಹಬ್ಬದ ಹಿನ್ನಲೆ ಪ್ರಾರಂಭಿಸುತ್ತಾರೆ.

ಕೊರೊನಾ ಎಫೆಕ್ಟ್: ಹೋಳಿ ಬಣ್ಣಗಳ ಬೆಲೆ ದುಬಾರಿ ಸಾಧ್ಯತೆಕೊರೊನಾ ಎಫೆಕ್ಟ್: ಹೋಳಿ ಬಣ್ಣಗಳ ಬೆಲೆ ದುಬಾರಿ ಸಾಧ್ಯತೆ

 ಹಬ್ಬಕ್ಕೆ ಏಳೆಂಟು ದಿನ ಕುಣಿತ ಆರಂಭ

ಹಬ್ಬಕ್ಕೆ ಏಳೆಂಟು ದಿನ ಕುಣಿತ ಆರಂಭ

ಹೋಳಿ ಹಬ್ಬ ಬರುವ ಏಳೆಂಟು ದಿನಗಳ ಮುನ್ನವೇ ಸುಗ್ಗಿ ಕುಣಿತವನ್ನು ಪ್ರಾರಂಭಿಸಲಾಗುತ್ತದೆ. ಕುಣಿತದ ತಂಡದ ಸದಸ್ಯರು ಊರೂರು ತಿರುಗಿ ತಮ್ಮ ಸಮಾಜದವರ ಮನೆಗೆ ತೆರಳಿ ಕುಣಿತವನ್ನು ಪ್ರದರ್ಶಿಸುತ್ತಾರೆ. ಈ ಬಾರಿ ಸಹ ಕಾರವಾರ ತಾಲೂಕಿನ ತೊಡುರು ಗ್ರಾಮದ ಹಾಲಕ್ಕಿ ಸಮುದಾಯದವರ ಸುಗ್ಗಿ ಕುಣಿತಕ್ಕೆ ಮಾ.3ರಿಂದ ಚಾಲನೆ ದೊರೆತಿದೆ.

 ರೋಗಗಳನ್ನು ತಡೆಯುತ್ತದೆ

ರೋಗಗಳನ್ನು ತಡೆಯುತ್ತದೆ

ತಾಲೂಕಿನ ತೊಡುರು ಗ್ರಾಮದ ಕರಿದೇವರು ಹಾಗೂ ಕರಿನಾಥನಿಗೆ ನವಮಿಯಂದು ಪೂಜೆ ಮಾಡಿ ಹೊರಟಿರುವ ಸುಗ್ಗಿ ಕುಣಿತದ ತಂಡದವರು, ಮನೆ ಮನೆಗೆ ತೆರಳಿ ತಮ್ಮ ಕಲೆಯನ್ನ ಪ್ರದರ್ಶಿಸುತ್ತಿದ್ದಾರೆ. ಹಾಲಕ್ಕಿ ಸಮಾಜದವರು ಹೋಳಿ ಹುಣ್ಣಿಮೆಗೂ ಏಳು ದಿನಗಳ ಮುಂಚೆ ಸುಗ್ಗಿ ಕುಣಿತ ಪ್ರಾರಂಭಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ತಮ್ಮ ಜನಾಂಗದವರು ನೆಲೆಸಿರುವ ಮನೆ ಮುಂದೆ ತೆರಳಿ ಸುಗ್ಗಿ ಕುಣಿತ ಮಾಡಿದರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ, ಯಾವ ರೋಗಗಳೂ ಮನೆಯವರಿಗೆ ಬರದೆ ತಡೆಯುತ್ತದೆ ಎನ್ನುವುದು ಹಾಲಕ್ಕಿಗರ ನಂಬಿಕೆ. ಈ ಹಿನ್ನೆಲೆಯಲ್ಲಿ ಕಳೆದ ಹಲವಾರು ವರ್ಷದಿಂದ ಸುಗ್ಗಿ ಕುಣಿತವನ್ನು ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಮಾಡುತ್ತಾ ಬರಲಾಗುತ್ತಿದೆ.

 ಕುಣಿತ ಮುಗಿಸುವವರೆಗೆ ವಾಪಸ್ ಇಲ್ಲ

ಕುಣಿತ ಮುಗಿಸುವವರೆಗೆ ವಾಪಸ್ ಇಲ್ಲ

ಈ ಸುಗ್ಗಿ ಕುಣಿತಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ ಪೇಟವನ್ನು ಕಟ್ಟಿ, ವೇಷ ಭೂಷಣ ಧರಿಸಿ ಸುಗ್ಗಿ ಕುಣಿಯುವುದು ಎಲ್ಲರ ಮನಸೆಳೆಯುತ್ತದೆ. ಇದರೊಂದಿಗೆ ಗಮಟೆ, ಜಾಗಟೆಯ ಸದ್ದು, ಶೆಹನಾಯ್ ಮೊದಲಾದ ವಾದ್ಯಗಳ ಹಿಮ್ಮೇಳ ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರಗು ನೀಡುತ್ತದೆ. ಒಮ್ಮೆ ವೇಷ ತೊಟ್ಟು ಹಣೆಗೆ ಗಂಧವನ್ನ ಇಟ್ಟುಕೊಂಡು ಹೊರಟರೆ ಸುಗ್ಗಿ ಕುಣಿತ ಮುಗಿಸುವ ದಿನದವರೆಗೂ ವಾಪಸ್ ಮನೆಗೆ ಬರುವ ಹಾಗಿಲ್ಲ.

 ಹಳ್ಳಿಹಳ್ಳಿಗಳ ಮನೆಯಂಗಳದಲ್ಲಿ ನೃತ್ಯ

ಹಳ್ಳಿಹಳ್ಳಿಗಳ ಮನೆಯಂಗಳದಲ್ಲಿ ನೃತ್ಯ

ಸಮಾಜದ ಮನೆಯವರ ಅಂಗಳದಲ್ಲಿ ಸುಗ್ಗಿ ಕುಣಿತ ಮಾಡಿದಾಗ ಅವರು ನೀಡುವ ಹಣ, ಊಟ ತಿಂಡಿ ಸ್ವೀಕರಿಸುವ ಪ್ರತೀತಿ ಇದೆ. ಸುಗ್ಗಿ ಕುಣಿತ ಪ್ರಾರಂಭಿಸಿರುವ ಹಾಲಕ್ಕಿ ಸಮಾಜದವರು ಈ ಬಾರಿ ತೊಡುರು ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ತೆರಳಿ ಮನೆಯಂಗಳದಲ್ಲಿ ನೃತ್ಯ ಮಾಡುತ್ತಾರೆ. ಇವರ ಜೊತೆ ಯುವಕರು, ಮಕ್ಕಳು, ವಯೋವೃದ್ಧರು ಸೇರಿದಂತೆ ಹಲವರು ಸುಗ್ಗಿ ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ. ಸುಗ್ಗಿಯನ್ನು ಕಟ್ಟಿಕೊಂಡಿರುವ ಈ ಹಾಲಕ್ಕಿ ಸಮಾಜದವರು ಹೋಳಿ ಹುಣ್ಣಿಮೆಯ ಬಳಿಕ ಸುಗ್ಗಿ ಮೇಳದಲ್ಲಿ ಬಳಸಿದ ತುರಾಯಿ, ಉಡುಗೆ ತೊಡುಗೆಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಮನೆಗಳಿಗೆ ತೆರಳುತ್ತಾರೆ.

English summary
There are only few days left for holi hunnime festival. On behalf of this, suggi kunitha has started in uttara kannada district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X