ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರಿದಾದ ಸೂಪಾ ಜಲಾಶಯ; ಮುಳುಗಿದ್ದ ಊರುಗಳು ಪ್ರತ್ಯಕ್ಷ

By ಉತ್ತರಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂ 15: ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ನೀರು ಬಳಕೆ ಮಾಡುತ್ತಿರುವ ಕಾರಣ ಸೂಪಾ ಜಲಾಶಯ ಬರಿದಾಗುತ್ತಿದೆ. ಪರಿಣಾಮ ನಾಲ್ಕು ದಶಕಗಳ ಹಿಂದೆ ಮುಳುಗಡೆಯಾಗಿದ್ದ ಊರಿಗೆ ಊರು ಇದೀಗ ಕೆಸರಿನ ಮಧ್ಯೆ ಗೋಚರವಾಗಿದ್ದು, ಸರ್ವಸ್ವವನ್ನೂ ತೊರೆದು ನಿರಾಶ್ರಿತರಾದವರಿಗೆ ತಮ್ಮ ಮನೆ, ಬಾವಿ, ದೇವಸ್ಥಾನದ ಕುರುಹುಗಳನ್ನೊಳಗೊಂಡ ದೃಶ್ಯಗಳು ಇದೀಗ ಭಾವುಕತೆಯಲ್ಲಿ ಮುಳುಗುವಂತೆ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯ್ಡ ತಾಲೂಕಿನ ಸುಪಾದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಸೂಪಾ, ಕೊಡಸಳ್ಳಿ, ಕದ್ರಾ ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ನೀರು ಬಳಕೆ ಮಾಡಿಕೊಳ್ಳುತ್ತಿದ್ದು ಪರಿಣಾಮ ಆರಂಭದಲ್ಲಿಯೇ ಇರುವ ಸೂಪಾ ಜಲಾಶಯದಿಂದ ಹೆಚ್ಚಿನ ನೀರನ್ನ ಬಿಡುಗಡೆ ಮಾಡಲಾಗುತ್ತಿದೆ. ಪರಿಣಾಮ‌ ಸೂಪಾ ಜಲಾಶಯದ ಹಿನ್ನೀರಿನ ಪ್ರದೇಶಗಳಲ್ಲಿ ನೀರು ಬರಿದಾಗುತ್ತಿದ್ದು, ಸುಮಾರು ನಾಲ್ಕು ದಶಕಗಳಿಂದ ಮುಳುಗಡೆಯಾಗಿದ್ದ ಊರುಗಳು ಗೋಚರವಾಗುತ್ತಿವೆ. ಮನೆಯ ಅವಶೇಷಗಳು, ಬಾವಿ, ಶಾಲೆ, ದೇವಸ್ಥಾನದ ಕುರುಹುಗಳು ಕಾಣಿಸತೊಡಗಿದ್ದು ಇದನ್ನು ಕಂಡ ಸ್ಥಳೀಯ ನಿವಾಸಿಗಳು ಭಾವುಕರಾಗುತ್ತಿದ್ದಾರೆ.

ನೆಲೆ‌ ಕಳೆದುಕೊಳ್ಳುವ ಆತಂಕದಲ್ಲಿ ಕಾರವಾರದ ಮೀನುಗಾರರು!ನೆಲೆ‌ ಕಳೆದುಕೊಳ್ಳುವ ಆತಂಕದಲ್ಲಿ ಕಾರವಾರದ ಮೀನುಗಾರರು!

ಹಿರಿ ಜೀವಿಗಳು ಭಾವುಕ

ಹಿರಿ ಜೀವಿಗಳು ಭಾವುಕ

ಮನೆಯ ಇಟ್ಟಂಗಿ ಗೋಡೆಗಳು ಈಗಲೂ ಕೂಡ ಹಾಗೆಯೇ ಇದೆ. ಕಲ್ಲಿನ ಬಾವಿ ಅಚ್ಚುಕಟ್ಟಾಗಿಯೇ ಇದೆ. ದೇವಾಲಯಗಳು ಮುರಿದುಬಿದ್ದಿದ್ದು, ದೇವರ ಮೂರ್ತಿಗಳ ಭಗ್ನ ಅವಶೇಷಗಳು ಅಲ್ಲಲ್ಲಿ ಗೋಚರವಾಗುತ್ತಿವೆ. ಇನ್ನು ಕೆಲವು ಭಾಗಗಳಲ್ಲಿ ಹೂಳು ತುಂಬಿಕೊಂಡಿದ್ದು ಯಾವ ಪ್ರದೇಶ ಎಂಬುದು ಇಲ್ಲಿ ವಾಸ ಮಾಡಿ ನಿರಾಶ್ರಿತರಾದವರಿಗೆ ಗುರುತು ಹಿಡಿಯಲು ಸಾಧ್ಯವಾಗದಂತಾಗಿದೆ.

ಸೂಪಾ ಜಲಾಶಯದ ನಿರ್ಮಾಣದ ಬಳಿಕ ಇದರ ಹಿನ್ನೀರಿನಲ್ಲಿ ಸುಮಾರು 47 ಹಳ್ಳಿಗಳು ಮುಳುಗಡೆಯಾಗಿದ್ದವು. ಇದೀಗ ಹಸನಗಾಂವ, ಟೀಡವಾಲಿ, ಬಿರೋಡೆ, ಮುಳಕುಂಡಿ, ಅಪೇಲಿ, ಕುಕರ್ಡೆ, ಪೆರ್ಲೆ, ಅಂಬೇಲಿ ಗ್ರಾಮಗಳು ಗೋಚರವಾಗುತ್ತಿವೆ. ಹೀಗೆ ಬರಿದಾದ ಪ್ರದೇಶವನ್ನು ನೋಡಲು ಸ್ಥಳೀಯರು ಸೇರಿದಂತೆ ಪ್ರವಾಸಿಗರು ಇದೀಗ ಸೂಪಾ ಹಿನ್ನೀರಿನ ಪ್ರದೇಶಗಳಿಗೆ ಆಗಮಿಸುತ್ತಿದ್ದಾರೆ. ಆಡಿ ಬೆಳೆದು ಬದುಕು ಕಟ್ಟಿಕೊಂಡ ಮನೆಯಂಗಳವನ್ನು ಕಂಡು ಹಿರಿ ಜೀವಿಗಳು ಭಾವುಕವಾಗುತ್ತಿವೆ.

ನಿರಾಶ್ರಿತರಾದವರಿಗೆ ದೊಡ್ಡ ನೆನಪು

ನಿರಾಶ್ರಿತರಾದವರಿಗೆ ದೊಡ್ಡ ನೆನಪು

ರಾಜ್ಯದಲ್ಲಿಯೇ ಅತಿ ದೊಡ್ಡ ಡ್ಯಾಮ್ ಗಳ ಪೈಕಿ ಒಂದಾದ ಸೂಪಾ ಜಲಾಶಯ 1990 ರಿಂದ ಈವರೆಗಿನ ಅವಧಿಯಲ್ಲಿ 2006 ರಲ್ಲಿ ಭರ್ತಿಯಾಗಿತ್ತು. ಬಳಿಕೆ 2019 ರಲ್ಲಿ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾದ ಕಾರಣ ಒಳ ಹರಿವು ಹೆಚ್ಚಾಗಿ ಆಗ ಮುನ್ನೆಚ್ಚರಿಕಾ ಕ್ರಮವಾಗಿ ಕೆಳಗಿನ ಜಲಾಶಯಗಳಿಗೆ ಹೆಚ್ಚಿನ ನೀರು ಹರಿಬಿಲಾಗಿತ್ತು. ಸದ್ಯ ಜಲಾಶಯದಲ್ಲಿ ನೀರಿನ ಮಟ್ಟ 518.49 ಮೀಟರ್ ಇದ್ದು, ಕಳೆದ ಬಾರಿ ಇದೇ ಸಮಯಕ್ಕೆ535.49 ಮೀ ತುಂಬಿತ್ತು. ಜಲಾಶಯ ನಿರ್ಮಾಣದ ನಂತರ 2003ರಲ್ಲಿ ನೀರಿನ ಸಂಗ್ರಹವು 506.80 ಮೀಟರ್‌ಗೆ ಇಳಿಕೆಯಾಗಿತ್ತು. ಇದು ಈವರೆಗಿನ ಅತಿ ಕಡಿಮೆ ಸಂಗ್ರಹವಾಗಿದೆ ಎನ್ನುತ್ತಾರೆ ಸೂಪಾ ಜಲಾಶಯದ ಅಧಿಕಾರಿಗಳು.

ಒಟ್ಟಾರೆ ಕಳೆದ ಹಲವು ದಶಕಗಳಿಂದ ಜಲಾಶಯದಲ್ಲಿ ಮುಳುಗಡೆಯಾಗಿದ್ದ ಊರುಗಳು ಇದೀಗ ಬರಿದಾದ ಜಲಾಶಯದಲ್ಲಿ ಮತ್ತೆ ಗೋಚರವಾಗಿರುವುದು ನಿರಾಶ್ರಿತರಾದ ಸ್ಥಳೀಯ ನಿವಾಸಿಗಳನ್ನು ಭಾವುಕತೆಯಲ್ಲಿ ತೇಲುವಂತೆ ಮಾಡಿದೆ.

ಮೈದುಂಬಲಿದೆ ಸೂಪಾ ಜಲಾಶಯ

ಮೈದುಂಬಲಿದೆ ಸೂಪಾ ಜಲಾಶಯ

ರಾಜ್ಯದ ಪ್ರಮುಖ ಆಣೆಕಟ್ಟೆಗಳಲ್ಲಿ ಒಂದಾದ, ರಾಜ್ಯದ 2ನೆ ಅತಿ ದೊಡ್ಡ ಆಣೆಕಟ್ಟು ಎಂದು ಹೆಸರುವಾಸಿಯಾದ ಜಿಲ್ಲೆಯ ಜೋಯಿಡಾ ತಾಲೂಕಿನ ಸುಪಾ ಜಲಾಶಯ ಕೆಲವೇ ದಿನಗಳಲ್ಲಿತುಂಬಲಿದ್ದು, ಜಿಲ್ಲೆಯ ಜನತೆ ಮೈದುಂಬಿ ಹೊರಚೆಲ್ಲುವ ಜಲಾಶಯದ ಸೊಬಗನ್ನು ಸವಿಯಲು ಕಾತರದಿಂದ ಕಾಯುತ್ತಿದ್ದಾರೆ.

ಜಲಾಶಯ ದಿನದಿಂದ ದಿನಕ್ಕೆ ತನ್ನ ನೀರು ಸಂಗ್ರಹಣಾ ಮಟ್ಟವನ್ನು ಮೈದುಂಬಿಕೊಳ್ಳುತ್ತಿದೆ. ಕೇವಲ 7 ಮೀಟರ ಬಾಕಿವಿರುವ ಸುಪಾ ಜಲಾಶೆಯ ಇಲ್ಲಿಯವರೆಗೆ ಕೇವಲ ಎರಡು ಬಾರಿ ಮಾತ್ರ ಪೂರ್ತಿ ತುಂಬಿ ಹೊರಗೆ ಧುಮ್ಮಿಕ್ಕಿದೆ. ಈ ಸಲ ತುಂಬಿದರೆ 3ನೆ ಸಲ ತುಂಬಿದಂತಾಗುತ್ತದೆ. 1994ರಲ್ಲಿ ಮೊದಲ ಬಾರಿಗೆ ತುಂಬಿ ಧುಮ್ಮಿಕ್ಕಿದ ಸಂದರ್ಭದಲ್ಲಿ ಜಲಾಶಯದ ರುದ್ರ ರಮಣೀಯ ದೃಶ್ಯವನ್ನು ದಿನನಿತ್ಯವೂ ಸಾವಿರಾರು ಜನ ಭೇಟಿ ನೀಡಿದ್ದರು. ಈ ಸಲವೂ ಜನ ತುಂಬಿ ದುಮ್ಮಿಕ್ಕುವ ಜಲಾಶಯ ನೋಡಲು ಜನರು ಕಾಯತೊಡಗಿದ್ದಾರೆ.

ನಂತರ 2005ರಲ್ಲಿ ಜಲಾಶಯ ಎರಡನೆಯ ಬಾರಿ ಭರ್ತಿಯಾಗಿ ದುಮ್ಮಿಕುವ ವೇಳಯಲ್ಲಿ ಮಳೆರಾಯ ಸ್ವಲ್ಪ ಕೈಕೊಟ್ಟದರಿಂದ ಜಲಾಶಯ ಭರ್ತಿಯಾಗಲಿಲ್ಲ. ವಿದ್ಯುತ್ ಉತ್ಪಾದನೆ ಹೆಚ್ಚಿನ ನೀರನ್ನು ಬಳಸಿಕೊಂಡಿದ್ದರಿಂದಲೂ ಜಲಾಶಯ ದುಮ್ಮಿಕ್ಕಲಿಕ್ಕೆ ಸಾಧ್ಯವಾಗಲಿಲ್ಲ ಎಂದು ಗಣೇಶಗುಡಿ ಕೆಪಿಸಿ ಮುಖ್ಯ ಅಭಿಯಂತರ ಶಂಕರ ದೇವನೂರ ಇವರು ದೂರವಾಣಿ ತಿಳಿಸಿದರು. ಈ ಸಲ ಜಲಾಶಯ ಭರ್ತಿಯಾಗಬಹುದಾದ ಅಶಾಭಾವವನ್ನು ವ್ಯಕ್ತಪಡಿಸಿದರು.

ಸೂರ್ಯಾಸ್ತ ಸ್ಥಳ ನೋಡಲು ಪ್ರವಾಸಿಗರ ಕಾತರ

ಸೂರ್ಯಾಸ್ತ ಸ್ಥಳ ನೋಡಲು ಪ್ರವಾಸಿಗರ ಕಾತರ

ನಾವು ಕಾಲದ ತಕ್ಕಂತೆ ಆಯಾ ಕಾಲದ ಸಂಪನ್ಮೂಲಗಳ ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ಆಗ ವಿದ್ಯುತ್ ಸೇರಿದಂತೆ ಎಲ್ಲಾ ಶಕ್ತಿಗಳು ಉಳಿತಾಯವನ್ನು ಮಾಡಿಕೊಳ್ಳಬಹುದಾಗಿದೆ. ಮಳೆಗಾಲದಲ್ಲಿ ಜಲಾಶಯದ ನೀರಿಗಿಂತ ಹೆಚ್ಚಾಗಿ ಬೇರೆ ಮೂಲಗಳಿಂದ ವಿದ್ಯುತ್ ಪಡೆಯಲು ಚಿಂತಿಸಲಾಗುವುದು. ಈಗ ಜಲಾಶಯದ ನೀರನ್ನು ಕಾಪಾಡಬಹುದು. ಬೇಸಿಗೆಯ ದಿನಗಳಲ್ಲಿ ವಿದ್ಯುತ್ ಉತ್ಪಾದನೆಗಾಗಿ ಬಳಸಿಕೊಳ್ಳಬಹುದಾಗಿದೆ ಇಂದು ಬೇಡಿಕೆ ಮತ್ತು ಉತ್ಪಾದನೆ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಜಲಾಶಯದ ಪ್ರತಿ ಹನಿ ನೀರು ವ್ಯಯವಾಗದಂತೆ ನೋಡಿಕೊಳ್ಳಲು ಗಮನ ನೀಡಲಾಗುತ್ತಿದೆ.

ದಾಂಡೇಲಿ, ಜೊಯಿಡಾ, ಅಥವಾ ಗಂಡೇಶ್ ಗುಡಿಗೆ ಭೇಟಿ ನೀಡುವ ಹಲವಾರು ಪ್ರವಾಸಿಗರು ಸೂಪಾ ಅಣೆಕಟ್ಟು ಹಿನ್ನೀರಿನ ಸೂರ್ಯಾಸ್ತದ ಸ್ಥಳವನ್ನು ಬಯಸುತ್ತಿದ್ದಾರೆ.

ಹಗಲಿನಲ್ಲಿ ಪ್ರವಾಸಿಗರು ಉಲವಿ ಮತ್ತು ಗಣೇಶಗುಡಿಯಲ್ಲಿ ವಾಟರ್ ಸ್ಪೋರ್ಟ್ ನಲ್ಲಿ ಕಾಲ ಕಳೆದು ಸಂಜೆ ಅವರು ಸೂರ್ಯಾಸ್ತದ ಸ್ಥಳಕ್ಕೆ ಭೇಟಿ ನೀಡಲು ಬಪೆಲಿ ಕ್ರಾಸ್‌ನಲ್ಲಿ ಸೇರುತ್ತಿದ್ದರು.

ಆದರೆ ಸದ್ಯ ನಿರ್ಬಂಧ ಹೇರಿರುವ ಕಾರಣ ಹೋಮ್ ಸ್ಟೇ ಮಾಲೀಕರು ಮಾಜಿ ಸಚಿವ ಆರ್ ವಿ ದೇಶಪಾಂಡೆ ಅವರನ್ನು ಭೇಟಿ ಮಾಡಿ ಮಧ್ಯ ಪ್ರವೇಶಿಸುವಂತೆ ಕೋರಲು ನಿರ್ಧರಿಸಿದ್ದಾರೆ.

Recommended Video

China Nupur Sharma ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ | Oneindia Kannada

English summary
Supa Dam the biggest dam built across the Kali River has gone dry this year because of excess use for power generation. As the backwater dry up, several villages appear after several decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X