ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿಗ್ 29ಕೆ ವಿಮಾನ ಪತನ; ಪೈಲಟ್ ಗಾಗಿ ತೀವ್ರ ಶೋಧ ಕಾರ್ಯ

|
Google Oneindia Kannada News

ಕಾರವಾರ, ನವೆಂಬರ್ 28: ಮಿಗ್-29ಕೆ ತರಬೇತಿ ವಿಮಾನ ಅರಬ್ಬೀ ಸಮುದ್ರದಲ್ಲಿ ಗುರುವಾರ ನ.26ರ ಸಂಜೆ ಪತನಗೊಂಡಿದ್ದು, ಓರ್ವ ಪೈಲಟ್ ಪಾರಾಗಿ ಮತ್ತೊರ್ವ ಪೈಲಟ್ ನಾಪತ್ತೆಯಾಗಿದ್ದ ಸಂಗತಿ ನಡೆದಿತ್ತು. ಕಣ್ಮರೆಯಾಗಿರುವ ಆ ಪೈಲಟ್‌ಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿರುವುದಾಗಿ ಭಾರತೀಯ ನೌಕಾಪಡೆ ತಿಳಿಸಿದೆ. ಘಟನೆ ಎರಡು ದಿನಗಳು ಕಳೆದರೂ ಪೈಲಟ್ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕಳೆದ 12 ತಿಂಗಳಲ್ಲಿ ಮಿಗ್ 29ಕೆ ಪತನಕ್ಕೀಡಾದ ಮೂರನೇ ಪ್ರಕರಣ ಇದಾಗಿದೆ. ಈ ಘಟನೆ ಗುರುವಾರ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಸಂಭವಿಸಿದೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಲಾಗಿದೆ.

ಭಾರತೀಯ ನೌಕಾ ಪಡೆಯ ಮಿಗ್-29ಕೆ ತರಬೇತಿ ವಿಮಾನ ಪತನಭಾರತೀಯ ನೌಕಾ ಪಡೆಯ ಮಿಗ್-29ಕೆ ತರಬೇತಿ ವಿಮಾನ ಪತನ

ಮಿಗ್-29ಕೆ ತರಬೇತಿ ಕಾರ್ಯಾಚರಣೆ ವೇಳೆ ಪತನಗೊಂಡಿದ್ದು, ಎರಡನೇ ಪೈಲಟ್ ನಿಶಾಂತ್ ಸಿಂಗ್ ಕಣ್ಮರೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಘಟನೆ ಹೇಗೆ ಸಂಭವಿಸಿದೆ ಎಂಬ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ವಿಮಾನದಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಪರಿಣಾಮ ಅವಘಡ ಸಂಭವಿಸಿದೆ ಎಂಬುದನ್ನು ಪ್ರಾಥಮಿಕ ಹಂತದ ತನಿಖೆಯಲ್ಲಿ ವಾಯುಪಡೆ ಸ್ಪಷ್ಟಪಡಿಸಿದೆ.

Searching Operation For Missing Pilot In Mig 29 Aircraft Continues

Recommended Video

Hardik Pandya ಕೇವಲ ಬ್ಯಾಟ್‌ನಿಂದಲೇ ಪಂದ್ಯ ಗೆಲ್ಲಿಸ ಬಲ್ಲರು | Oneindia Kannada

ಮೇ 8ರಂದು ಪಂಜಾಬ್ ನ ಜಲಂಧರ್ ನಲ್ಲಿಯೂ ಮಿಗ್-29 ಪತನಗೊಂಡಿತ್ತು. ಭಾರತೀಯ ನೌಕಾಪಡೆಯಲ್ಲಿ 40ಕ್ಕೂ ಅಧಿಕ ಮಿಗ್-29 ಯುದ್ಧ ವಿಮಾನಗಳಿದ್ದು, ಇವುಗಳು ಗೋವಾ ಹಾಗೂ ಐಎನ್ ‌ಎಸ್ ವಿಕ್ರಮಾದಿತ್ಯದ ಮೂಲಕ ಕಾರ್ಯಾಚರಿಸುತ್ತಿವೆ.

English summary
Indian navy informed that the searching operation for missing pilot in mig 29 aircraft continues,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X