ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ನೇಣಿಗೆ ಶರಣು

|
Google Oneindia Kannada News

ಕಾರವಾರ, ಜೂ.13: ಪಿಯುಸಿ ಅಂತಿಮ ವರ್ಷದ ಪರೀಕ್ಷೆ ರದ್ದಾದ ಕಾರಣದಿಂದಾಗಿ ಮನನೊಂದು ವಿದ್ಯಾರ್ಥಿನಿಯೋರ್ವಳು ನೇಣಿಗೆ ಶರಣಾದ ಘಟನೆ ಶಿರಸಿಯ ಯಡಳ್ಳಿಯಲ್ಲಿ ನಡೆದಿದೆ.

ಧನ್ಯ (18) ಪರೀಕ್ಷೆ ರದ್ದಾದ ಹಿನ್ನಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಟ್ಯೂಷನ್‌ನಿಂದ ಬರುತ್ತಿದ್ದಾಗ ಅಪಹರಿಸಿ ಸಾಮೂಹಿಕ ಅತ್ಯಾಚಾರ: ಬಾಲಕಿ ಆತ್ಮಹತ್ಯೆಟ್ಯೂಷನ್‌ನಿಂದ ಬರುತ್ತಿದ್ದಾಗ ಅಪಹರಿಸಿ ಸಾಮೂಹಿಕ ಅತ್ಯಾಚಾರ: ಬಾಲಕಿ ಆತ್ಮಹತ್ಯೆ

ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಧನ್ಯ ಶಿರಸಿಯ ಮಾರಿಕಾಂಬಾ ಕಾಲೇಜಿನಲ್ಲಿ ದ್ವಿತೀಯ ಪಿ.ಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತಿದ್ದಳು.

Second PUC exam cancel: student commits suicide

ವಿದ್ಯಾರ್ಥಿನಿ ಧನ್ಯ ತಾನು ಶಾಲೆಗೆ ಪ್ರಥಮ ರ್‍ಯಾಂಕ್‌ ಬರಬೇಕು ಎಂಬ ಕನಸನ್ನು ಹೊತ್ತು ಪರೀಕ್ಷೆಗಾಗಿ ಅಧ್ಯಯನ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಆದರೆ ಕೊರೊನಾ ಕಾರಣದಿಂದಾಗಿ ಪರೀಕ್ಷೆಗಳನ್ನು ಸರ್ಕಾರ ರದ್ದು ಮಾಡಿದೆ. ಹಾಗೆಯೇ ಪ್ರಥಮ ಪಿಯುಸಿ ಅಂಕದ ಆಧಾರದಲ್ಲಿ ದ್ವಿತೀಯ ಪಿಯುಸಿ ಅಂಕ ನೀಡಲು ಸರ್ಕಾರ ನಿರ್ಧರಿಸಿದೆ.

ಇದರಿಂದಾಗಿ ತಾನು ವರ್ಷ ಪೂರ್ತಿ ಓದಿದ್ದು ವ್ಯರ್ಥವಾಯಿತು ಎಂದು ಮನನೊಂದು ಹಾಗೂ ಪ್ರಥಮ ಪಿಯುಸಿ ಅಂಕದ ಆಧಾರದಲ್ಲಿ ದ್ವಿತೀಯ ಪಿಯುಸಿ ಅಂಕ ದೊರೆಯಲಿದೆ ಚಿಂತೆಗೆ ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಈ ಬಗ್ಗೆ ಶಿರಸಿ ಗ್ರಾಮಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recommended Video

ಕೊರೊನಾದಿಂದ ಬಚಾವ್ ಆಗಲು 5 ಪವರ್ ಫುಲ್ ಸೂತ್ರಗಳನ್ನು ಹೇಳಿದ Puneeth | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Second PUC exam cancel: student from karwar commits suicide by hanging herself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X