ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉ.ಕದಲ್ಲಿ ವಿಕಲಚೇತನರಿಗೆ ನೀಲಿ ಬಣ್ಣದ ಪ್ರತ್ಯೇಕ ಮತಗಟ್ಟೆ ಸಜ್ಜು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಮೇ 11: ಪ್ರಸಕ್ತ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಚುನಾವಣೆಗಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,438 ಮತಗಟ್ಟೆಗಳಿದ್ದು, ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ರಚಿಸಿದ 01 ಹಾಗೂ ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ರಚಿಸಿದ 03. ಒಟ್ಟು 04 ಹೆಚ್ಚುವರಿ ಮತಗಟ್ಟೆಗಳಲ್ಲಿ ಮೇ 12 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಗ್ರಾಮೀಣ ಮತಗಟ್ಟೆಗಳಲ್ಲಿ ಗರಿಷ್ಠ 1300 ಮತ್ತು ನಗರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಗರಿಷ್ಠ 1400 ಕ್ಕೆ ಮತದಾರರ ಮಿತಿ ನಿಗದಿಗೊಳಿಸಲಾಗಿದೆ ಮತ್ತು ಜಿಲ್ಲೆಯಲ್ಲಿ ಒಟ್ಟು 11,45,681 ಮತದಾರರಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ವಿಶೇಷತೆಗಳುಕರ್ನಾಟಕ ವಿಧಾನಸಭೆ ಚುನಾವಣೆಯ ವಿಶೇಷತೆಗಳು

ಪ್ರತಿ ಮತಗಟ್ಟೆಗೆ ತಲಾ 2ರಂತೆ ಪೋಸ್ಟರುಗಳನ್ನು ಅಂಟಿಸಲಾಗಿದೆ. ಈ ಪೋಸ್ಟರುಗಳಲ್ಲಿ ಚುನಾವಣೆಗೆ ಸ್ಫರ್ಧಿಸಿದ ಅಭ್ಯರ್ಥಿಗಳ ಮಾಹಿತಿ, ಮತದಾನ ಕೇಂದ್ರದ ವ್ಯಾಪ್ತಿ, ಚುನಾವಣೆಗೆ ಸಂಬಂಧಿಸಿದ ಪ್ರಮುಖ ಅಧಿಕಾರಿಗಳ ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿ ಒಳಗೊಂಡಿವೆ.

 2 ದೋಣಿ ಬಾಡಿಗೆಗೆ

2 ದೋಣಿ ಬಾಡಿಗೆಗೆ

ಪ್ರತಿಯೊಂದೂ ಮತದಾನ ಕೇಂದ್ರದ ಆವರಣದೊಳಗೆ ಮತದಾರರ ಅನುಕೂಲಕ್ಕಾಗಿ ವೋಟರ್ ಅಸಿಸ್ಟಂಟ್ಸ್ ಬೂತ್ ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿರುವ ಒಟ್ಟು 913 ಸೇವಾ ಮತದಾರರಿಗೆ ವಿದ್ಯುನ್ಮಾನ ರವಾನಿತ ಅಂಚೆ ಮತಪತ್ರಗಳ ವ್ಯವಸ್ಥೆಯ ಮೂಲಕ ಈಗಾಗಲೇ ಇ- ಮತಪತ್ರಗಳನ್ನು ರವಾನಿಸಲಾಗಿದೆ.

ಒಟ್ಟು 175 ಸಾರಿಗೆ ಬಸ್ ಮತ್ತು 132 ಮ್ಯಾಕ್ಸಿ ಕ್ಯಾಬ್ ಗಳನ್ನು ಮತಗಟ್ಟೆ ಅಧಿಕಾರಿಗಳ ಮತ್ತು ಇವಿಎಂ ಗಳ ಸಾಗಾಟಕ್ಕೆ ಉಪಯೋಗಿಸಲಾಗುತ್ತಿದೆ. ಅದೇ ರೀತಿ ಮಾದರಿ ನೀತಿ ಸಂಹಿತೆ ಅನುಷ್ಠಾನ ಮತ್ತು ಚುನಾವಣಾ ವೆಚ್ಚ ಉಸ್ತುವಾರಿ ತಂಡಗಳ ಸಂಚಾರಕ್ಕಾಗಿ 176 ಜೀಪುಗಳನ್ನು ಅಧಿಗ್ರಹಿಸಲಾಗಿದೆ.

ಜಿಲ್ಲೆಯ 2 ಮತದಾನ ಕೇಂದ್ರಗಳು (ದೇವಕಾರ ಮತ್ತು ಐಗಳ ಕೂರ್ವೆ) ನಡುಗಡ್ಡೆಯಲ್ಲಿ ನೆಲೆಸಿರುವುದರಿಂದ 2 ದೋಣಿಗಳನ್ನು ಸಹ ಬಾಡಿಗೆಗೆ ಪಡೆಯಲಾಗಿದೆ.

ಜಿಲ್ಲೆಯ 92 ಮತದಾನ ಕೇಂದ್ರಗಳು ಯಾವುದೇ ರೀತಿಯ ದೂರವಾಣಿ/ಮೊಬೈಲ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ನೆಲೆಸಿವೆ. ಈ ಪೈಕಿ ಸಾಧ್ಯವಿದ್ದೆಡೆ ವೈರ್ ಲೆಸ್ ಸಂಪರ್ಕ ಬಳಸಲು ಕ್ರಮ ಜರುಗಿಸಿದ್ದು, ಉಳಿದೆಡೆ ತಲಾ 2 ರನ್ನರ್ ಗಳನ್ನು ನೇಮಿಸಲು ಉದ್ದೇಶಿಸಲಾಗಿದೆ. ಈ ಪೈಕಿ ಓರ್ವರನ್ನು ಮತಗಟ್ಟೆ ಕೇಂದ್ರದ ಆವರಣದಲ್ಲಿ ಮತ್ತು ಇನ್ನೋರ್ವ ರನ್ನರ್ ಸಮೀಪದ ದೂರವಾಣಿ ಸಂಪರ್ಕ ಇರುವ ಸ್ಥಳದಲ್ಲಿ ಇದ್ದು ನಿರಂತರ ಸಂಪರ್ಕದಲ್ಲಿರುವರು.

 ಅಧಿಕಾರಿಗಳ ತಂಡ ರಚನೆ

ಅಧಿಕಾರಿಗಳ ತಂಡ ರಚನೆ

ಪ್ರಸ್ತುತ ಚುನಾವಣೆಯನ್ನು ಸುಸೂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಪ್ರತಿಯೊಂದೂ ವಿಧಾನ ಸಭಾ ಕ್ಷೇತ್ರಕ್ಕೆ ತಲಾ 1 ವೀಕ್ಷಕರು, ಪ್ರತಿ 2 ವಿಧಾನ ಸಭಾ ಕ್ಷೇತ್ರಕ್ಕೆ ತಲಾ ಒಬ್ಬ ವೆಚ್ಚ ವೀಕ್ಷಕರು ಮತ್ತು ಜಿಲ್ಲೆಗೆ ಒಬ್ಬ ಪೋಲೀಸ್ ವೀಕ್ಷಕರನ್ನು ಭಾರತ ಚುನಾವಣಾ ಆಯೋಗ ನಿಯೋಜಿಸಿದೆ. ಸದರಿ ವೀಕ್ಷಕರು ಈಗಾಗಲೇ ಜಿಲ್ಲೆಗೆ ಆಗಮಿಸಿರುವರು.

ಜೆಲ್ಲೆಯಲ್ಲಿ 7 ಸಹಾಯಕ ವೆಚ್ಚ ವೀಕ್ಷಕರು ಮತ್ತು 238 ಮೈಕ್ರೋ ಆಬ್ಸರ್ ವರ್ ಗಳನ್ನು ನೇಮಿಸಲಾಗಿದೆ. ಅದರಂತೆ 145 ಸೆಕ್ಟರ್ ಅಧಿಕಾರಿಗಳ ತಂಡವನ್ನು, 39 ಫ್ಲಯಿಂಗ್ ಸ್ಕ್ವಾಡ್, 30 ಚೆಕ್ ಪೋಸ್ಟಗಳಿಗೆ ಒಟ್ಟು 180 ಎಸ್‍ಎಸ್ ಟಿ ತಂಡವನ್ನು ಹಾಗು ತಲಾ 7 ಅಕೌಂಟಿಂಗ್ ಟೀಮ್ & ವಿವಿಟಿ ಮತ್ತು 26 ವಿಎಸ್ ಟಿ ತಂಡಗಳನ್ನು ರಚಿಸಲಾಗಿದೆ.

18 ಕೇಂದ್ರ ಅರೆ ಸೈನಿಕ ಪಡೆಗಳ ತುಕಡಿಗಳನ್ನು ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 41 ಕ್ರಿಟಿಕಲ್ ಹಾಗೂ 33 ವಲ್ನರಬಲ್ ಮತಗಟ್ಟೆಗಳು ಇರುತ್ತವೆ. ಈ ಹೊರತು ಚುನಾವಣಾ ಆಯೋಗವು ನಿರ್ಧಿಷ್ಟ ಪಡಿಸಿದ ಮಾನದಂಡಗಳ ಅನ್ವಯ ಶೇ. 20 ಮಿತಿ ಪೂರೈಸಲು ಆರಕ್ಷಕ ಇಲಾಖೆ 208 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಪರಿಗಣಿಸಲಾಗಿದೆ.

ಹೀಗೆ ಗುರುತಿಸಿದ ಒಟ್ಟೂ 282 ಮತಗಟ್ಟೆಗಳಿಗೆ ಕೇಂದ್ರ ಅರೆ ಸೈನಿಕ ಪಡೆಯ 1/2 ಸೆಕ್ಷನ್ ಗಳನ್ನು ನಿಯೋಜಿಸಲು ಯೋಜನೆ ಮಾಡಲಾಗಿದೆ.

 ವಿಕಲಚೇತನ ಅಧಿಕಾರಿಗಳಿಗೆ ಪ್ರಾಶಸ್ತ್ಯ

ವಿಕಲಚೇತನ ಅಧಿಕಾರಿಗಳಿಗೆ ಪ್ರಾಶಸ್ತ್ಯ

ಪ್ರಸಕ್ತ ವಿಧಾನಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ವಿಕಲಚೇತರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲು ವಿಕಲಚೇತನರಿಗೆ ನೀಲಿ ಬಣ್ಣದ ಮತ್ತು ಮಹಿಳೆಯರಿಗೆ ಗುಲಾಬಿ ಬಣ್ಣದ ಪ್ರತ್ಯೇಕ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.

ಜಿಲ್ಲೆಯಲ್ಲಿ 13680 ವಿಕಲ ಚೇತನ ಮತದಾರರನ್ನು ಗುರುತಿಸಲಾಗಿದೆ. ಎಲ್ಲಾ 6 ವಿಧಾನಸಭಾ ಕ್ಷೇತ್ರದಲ್ಲಿ ವಿಕಲ ಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಒಂದು ಮತಗಟ್ಟೆಯನ್ನು ಮಾದರಿ ಮತಗಟ್ಟೆಯನ್ನಾಗಿ ಮಾಡಲಾಗಿದೆ. ಇಂತಹ ಮಾದರಿ ಮತಗಟ್ಟೆಗಳಿಗೆ ವಿಕಲಚೇತನ ಅಧಿಕಾರಿಗಳನ್ನು ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಿಸಲು ಪ್ರಾಶಸ್ತ್ಯ ನೀಡಲಾಗಿದೆ.

 ಅಂಧರಿಗೆ ಬ್ರೈಲ್ ಲಿಪಿ ಸೌಲಭ್ಯ

ಅಂಧರಿಗೆ ಬ್ರೈಲ್ ಲಿಪಿ ಸೌಲಭ್ಯ

ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ 2 ರಂತೆ 'ಸಖಿ" ಗುಲಾಬಿ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳನ್ನು ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇದಕ್ಕಾಗಿ ಹಳಿಯಾಳ ವಿಧಾಸಭಾ ಕ್ಷೇತ್ರದಲ್ಲಿ ಜೋಯಿಡಾ ಮತ್ತು ಹಳಿಯಾಳದಲ್ಲಿ ತಲಾ 1 ರಂತೆ, ಕಾರವಾರ ಕ್ಷೇತ್ರದಲ್ಲಿ ಕಾರವಾರ ಮತ್ತು ಸದಾಶಿವಗಡದಲ್ಲಿ ತಲಾ 1.

ಕುಮಟಾ ಕ್ಷೇತ್ರದಲ್ಲಿ ಮಣಕಿ ಮತ್ತು ಗುಂದಾ ಗ್ರಾಮಗಳಲ್ಲಿ ತಲಾ 1 ಭಟ್ಕಳ ಕ್ಷೇತ್ರದಲ್ಲಿ ವೆಂಕಟಪುರ ಮತ್ತು ಭಟ್ಕಳದಲ್ಲಿ ತಲಾ 1 ಶಿರಸಿ ಕ್ಷೇತ್ರದಲ್ಲಿ ಸಿದ್ದಾಪುರ (ಕೊಂಡ್ಲಿ) ಮತ್ತು ಶಿರಸಿಯಲ್ಲಿ ತಲಾ 1, ಯಲ್ಲಾಪುರ ಕ್ಷೇತ್ರದಲ್ಲಿ ಸಬಗೇರಿ ಗ್ರಾಮ ಮತ್ತು ಯಲ್ಲಾಪುರದಲ್ಲಿ ತಲಾ 1 ರಂತೆ ಒಟ್ಟು 12 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಈ ಮತಗಟ್ಟೆಗಳಿಗೆ ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಧರಿಗಾಗಿ ಬ್ರೈಲ್ ಲಿಪಿಯ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ಮತ್ತು ರಾಂಪ್ ಸೌಲಭ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ ಸಹ ಕಲ್ಪಿಸಲಾಗುತ್ತಿದೆ.

English summary
Karnataka assembly elections 2018: All six assembly constituencies in Uttara Kannada district have been prepared for polls.There are 1,438 polling stations in the district. Separate Blue booth for disability people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X